News Karnataka Kannada
Thursday, April 25 2024
ಬೀದರ್

ಬೀದರ್: ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್

Bidar: MLA Bandeppa Khashempur inaugurates waste disposal plant
Photo Credit : News Kannada

ಬೀದರ್ : ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಪಲಾಪೂರ ಎ ಗ್ರಾಮದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಸುಮಾರು 17 ಲಕ್ಷ ರೂ. ಜಿಲ್ಲಾ ಪಂಚಾಯಿತಿ  ಫಂಡ್ . 3.40 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾದ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕವನ್ನು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ನಾನು ಉದ್ಘಾಟನೆ ಮಾಡುತ್ತಿರುವ ಮೊದಲನೆಯ ತ್ಯಾಜ್ಯ ವಿಲೇವಾರಿ ಘಟಕ ಇದಾಗಿದೆ. ಇದು ಉತ್ತಮ ಕಾರ್ಯವಾಗಿದೆ. ಪಂಚಾಯತಿಗೆ ಸಂಬಂಧಿಸಿದ ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಾದವರು ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮತ್ತು ಮಾಹಿತಿ ನೀಡುವ ಕೆಲಸ ಮಾಡಬೇಕಾಗಿದೆ ಎಂದರು.

ಬಹಳ ಅಚ್ಚುಕಟ್ಟಾಗಿ ತ್ಯಾಜ್ಯ ವಿಲೇವಾರಿ ಘಟಕ ಮಾಡಲಾಗಿದೆ.  ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲರೂ ಕೆಲಸ ಮಾಡಬೇಕಾಗಿರುತ್ತದೆ. ಗ್ರಾಮೀಣ ಭಾಗದ ಅಧಿಕಾರಿಗಳು ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ, ಮಾಹಿತಿ ನೀಡುವ ಕೆಲಸ ಮಾಡಬೇಕಾಗುತ್ತದೆ. ನಿರ್ಮಾಣ ಮಾಡಿರುವುದು ಮೊದಲ ಹಂತವಾಗಿದೆ. ಅದನ್ನು ವಿಲೇವಾರಿ ಮಾಡುವುದು ಅತಿಮುಖ್ಯ ಕೆಲಸವಾಗಿರುತ್ತದೆ.

ಮಾದರಿ ಪಂಚಾಯತಿ ಮಾಡುವ ನಿಟ್ಟಿನಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಹೆಚ್ಚಿನ ಗಮನಹರಿಸಬೇಕು. ಇದನ್ನು ಮಾದರಿ ಘಟಕವನ್ನಾಗಿ ಮಾಡುವ ಕೆಲಸ ನಿಮ್ಮಂದ ಆಗಲಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಅಧಿಕಾರಿಗಳಿಗೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರು.

ಶಾಸಕ ಬಂಡೆಪ್ಪ ಖಾಶೆಂಪುರ್  ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ. ನಾವು ಹಮ್ಮಿಕೊಂಡ ಯಾವ ಕಾರ್ಯಕ್ರಮಗಳಿಗೂ ಬಾರದೇ ತಪ್ಪಿಸಿಕೊಳ್ಳುವುದಿಲ್ಲ.

ಈಗ ನಿರ್ಮಿಸಲಾದ ತ್ಯಾಜ್ಯ ವಿಲೇವಾರಿ ಘಟಕವನ್ನು ಅವರು ಉದ್ಘಾಟಿಸಿರುವುದು ಸಂತಸದ ವಿಷಯವಾಗಿದೆ.

ಈ ತ್ಯಾಜ್ಯ ವಿಲೇವಾರಿ ಘಟಕವನ್ನು ಸದುಪಯೋಗ ಪಡೆಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಗ್ರಾಮದ ಮುಖಂಡ ಹಣುಮಂತರಾವ್ ಮೈಲಾರಿ  ಹೇಳಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಈಶ್ವರಿ ಹಣುಂಮತರಾವ್ ಮೈಲಾರಿ, ಉಪಾಧ್ಯಕ್ಷೆ ಅರ್ಚನಾ ಮೇತ್ರೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಲಮಣಿ, ಜೆಇ ಸಂಜಯ್ ಪಾಟೀಲ್, ಮುಖಂಡರಾದ ಹಣುಮಂತರಾವ್ ಮೈಲಾರಿ, ಕಾಶಿನಾಥ್, ಶಿವಕುಮಾರ್ ಕೋಳಾರೆ, ಶಿವಕುಮಾರ್ ಬಿರ್ಗೆ, ಸತೀಶ್ ಸಿಖೇನಪೂರ್, ಬಸವರಾಜ ಮೊಲ್ಗೆ, ಸಂಜುಕುಮಾರ್ ಮಾಶೆಟ್ಟಿ, ಅಮೃತರಾವ್ ಮಾಶೆಟ್ಟಿ, ಗಂಗಾಧರ, ಮಹಮ್ಮದ್, ವಿಶ್ವನಾಥ ಪಾಟೀಲ್, ಚನ್ನಬಸವ, ವಿವೇಕಾನಂದ ಮುರ್ಗೆ, ಮಹಮ್ಮದ್ ಸೈಯದ್, ಭಗವಂತ ಚಾಂಬಾಳೆ ಸೇರಿದಂತೆ ಅಧಿಕಾರಿಗಳು, ಮುಖಂಡರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು