News Karnataka Kannada
Friday, April 19 2024
Cricket
ವಿಶೇಷ

ಕರಾವಳಿಗರ ಮನಗೆದ್ದ ಮಂಡಕ್ಕಿ ಮಾರಾಟದ ಲಕ್ಷ್ಮೀ ದೇವಮ್ಮ

"Lakshmi Devamma", a housewife who sells mandakki and fills her stomach
Photo Credit : By Author

ಬಂಟ್ವಾಳ:  “ಮಂಡಕ್ಕಿ ಬೇಕಾ.. ಮಂಡಕ್ಕೀ…” ಎನ್ನುತ್ತ ತಲೆಮೇಲೆ ಮಂಡಕ್ಕಿ( ಕುರ್ಲರಿ)ಯ ಮೂಟೆ ಹೊತ್ತುಕೊಂಡು ಊರೂರು ಸುತ್ತಿ ಹೊಟ್ಟೆತುಂಬಿಸುತ್ತಿರುವ ಈ ಗೃಹಿಣಿ ಸಾಮಾನ್ಯ ಮಹಿಳೆಯಲ್ಲ…  ಒಂದೂವರೆ ಸಾವಿರ ಮತದಾರರನ್ನೊಳಗೊಂಡ ಗ್ರಾಮಪಂಚಾಯತ್ ಸದಸ್ಯೆಯೂ ಹೌದು.. !

ಇವರ ಹೆಸರು ಲಕ್ಷ್ಮೀ ದೇವಮ್ಮ.  ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡಳ್ಳಿ ಮೂಲದವರಾಗಿರುವ ಇವರು ಕೋಟಗಲ್ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಯೆಯಾಗಿದ್ದಾರೆ.

17ವರ್ಷಗಳಿಂದ ಬಿ.ಸಿ.ರೋಡಿನಲ್ಲಿ ವಾಸ್ತವ್ಯ: ಕಳೆದ 17 ವರ್ಷಗಳಿಂದ ಬಿ.ಸಿ.ರೋಡಿನಲ್ಲಿ ವಾಸ್ತವ್ಯವಿರುವ ಇವರ ವಾಸ್ತವ್ಯದ ದಾಖಲೆಗಳೆಲ್ಲಾ ಚಿಕ್ಕಬಳ್ಳಾಪುರದಲ್ಲೇ ಇದೆ.  ಇದೇ ಉದ್ಯೋಗ ನಿರ್ವಹಿಸುತ್ತಿರುವ ಇವರ ತಂಗಿ,ಭಾವ ಹಾಗೂ ಗಂಡ ಹನುಮಂತಪ್ಪ ಅವರು ತಿಂಗಳಿಗೊಮ್ಮೆ ಅಥವಾ ಬೆಂಗಳೂರಿನಿಂದ ಪತ್ನಿಗೆ ಮಾರಾಟಕ್ಕಾಗಿ ಮಂಡಕ್ಕಿ ತಂದುಕೊಟ್ಟು  ಹೋಗುತ್ತಾರೆ. ಇವರ ಸಂಬಂಧಿಕರು ಕೂಡ ಬಿ.ಸಿ.ರೋಡಿಗೆ ಸಮೀಪದ ತುಂಬೆ ಪರಿಸರದಲ್ಲಿ ವಾಸವಿದ್ದು,ಅವರು ಮಂಡಕ್ಕಿ ಮಾರಾಟ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದಾರೆ.
ಗ್ರಾ.ಪಂ.ಸದಸ್ಯೆ ಲಕ್ಷೀ ದೇವಮ್ಮ ದಂಪತಿಗೆ ಒರ್ವ ಮಗನು ಇದ್ದು,ಅತ ಸದ್ಯ ಪ್ರಥಮ ವರ್ಷದ ಪದವಿ ತರಗತಿಯಲ್ಲಿ ಊರಿನಲ್ಲೇ ಓದುತ್ತಿದ್ದಾನೆ.

ಸಾಮಾನ್ಯ ಸಭೆಗೆ ಹಾಜರು:  ತಿಂಗಳು‌ಪೂರ್ತಿ ಮಂಡಕ್ಕಿ‌ಮಾರಾಟ ಮಾಡುವ ಲಕ್ಷ್ಮೀ ದೇವಮ್ಮ, ಗ್ರಾ.ಪಂ.ನಲ್ಲಿ ಪ್ರತಿ ತಿಂಗಳ ನಡೆಯುವ ಸಾಮಾನ್ಯ ಸಭೆಗೆ ತಪ್ಪದೆ ಹಾಜರಾಗುತ್ತಾರೆ.

ತನ್ನ ವಾಡ್೯ ನ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳುತ್ತಿದ್ದಾರೆ. ಕೊರಮಚಟ್ಟಿ ಸಮುದಾಯಕ್ಕೆ ಸೇರಿದ ಇವರು ಕೋಟಗಲ್ ಗ್ರಾ.ಪಂಗೆ ಪ.ಜಾತಿ ಕೋಟಾದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು.1500 ಮತಗಳನ್ನು ಪಡೆದು ಭರ್ಜರಿ ಗೆಲುವನ್ನು ಸಾಧಿಸಿದ್ದರು.ಇದೀಗ ಗ್ರಾ.ಪಂ.ಸದಸ್ಯೆಯಾಗಿ ಎರಡೂವರೆ ವರ್ಷವನ್ನು ಪೂರೈಸಿದರೂ,ತನ್ನ ಬದುಕಿನ ಜಟಕಾ ಬಂಡಿ ಸಾಗಿಸುವ ವೃತ್ತಿ ಮಂಡಕ್ಕಿ ಮಾರಾಟವನ್ನು ಮಾತ್ರ ನಿಲ್ಲಿಸಿಲ್ಲ,ಈಗಲು‌ ತಲೆ ಮೇಲೆ ಮಂಡಕ್ಕಿಯನ್ನು ಹೊತ್ತುಕೊಂಡು ಊರೂರು ಸುತ್ತಾಡುತ್ತಾರೆ.

ತನ್ನ ಮತದಾರರು ಅಗತ್ಯಕ್ಕಾಗಿ ಕರೆ ಮಾಡಿದರೆ, ಅವರ ಗಂಡ ಹನುಮಂತಪ್ಪ ಅವರು ಮತದಾರನ ಸಮಸ್ಯೆಗೆ ಸ್ಪಂದಿಸುತ್ತಾರೆ. ಸಾಮಾನ್ಯ ಸಭೆಗೆ ಅಥವಾ ಅಗತ್ಯದ ಸಂದರ್ಭ ತನ್ನ ಊರಿಗೆ ತೆರಳಿದಾಗ ವಾರಗಳ ಕಾಲ ಇದ್ದು ತನ್ನ ಮತದಾರರ ಜೊತೆಗಿದ್ದು, ಅವರಿಗೆ ಗ್ರಾ.ಪಂ. ಆಗಬೇಕಾದ ಕೆಲಸ,ಕಾರ್ಯಗಳನ್ನು ಮಾಡಿಸಿಕೊಡುತ್ತೆನೆ. ತಾನು ವಾಪಾಸ್ ಬಿ.ಸಿ.ರೋಡಿಗೆ ಬಂದ ಬಳಿಕ ಎಲ್ಲಾ ಕೆಲಸವನ್ನು ಗಂಡನೇ ನಿರ್ವಹಿಸುತ್ತಾರೆ ಎಂದು ಹೇಳುತ್ತಾರೆ ಲಕ್ಷ್ಮೀ ದೇವಮ್ಮ ಅವರು. ಬಿ.ಸಿ.ರೋಡಿನ  ಕೇಂದ್ರ ಸ್ಥಾನದಲ್ಲಿ ವಾಸವಿರುವ ಲಕ್ಷ್ಮೀ ದೇವಮ್ಮ ಅವರು ಬೆಳಗ್ಗೆ 6 ಗಂಟೆಗೆ ತಲೆಮೇಲೆ ಮಂಡಕ್ಕಿ‌ ಮೂಟೆ ಹೊತ್ತು ಹೊರಟರೆ ಸಂಜೆಯ ಹೊತ್ತಿಗೆ ಇಡೀ ಗೋಣಿಚೀಲ ಮುಗಿಸಿ ಮನೆಗೆ ವಾಪಾಸಾಗುತ್ತಾರೆ. ದ.ಕ.ಜಿಲ್ಲೆಯ ಪ್ರತಿ ತಾಲೂಕಿಗೂ ಇವರ ಮಂಡಕ್ಕಿ ಮಾರಾಟಕ್ಕೆ ತೆರಳುತ್ತಾರೆ. ಕೆಲವೊಮ್ಮೆ ಜಾತ್ರಾ ಸ್ಥಳದಲ್ಲಿಯೂ ಮಂಡಕ್ಕಿ ಮಾರಾಟದಲ್ಲಿ ನಿರತರಾಗಿರುತ್ತಾರೆ.   ಹೀಗಾಗಿ ಪ್ರತಿ ತಾಲೂಕಿನಲ್ಲು ಬಹುತೇಕರಿಗೆ ಲಕ್ಷ್ಮೀದೇವಮ್ಮ ಪರಿಚಯಸ್ಥರಾಗಿದ್ದಾರೆ.

ಊರಿನಲ್ಲಿ ಗಂಡನಿಗೆ ಒಂದಷ್ಟು ಕೃಷಿ ಭೂಮಿ ಇದೆಯಾದರೂ, ಅದರಲ್ಲಿ ಬೆಳೆ ಸಿಗುವುದು ಅಷ್ಟಕಷ್ಟೆ. ಮಳೆಗಾಲ ಸಂದರ್ಭ ಕೃಷಿ ಮಾಡಿದರೂ ನೆರೆಯಿಂದಾಗಿ ಬೆಳೆ ಉಳಿದಲ್ಲಿ ಅತ್ಯಲ್ಪ ಲಾಭ ದೊರೆಯುತ್ತದೆ. ಹೀಗಾಗಿ ಜೀವನ ಸಾಗಿಸುವುದಕ್ಕಾಗಿ ಮಂಡಕ್ಕಿ ಮಾರಾಟವನ್ನು ಕಾಯಕವನ್ನಾಗಿಸಿಕೊಂಡಿದ್ದೇನೆ.  17 ವರ್ಷದಿಂದ ಬಿ.ಸಿ.ರೋಡಿನಲ್ಲಿ‌  ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು,ಇಲ್ಲಿನ ಜನರು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಲಕ್ಷ್ಮೀ ದೇವಮ್ಮ ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು