ವೀಕೆಂಡ್ ಗೆ ಮಾಡಿ 'ಚಿಕನ್ ಕಬಾಬ್'

ವೀಕೆಂಡ್ ಗೆ ಮಾಡಿ 'ಚಿಕನ್ ಕಬಾಬ್'

YK   ¦    Feb 15, 2020 04:31:56 PM (IST)
ವೀಕೆಂಡ್ ಗೆ ಮಾಡಿ 'ಚಿಕನ್ ಕಬಾಬ್'

ಮಾಂಸ ಪ್ರಿಯರಿಗೆ ‘ಚಿಕನ್ ಕಬಾಬ್’ ಎಂದರೆ ಬಾಯಲ್ಲಿ ನೀರೂರಿಸುತ್ತದೆ. ವೀಕೆಂಡ್ ದಿನ ನಿಮ್ಮ ಮನೆಯಲ್ಲೂ ಮಾಡಬಹುದು ಚಿಕನ್ ಕಬಾಬ್ .

ಬೇಕಾಗುವ ಸಾಮಾಗ್ರಿಗಳು
500 ಗ್ರಾಂ ಚಿಕನ್
1 1/2 ಟೀ ಚಮಚ ಮೆಣಸಿನ ಪುಡಿ
1 ಚಮಚ ಶುಂಠಿ- ಬೆಳ್ಳುಳ್ಳಿ ಪೇಸ್ಟ್
1 ಚಮಚ ನಿಂಬೆ ರಸ
1 ಮೊಟ್ಟೆ
ರುಚಿಗೆ ಉಪ್ಪು
ಒಂದು ಚಿಟಿಕೆ ಅರಿಶಿನ

ತಯಾರಿಸುವ ವಿಧಾನ:
ಮೇಲಿನ ಎಲ್ಲ ಪದಾರ್ಥಗಳನ್ನು ಮೊಟ್ಟೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಶುಚಿ ಮಾಡಿದ ಕೋಳಿ ಮಾಂಸವನ್ನು ಅದಕ್ಕೆ ಹಾಕಿ ಮಿಶ್ರಣ ಮಾಡಿ 30 ನಿಮಿಷ ಇಡಿ. ನಂತರ ಕಾದ ಎಣ್ಣೆಯಲ್ಲಿ ಕೋಳಿ ಮಾಂಸವನ್ನು ಕರಿಯಿರಿ. ಇದೀಗ ರುಚಿಕರವಾದ ಚಿಕನ್ ಕಬಾಬ್ ಅನ್ನದ ಜತೆ ಸವಿಯಲು ಸಿದ್ದ.