ಆರೋಗ್ಯಕಾರಿ ತಿನಿಸು ಏಡಿ ಫ್ರೈ

ಆರೋಗ್ಯಕಾರಿ ತಿನಿಸು ಏಡಿ ಫ್ರೈ

LK   ¦    Aug 19, 2020 01:29:47 PM (IST)
ಆರೋಗ್ಯಕಾರಿ ತಿನಿಸು ಏಡಿ ಫ್ರೈ

ಮಳೆಗಾಲದಲ್ಲಿ ನಾವು ಸೇವಿಸುವ ಆಹಾರ ಪದಾರ್ಥಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಮಳೆಗಾಲದಲ್ಲಿ ನಾವು ಸೇವಿಸಬಹುದಾದ ಆಹಾರ ಪದಾರ್ಥಗಳ ಪೈಕಿ ಏಡಿಯೂ ಒಂದಾಗಿದೆ. ಈ ಏಡಿಯಿಂದ ಬೇರೆ ಬೇರೆ ಪದಾರ್ಥಗಳನ್ನು ತಯಾರಿಸಬಹುದಾಗಿದ್ದು ಅದರಲ್ಲಿ ಏಡಿ ಫ್ರೈ ಕೂಡ ಒಂದಾಗಿದೆ. ಈ ಏಡಿ ಫ್ರೈ ಮಾಡುವುದು ಹೇಗೆ ಮತ್ತು ಬೇಕಾಗುವ ಪದಾರ್ಥಗಳ ಬಗ್ಗೆ ಇಲ್ಲಿದೆ ಮಾಹಿತಿ.

ಏಡಿಫ್ರೈ ಮಾಡಲು ಬೇಕಾಗುವ ಪದಾರ್ಥಗಳು

ಏಡಿ- 250 ಗ್ರಾಂ

ಸಾಸಿವೆ- ಅರ್ಧ ಟೀ ಚಮಚ

ಎಣ್ಣೆ- ಮೂರು ಚಮಚ

ಈರುಳ್ಳಿ- ದೊಡ್ಡದು ಒಂದು ಚಮಚ

ಕಾರದಪುಡಿ- ಎರಡು ಟೀ ಚಮಚ

ಅರಶಿನ ಪುಡಿ- ಅರ್ಧ ಟೀ ಚಮಚ

ಗರಂ ಮಸಾಲೆ- ಒಂದು ಟೀ ಚಮಚ

ಟೊಮ್ಯಾಟೋ- ದೊಡ್ಡದು ಒಂದು

ಉಪ್ಪು- ಒಂದೂವರೆ ಚಮಚ

ನಿಂಬೆ ರಸ- ರುಚಿಗೆ ತಕ್ಕಷ್ಟು(ಅರ್ಧ ಭಾಗ)

ನೀರು- ಕಾಲು ಬಟ್ಟಲು

ಏಡಿ ಫ್ರೈ ಮಾಡುವ ವಿಧಾನ ಹೀಗಿದೆ..

ಮೊದಲಿಗೆ ಏಡಿಯನ್ನು ಶುಚಿ ಮಾಡಿಟ್ಟುಕೊಳ್ಳಬೇಕು. ಅದೇ ರೀತಿ ಈರುಳ್ಳಿ ಮತ್ತು ಟೊಮ್ಯಟೋವನ್ನು ಹಚ್ಚಿಟ್ಟುಕೊಳ್ಳಬೇಕು. ಮೊದಲಿಗೆ ಒಂದು ಪಾತ್ರೆಗೆ ಎಣ್ಣೆಯನ್ನು ಹಾಕಿ ಅದು ಕಾಯುತ್ತಿದ್ದಂತೆಯೇ ಸಾಸಿವೆ ಹಾಕಬೇಕು. ಅದು ಸಿಡಿದ ಬಳಿಕ ಈರುಳ್ಳಿಯನ್ನು ಹಾಕಿ ಹುರಿಯಬೇಕು ಅದು ಕಂದು ಬಣ್ಣಬರುತ್ತಿದ್ದಂತೆಯೇ ಕಾರದಪುಡಿ, ಅರಸಿನಪುಡಿ ಮತ್ತು ಗರಂ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಸುಮಾರು ಎರಡು ನಿಮಿಷ ಹುರಿಯಬೇಕು ನಂತರ ಟೋಮ್ಯಾಟೋ ಹಾಕಿ ಚೆನ್ನಾಗಿ ಮೃದುವಾಗುವವರೆಗೆ ಹುರಿಯಬೇಕು. ನಂತರ ಅದಕ್ಕೆ ಏಡಿ, ಉಪ್ಪು ಮತ್ತು ನೀರನ್ನು ಹಾಕಿ ಮುಚ್ಚಳ ಮುಚ್ಚಿ ನಿಧಾನ ಉರಿಯಲ್ಲಿ ಚೆನ್ನಾಗಿ ನೀರು ಆರುವ ತನಕ ಬೇಯಿಸಬೇಕು. ಬೆಂದ ಬಳಿಕೆ ನಿಂಬೆ ರಸ ಹಾಕಿ ತಿರುಗಿಸಿ ಇಳಿಸಿದರೆ ಏಡಿ ಫ್ರೈ ಸಿದ್ಧವಾದಂತೆಯೇ...