ಸಿಹಿ ಕಜ್ಜಾಯ ಸವಿಯಿರಿ!

ಸಿಹಿ ಕಜ್ಜಾಯ ಸವಿಯಿರಿ!

LK   ¦    Feb 04, 2021 12:01:20 PM (IST)
ಸಿಹಿ ಕಜ್ಜಾಯ ಸವಿಯಿರಿ!

ಸಿಹಿಯನ್ನು ಇಷ್ಟಪಡುವವರು ಮನೆಯಲ್ಲಿಯೇ ರುಚಿಯಾದ  ಕಜ್ಜಾಯವನ್ನು ಮಾಡಬಹುದಾಗಿದೆ.

ಬೇಕಾಗುವ ಪದಾರ್ಥಗಳು

ಮೈದಾ ಹಿಟ್ಟು- ಕಾಲು ಕೆಜಿ

ಚಿರೋಟಿ ರವೆ- ಮೂರು ಟೇಬಲ್ ಚಮಚೆ

ಕೊಬ್ಬರಿ ತುರಿ- ಕಾಲು ಬಟ್ಟಲು

ಅಡುಗೆ ಸೋಡಾ- ಚಿಟಿಕೆಯಷ್ಟು

ಸಕ್ಕರೆ- ಐವತ್ತು ಗ್ರಾಂ

ಹಾಲು- ಒಂದು ಲೋಟ

ಗೋಡಂಬಿ, ದ್ರಾಕ್ಷಿ- ಸ್ವಲ್ಪ

ಎಣ್ಣೆ- ಕರಿಯಲು ಅಗತ್ಯವಿರುವಷ್ಟು

ತಯಾರಿಸುವ ವಿಧಾನ ಹೀಗಿದೆ...

ಮೊದಲಿಗೆ ಒಂದು ಪಾತ್ರೆಗೆ ಮೈದಾ, ರವೆ, ಸೋಡಾಪುಡಿ, ಸಕ್ಕರೆ ಎಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು ಬಳಿಕ ಕಾದು ಆರಿದ ಹಾಲನ್ನು ಅದಕ್ಕೆ ಸ್ವಲ್ಪ ಸ್ವಲ್ಪವೇ ಹಾಕುತ್ತಾ ಗಂಟಿಲ್ಲದಂತೆ ಕಲೆಸಬೇಕು. ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿದ ನಂತರ ಅದಕ್ಕೆ ಗೋಡಂಬಿ ದ್ರಾಕ್ಷಿಯನ್ನು ಹಾಕಬೇಕು.

ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕಾದ ಬಳಿಕ ಹಿಟ್ಟನ್ನು ಒಂದು ಸ್ಪೂನ್‍ನಲ್ಲಿ ತೆಗೆದುಕೊಂಡು ಎಣ್ಣೆಗೆ ಹಾಕಬೇಕು. ಬಳಿಕ ಸೌಟುನಿಂದ ತಿರುವುತ್ತಾ ಚೆನ್ನಾಗಿ ಬೇಯಿಸಬೇಕು. ಆ ನಂತರ ತೆಗೆದು ಸ್ವಲ್ಪ ಆರಿಸಿ ಸೇವಿಸಿದರೆ ಮಜಾವಾಗಿರುತ್ತದೆ.