ಬೂತಾಯಿ ಪುಲಿಮುಂಚಿ

ಬೂತಾಯಿ ಪುಲಿಮುಂಚಿ

Jun 15, 2016 07:52:41 AM (IST)

ಕರಾವಳಿಯ ಜನತೆಗೆ ಮೀನೆಂದರೆ ಪಂಚಪ್ರಾಣ. ಮಂಗಳೂರಿನಲ್ಲಿ ಬಗೆ ಬಗೆಯ ಫ್ರೆಶ್ ಮೀನು ಸಿಗುವುದರಿಂದ ದೂರದೂರಿಂದ ಮಂಗಳೂರಿಗೆ ಬಂದವರು  ಮೀನು ತಿನ್ನಲು ಹೆಚ್ಚಾಗಿ ಅಪೇಕ್ಷೆ ಪಡುತ್ತಾರೆ. ಅದರಲ್ಲೂ ಬೂತಾಯಿ ಪುಲಿಮುಂಚಿ ಮಂಗಳೂರಿ ಸ್ಪೇಷಲ್ ಮೀನಿನ ಕರಿ. ಬನ್ನಿ ನಾವು ಇವತ್ತು ಬೂತಾಯಿ ಪುಲಿಮುಂಚಿ ಹೇಗೆ ತಯಾರಿಸುದೆಂದು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು
ಬೂತಾಯಿ ಮೀನು 10-12
ಕೆಂಪು ಮೆಣಸು 10-12
ಕೊತ್ತಂಬರಿ ಬೀಜ 1 1/2 ಟಿ ಚಮಚ
ಜೀರಿಗೆ 1 ಟೀಚಮಚ
ಸಾಸಿವೆ 1 ಟೀ ಚಮಚ
ಮೆಂತೆ  1/4 ಚಮಚ
ಚಿಟಿಕೆ ಹಳದಿ
ಬೆಳ್ಳುಳ್ಳಿ ಎಸಳು  4-5
ಶುಂಠಿ
ನಿಂಬೆ ಹಣ್ಣಿನ ಗಾತ್ರದಷ್ಟು  ಹುಳಿ
ಎಣ್ಣೆ 2 ಚಮಚ
ಕರಿ ಬೇವಿನ ಎಲೆ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ
ಮೇಲೆ ನೀಡಿರುವ ಎಲ್ಲಾ  ಸಾಮಾಗ್ರಿಗಳನ್ನು ಎಣ್ಣೆಯಲ್ಲಿ ಹುರಿದು ತಣ್ಣಗಾದ ನಂತರ ಇವೆಲ್ಲವನ್ನು ರುಬ್ಬಿ ಮಸಾಲಾ ತಯಾರಿಸಿ, ಮಸಲಾ ಗಟ್ಟಿಯಾಗಿರಲಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ  ಹಾಕಿ ಕಾಯಲು ಇಡಿ ಅದಕ್ಕೆ ಕರಿ ಬೇವಿನ ಎಲೆ ಹಾಕಿ ನಂತರ ರುಬ್ಬಿ ತಯಾರಿಸಿದ ಮಸಾಲೆಯನ್ನು ಸೇರಿಸಿ ಕುದಿಸಿ, ಉಪ್ಪು ಹಾಕಿ.
ಈಗ ತೊಳೆದಿಟ್ಟಿರುವ ಬೂತಾಯಿ ಮೀನನ್ನು ಕುದಿಯುತ್ತಿರುವ ಮಸಾಲೆಗೆ ಹಾಕಿ  ಹತ್ತು ನಿಮಿಷಗಳ ಕಾಲ  ಬೇಯಿಸಿ.
ಬಿಸಿ ಅನ್ನದ ಜೊತೆ ಖಾರ ಪುಳಿಮುಂಚಿ ತಿನ್ನಲು ಬಹಳ ರುಚಿಕರವಾಗಿರುತ್ತದೆ.