ವೆಜ್ ಮಿಕ್ಸ್ ಚಪಾತಿ ಮಾಡಿ ನೋಡಿ...!

ವೆಜ್ ಮಿಕ್ಸ್ ಚಪಾತಿ ಮಾಡಿ ನೋಡಿ...!

LK   ¦    Sep 05, 2019 12:45:53 PM (IST)
ವೆಜ್ ಮಿಕ್ಸ್ ಚಪಾತಿ ಮಾಡಿ ನೋಡಿ...!

ವೆಜ್ ಮಿಕ್ಸ್ ಚಪಾತಿ ನೋಡಲು ಸುಂದರ ಜೊತೆಗೆ ಆರೋಗ್ಯಕ್ಕೆ ಉತ್ತಮವಾಗಿದೆ. ಸಾಮಾನ್ಯವಾಗಿ ಕೇವಲ ಮೈದಾ. ಗೋಧಿಯಿಂದ ಮಾಡುವ ಚಪಾತಿ ಕೆಲವೊಮ್ಮೆ ಬೋರ್ ಹೊಡೆಸಬಹುದು. ಈ ವೇಳೆ ವೆಜ್ ಮಿಕ್ಸ್ ಚಪಾತಿ ತಯಾರಿಸಬಹುದಾಗಿದೆ. ಇದನ್ನು ಮಾಡಲು ಬೇಕಾಗುವ ಪದಾರ್ಥ ಮತ್ತು ವಿಧಾನಗಳು ಹೀಗಿವೆ.

 ಬೇಕಾಗುವ ಪದಾರ್ಥಗಳು

 ಕ್ಯಾರೆಟ್- 100ಗ್ರಾಂ 

ಬೀಟ್ರೋಟ್-100ಗ್ರಾಂ 

ಪುದಿನಾ- ಅರ್ಧ ಕಟ್ಟು 

ಮೈದಾ ಹಿಟ್ಟು- ಅರ್ಧ ಕಪ್

 ಗೋಧಿ ಹಿಟ್ಟು- ಅರ್ಧ ಕಪ್ 

ಉಪ್ಪು- ರುಚಿಗೆ ತಕ್ಕಷ್ಟು

 ಮಾಡುವ ವಿಧಾನಗಳು

 ಮೊದಲಿಗೆ ಪುದಿನಾ, ಕ್ಯಾರೆಟ್, ಬೀಟ್ರೋಟ್‍ನ್ನು ಹಚ್ಚಿ ಪ್ರತಿಯೊಂದನ್ನು ಪ್ರತ್ಯೇಕವಾಗಿ  ಮಿಕ್ಸಿ ಮಾಡಿಟ್ಟುಕೊಳ್ಳಬೇಕು. ಇನ್ನೊಂದೆಡೆ ಗೋಧಿ ಮತ್ತು ಮೈದಾ ಹಿಟ್ಟನ್ನು ಮಾಮೂಲಿ ಚಪಾತಿಗೆ ಕಲೆಸಿಕೊಳ್ಳುವಂತೆ ಕಲೆಸಿ ಬಳಿಕ ಮೂರು ಭಾಗ ಮಾಡಿ ಮಿಕ್ಸಿ ಮಾಡಿಟ್ಟ ಪುದಿನಾ, ಕ್ಯಾರೆಟ್, ಬೀಟ್ರೋಟ್ ರಸವನ್ನು ಬೆರೆಸಿಕೊಂಡು ಪ್ರತ್ಯೇಕವಾಗಿ ಕಲೆಸಬೇಕು ನಂತರ ಮೂರನ್ನು ಸೇರಿಸಿ ಒಂದಾಗಿಸಿ ಕಲೆಸಬೇಕು. ಆ ನಂತರ ಚಪಾತಿಯನ್ನು ಲಟ್ಟಿಸಿ ತಾವಾದಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿದರೆ ವೆಜ್ ಮಿಕ್ಸ್ ಚಪಾತಿ ಸವಿಯಲು ಸಿದ್ಧವಾಗಲಿದೆ.