ರಾತ್ರಿ ಊಟಕ್ಕೆ ಚಪಾತಿ ಜತೆಗಿರಲಿ ಸುಟ್ಟ ಬದನೆಕಾಯಿ ಗೊಜ್ಜು

ರಾತ್ರಿ ಊಟಕ್ಕೆ ಚಪಾತಿ ಜತೆಗಿರಲಿ ಸುಟ್ಟ ಬದನೆಕಾಯಿ ಗೊಜ್ಜು

HSA   ¦    Mar 04, 2020 05:46:19 PM (IST)
ರಾತ್ರಿ ಊಟಕ್ಕೆ ಚಪಾತಿ ಜತೆಗಿರಲಿ ಸುಟ್ಟ ಬದನೆಕಾಯಿ ಗೊಜ್ಜು

ಬದನೆಕಾಯಿಯನ್ನು ಬಳಸಿಕೊಂಡು ಹಲವಾರು ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇದನ್ನು ಅನ್ನ ಅಥವಾ ಚಪಾತಿ ಜತೆಗೆ ಬಳಸಲಾಗುತ್ತದೆ. ಬದನೆಕಾಯಿ ಸುಟ್ಟು ಅದರಿಂದ ತಯಾರಿಸುವಂತಹ ಗೊಜ್ಜು ಮಾತ್ರ ರುಚಿಕರವಾಗಿರುವುದು. ಅದನ್ನು ತಯಾರಿಸುವ ವಿಧಾನ ತಿಳಿಯಿರಿ.

ತಯಾರಿಸುವ ಸಮಯ: 5 ನಿಮಿಷ

ಅಡುಗೆ ಸಮಯ: 15 ನಿಮಿಷ

2 ಜನರಿಗೆ ಬಡಿಸಬಹುದು

 

ಬೇಕಾಗುವ ಸಾಮಗ್ರಿಗಳು

ಒಂದು ದೊಡ್ಡ ಗಾತ್ರದ ನೇರಳೆ ಬಣ್ಣದ ಬದನೆಕಾಯಿ

ಒಂದು ಚಮಚ ಬೆಲ್ಲ

ನೆಲ್ಲಿಕಾಯಿ ಗಾತ್ರದಷ್ಟು ಹುಳಿ

1 ಸಣ್ಣ ಗಾತ್ರದ ಈರುಳ್ಳಿ

1-2 ಚಮಚ ಕತ್ತರಿಸಿದ ಹಸಿಮೆಣಸು

2 ಚಮಚ ಕತ್ತರಿಸಿದ ಕೊತ್ತಂಬರಿ ಎಲೆಗಳು

ರುಚಿಗೆ ತಕ್ಕಷ್ಟು ಉಪ್ಪು

 

ಒಗ್ಗರಣೆಗೆ ಬೇಕಾಗಿರುವುದು

1 ಚಮಚ ಎಣ್ಣೆ

¼ ಚಮಚ ಸಾಸಿವೆ ಕಾಳು

ಸ್ವಲ್ಪ ಕರಿಬೇವಿನ ಎಲೆಗಳೂ

1 ಕೆಂಪು ಮೆಣಸು

 

ಗೊಜ್ಜು ಮಾಡುವ ವಿಧಾನ

ಬದನೆಕಾಯಿ ತೊಳೆದು ಸರಿಯಾಗಿ ಒರೆಸಿಕೊಳ್ಳಿ. ಸ್ವಲ್ಪ ಎಣ್ಣೆಯನ್ನು ಬದನೆಕಾಯಿಗೆ ಹಚ್ಚಿಕೊಳ್ಳಿ. ಮಧ್ಯಮ ಬೆಂಕಿಯಲ್ಲಿ ಬದನೆಕಾಯಿಯನ್ನು ಇಟ್ಟುಕೊಳ್ಳಿ ಮತ್ತು ಇದು ತುಂಬಾ ಮೆತ್ತಗಾಗಲಿ. ಹಾಗೆ ಬದನೆಕಾಯಿಯನ್ನು ತಿರುಗಿಸುತ್ತಾ ಇರಿ. ಇದಕ್ಕೆ 7-8 ನಿಮಿಷ ಬೇಕು.

ಬೆಂಕಿಯಿಂದ ತೆಗೆದ ಬಳಿಕ ಬದನೆಕಾಯಿ ಸಿಪ್ಪೆ ತೆಗೆಯಿರಿ.

ಈಗ ಇದನ್ನು ಸರಿಯಾಗಿ ಹಿಚುಕಿಕೊಳ್ಳಿ.

ಇದಕ್ಕೆ ಉಪ್ಪು, ಬೆಲ್ಲ ಮತ್ತು ಹುಳಿ ನೀರು ಹಾಕಿ. ನಿಮ್ಮ ರುಚಿಗೆ ತಕ್ಕಷ್ಟು ಹಾಕಿ ಮಿಶ್ರಣ ಮಾಡಿ.

ಇದಕ್ಕೆ ಕತ್ತರಿಸಿಕೊಂಡು ಈರುಳ್ಳಿ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪು ಹಾಕಿ.

ಇದಕ್ಕೆ ಎಣ್ಣೆ, ಸಾಸಿವೆ, ಕೆಂಪು ಮೆಣ ಮತ್ತು ಕರಿಬೇವಿನ ಎಲೆಗಳ ಒಗ್ಗರಣೆ ಹಾಕಿ. ಇದನ್ನು ಅನ್ನ ಅಥವಾ ಚಪಾತಿ ಜತೆಗೆ ತಿನ್ನಲು ಕೊಡಿ.