ತುಳುನಾಡಿನ ಸ್ಪೆಷಲ್ ಮರುವಾಯಿ ಸುಕ್ಕ

ತುಳುನಾಡಿನ ಸ್ಪೆಷಲ್ ಮರುವಾಯಿ ಸುಕ್ಕ

YK   ¦    Jun 01, 2019 03:18:59 PM (IST)
ತುಳುನಾಡಿನ ಸ್ಪೆಷಲ್  ಮರುವಾಯಿ ಸುಕ್ಕ

ಮರುವಾಯಿ ಸುಕ್ಕ ಕರಾವಳಿ ಮೀನಿನ ಖಾದ್ಯಗಳಲ್ಲಿ ತುಂಬಾ ರುಚಿಕರವಾದದ್ದು. ಇದನ್ನು ಹೆಚ್ಚಾಗಿ ಕರಾವಳಿಯ ಜನರು ಇಷ್ಟಪಡುತ್ತಾರೆ. ಮರುವಾಯಿಯನ್ನು ಬಸಳೆ ಸೊಪ್ಪಿನ ಜತೆ ಸೇರಿ ಸಾರನ್ನು ತಯಾರಿಸಬಹುದು. ಮರುವೈ ಪುಂಡಿ ಅಂತ ತಿಂಡಿಯನ್ನು ಮಾಡಬಹುದು.

ಮರುವಾಯಿ ಸುಕ್ಕ ಮಾಡಲು ಬೇಕಾಗುವ ಸಾಮಾಗ್ರಿಗಳು

ಮರುವಾಯಿ - 100
ಮೆಣಸು-10
ಕೊತ್ತಂಬರಿ-2 ಚಮಚ
ಜೀರಿಗೆ- ½ ಚಮಚ
ಸಾಸಿವೆ-1/2ಚಮಚ
ಮೆಂತ್ಯೆ-2ಕಾಳು
ಈರುಳ್ಳಿ-1

ತೆಂಗಿನಕಾಯಿ ತುರಿ, ಹರಿಶಿನ, ಹುಳಿ, ಎಣ್ಣೆ, ಉಪ್ಪು, ಬೆಳ್ಳುಳ್ಳಿ, ಕರಿಬೇವು ಸೊಪ್ಪು, ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:
1.ಮೆಣಸು, ಜೀರಿಗೆ, ಕೊತ್ತಂಬರಿ, ಮೆಂತ್ಯೆ, ಸಾಸಿವೆ ಹಾಗೂ ಜೀರಿಗೆಯನ್ನು 2ನಿಮಿಷ ಹುರಿಯಿರಿ. ಬಳಿಕ ಮಿಕ್ಸ್ ಗೆ ಹಾಕಿ ಬೆಳ್ಳುಳ್ಳಿ, ಸ್ವಲ್ಪ ಈರುಳ್ಳಿ, ಹುಳಿ ಜತೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಅರೆಯಿರಿ.

2. ಚೆನ್ನಾಗಿ ತೊಳೆದಿಟ್ಟುಕೊಂಡ ಮರುವಾಯಿಯನ್ನು ಉಪ್ಪು ಹಾಕಿ ನೀರಿನಲ್ಲಿ ಬೇಯಿಸಿ.

3. ಇನ್ನೊಂದು ಬಾಣಲೆಯಲ್ಲಿ ತೆಂಗಿನ ತುರಿಯನ್ನು ಕಡಿಮೆ ಉರಿಯಲ್ಲಿ ಹುರಿದಿಟ್ಟುಕೊಳ್ಳಿ.

4.ಒಂದು ಪಾತ್ರೆಗೆ ಒಗ್ಗರಣೆ ಕೊಟ್ಟ ಬಳಿಕ 1 ಈರುಳ್ಳಿಯನ್ನು ಹಾಕಿ ಕೆಂಪಾಗಾಗುವರೆಗೆ ಹುರಿಯಿರಿ. ನಂತರ ಬೇಯಿಸಿಟ್ಟ ಮರುವಾಯಿಯನ್ನು ಸೇರಿಸಿ. 2ನಿಮಿಷದ ಬಳಿಕ ಅರೆದಿಟ್ಟುಕೊಂಡ ಮಿಕ್ಸ್ ನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಕೈಯಾಡಿಸಿ. ನಂತರ ಹುರಿದಿಟ್ಟುಕೊಂಡ ತೆಂಗಿನ ತುರಿಯನ್ನು ಸೇರಿಸಿ 2 ನಿಮಿಷ ಕೈಯಾಡಿಸಿ. ಕೊನೆಯಾದಾಗಿ ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವು ಸೊಪ್ಪು ಸೇರಿಸಿ. ಬೇಕಾದರೆ ರುಚಿಗೆ ಉಪ್ಪು ಸೇರಿಸಬಹುದು. ಇದನ್ನು ಅನ್ನದ ಜತೆ ಸವಿಯಲು ತುಂಬಾನೇ ರುಚಿಕರವಾಗಿರುತ್ತದೆ.