ಸಿಂಪಲ್ ಆಗಿ ಮಾಡಿ ಸೀಗಡಿ ಫ್ರೈ

ಸಿಂಪಲ್ ಆಗಿ ಮಾಡಿ ಸೀಗಡಿ ಫ್ರೈ

LK   ¦    Feb 12, 2019 12:11:55 PM (IST)
ಸಿಂಪಲ್ ಆಗಿ ಮಾಡಿ ಸೀಗಡಿ ಫ್ರೈ

ಸಿಗಡಿ ಮೀನಿನಿಂದ ಹಲವು ಖಾದ್ಯಗಳನ್ನು ಮಾಡಲಾಗುತ್ತಿದ್ದು, ಇದು ಮಾಂಸಪ್ರಿಯರಿಗೆ ಅದರಲ್ಲೂ ಮೀನನ್ನು ಇಷ್ಟ ಪಡುವವರಿಗೆ ತುಂಬಾ ಖುಷಿಕೊಡುತ್ತದೆ. ಹೀಗಾಗಿ ಸೀಗಡಿಯಿಂದ ಬಹುದಾದ ಖಾದ್ಯಗಳಲ್ಲಿ ಫ್ರೈ ಕೂಡ ಒಂದಾಗಿದ್ದು ಅದನ್ನು ಮಾಡುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಯಬಹುದು.

ಸೀಗಡಿ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು

ಸೀಗಡಿ ಮೀನು: ಅರ್ಧ ಕೆಜಿ

ಮೆಣಸಿನಪುಡಿ: ಒಂದೂವರೆ ಚಮಚ

ಅರಶಿನಪುಡಿ: ಕಾಲು ಚಮಚ

ಉಪ್ಪು: ರುಚಿಗೆ ತಕ್ಕಷ್ಟು

ಸೋಯಾಸಾಸ್: ಒಂದು ಚಮಚ

ಈರುಳ್ಳಿ: ದೊಡ್ಡಗಾತ್ರದ್ದು ಒಂದು

ನಿಂಬೆರಸ: ಸ್ವಲ್ಪ

ಎಣ್ಣೆ: ಸ್ವಲ್ಪ

ಸೀಗಡಿ ಫ್ರೈ ಮಾಡುವುದು ಹೇಗೆ?

ಮೊದಲಿಗೆ ಸೀಗಡಿ ಮೀನನ್ನು ಶುಚಿಗೊಳಿಸಿಟ್ಟುಕೊಳ್ಳಬೇಕು. ಆ ನಂತರ ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಒಂದು ಪಾತ್ರೆಗೆ ಸೀಗಡಿ ಮೀನನ್ನು ಹಾಕಿ ಅದಕ್ಕೆ ಮೆಣಸಿನಪುಡಿ, ಉಪ್ಪು, ಅರಶಿಣ, ಸೋಯಾಸಾಸ್ ಎಲ್ಲವನ್ನು ಹಾಕಿ ಎರಡು ಚಮಚೆಯಷ್ಟು ನೀರು ಹಾಕಿ ನೀರು ಆವಿ ಆಗುವವರೆಗೆ ಬೇಯಿಸಿ ಇಳಿಸಿಟ್ಟುಕೊಳ್ಳಬೇಕು.

ಇನ್ನೊಂದು ಕಡೆ ಬಾಣಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಹಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಅದಕ್ಕೆ ಬೇಯಿಸಿಟ್ಟ ಸೀಗಡಿ ಮೀನನ್ನು ಹಾಕಿ ಚೆನ್ನಾಗಿ ಹುರಿಯಬೇಕು. ನಂತರ ಇಳಿಸಿ ನಿಂಬೆ ರಸ ಹಿಂಡಿ ಊಟದೊಂದಿಗೆ ಸೇವಿಸಬಹುದಾಗಿದೆ.