ಎಗ್ ಕ್ಯಾಬೇಜ್ ಮಿಕ್ಸ್ ಪಲ್ಯ ಮಾಡಿ ನೋಡಿ!

ಎಗ್ ಕ್ಯಾಬೇಜ್ ಮಿಕ್ಸ್ ಪಲ್ಯ ಮಾಡಿ ನೋಡಿ!

LK   ¦    Jun 11, 2019 12:10:54 PM (IST)
ಎಗ್ ಕ್ಯಾಬೇಜ್ ಮಿಕ್ಸ್ ಪಲ್ಯ ಮಾಡಿ ನೋಡಿ!

ಊಟಕ್ಕೆ ತಟ್ಟೆಯಲ್ಲಿ ಅನ್ನದೊಂದಿಗೆ ಪಲ್ಯ ಇದ್ದರೆ ಅದರ ಮಜಾವೇ ಬೇರೆ. ಅದರಲ್ಲೂ ಎಗ್ ಕ್ಯಾಬೇಜ್ ಮಿಕ್ಸ್ ಪಲ್ಯವಿದ್ದರಂತೂ ಇನ್ನೂ ಚೆನ್ನಾಗಿರುತ್ತದೆ. ಹಾಗಾದರೆ ಎಗ್ ಕ್ಯಾಬೇಜ್ ಮಿಕ್ಸ್ ಪಲ್ಯ ಮಾಡೋದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಎಗ್ ಕ್ಯಾಬೇಜ್ ಮಿಕ್ಸ್ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು

ಕ್ಯಾಬೇಜ್- 250 ಗ್ರಾಂ

ಮೊಟ್ಟೆ- 2

ತುಪ್ಪ- ಒಂದೂವರೆ ಚಮಚ

ಹಸಿಮೆಣಸು-2

ಈರುಳ್ಳಿ-1

ಹಾಲು- ಅರ್ಧ ಬಟ್ಟಲು

ಮೆಣಸುಪುಡಿ- ಅರ್ಧ ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಕೊತ್ತಂಬರಿ ಸೊಪ್ಪು- ಸ್ವಲ್ಪ

ಎಗ್ ಕ್ಯಾಬೇಜ್ ಮಿಕ್ಸ್ ಪಲ್ಯ ತಯಾರಿಸುವ ವಿಧಾನ ಹೀಗಿದೆ.

ಮೊದಲಿಗೆ ಕ್ಯಾಬೇಜ್‍ನ್ನು ಚಿಕ್ಕದಾಗಿ ಹಚ್ಚಿಕೊಳ್ಳಬೇಕು. ಹಾಗೆಯೇ ಹಸಿ ಮೆಣಸು, ಈರುಳ್ಳಿಯನ್ನು ಪ್ರತ್ಯೇಕವಾಗಿ ಹಚ್ಚಿಟ್ಟುಕೊಳ್ಳಬೇಕು.

ಆ ನಂತರ ಅಗಲವಾದ ಪಾತ್ರೆಯನ್ನು ಒಲೆ ಮೇಲಿಟ್ಟು ಅದಕ್ಕೆ ತುಪ್ಪ ಹಾಕಬೇಕು ಅದು ಕಾದ ಬಳಿಕ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಬೇಕು. ನಂತರ ಹಸಿ ಮೆಣಸು ಸೇರಿಸಬೇಕು. ಅದಾದ ಬಳಿಕ ಕ್ಯಾಬೇಜನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು.

ಆ ನಂತರ ಹಾಲು ಮತ್ತು ಉಪ್ಪನ್ನು ಹಾಕಿ ಮುಚ್ಚಳ ಮುಚ್ಚಿ ಸ್ವಲ್ಪ ಬೇಯಿಸಬೇಕು. ಈ ವೇಳೆ ತಳ ಹಿಡಿಯದಂತೆ ನೋಡಿಕೊಳ್ಳಬೇಕು. ಹಾಲು ಆವಿಯಾದ ಬಳಿಕ ಅದಕ್ಕೆ ಹಸಿ ಮೊಟ್ಟೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಬೇಕು. ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಬೇಕು. (ಖಾರದ ಅಗತ್ಯವಿದ್ದರೆ ಮೆಣಸಿನ ಪುಡಿಯನ್ನು ಉದುರಿಸಬಹುದು.) ಬಳಿಕ ಒಲೆಯಿಂದ ಇಳಿಸಿ ಉಪಯೋಗಿಸಬಹುದು.