ಮನೆಯಲ್ಲಿಯೇ ಮಾಡಿ ನೋಡಿ ಚಿಕನ್ ಟಿಕ್ಕಾ

ಮನೆಯಲ್ಲಿಯೇ ಮಾಡಿ ನೋಡಿ ಚಿಕನ್ ಟಿಕ್ಕಾ

LK   ¦    Jul 21, 2020 07:28:34 PM (IST)
ಮನೆಯಲ್ಲಿಯೇ ಮಾಡಿ ನೋಡಿ ಚಿಕನ್ ಟಿಕ್ಕಾ

ಚಿಕನ್‍ನಿಂದ ಮಾಡಬಹುದಾದ ಖಾದ್ಯಗಳಲ್ಲಿ ಚಿಕನ್ ಟಿಕ್ಕಾವು ಒಂದಾಗಿದೆ. ಇದನ್ನು ಮಾಡಲು ಬೇಕಾಗುವ ಮಸಾಲೆ ಪದಾರ್ಥಗಳು ಮತ್ತು ಮಾಡುವ ವಿಧಾನ ಹೀಗಿದೆ.

ಬೇಕಾಗುವ ಪದಾರ್ಥಗಳ ವಿವರ

ಚಿಕನ್- ಅರ್ಧ ಕೆಜಿ

ಅರಸಿನಪುಡಿ- ಕಾಲು ಟೀ ಚಮಚ

ಚಿಲ್ಲಿಸಾಸ್- ಒಂದು ಟೀ ಚಮಚ

ಬೆಳ್ಳುಳ್ಳಿ ಶುಂಠಿ ಪೇಸ್ಟ್- ಒಂದು ಟೀ ಚಮಚ

ಅಜಿನೊಮೊಟೊ- ಚಿಟಿಕೆ

ನಿಂಬೆ ರಸ- ಸ್ವಲ್ಪ

ಮೈದಾ- ಎರಡು ಟೇಬಲ್ ಚಮಚ

ಜೋಳದ ಹಿಟ್ಟು- ಒಂದು ಟೇಬಲ್ ಚಮಚ

ಹಸಿಮೊಟ್ಟೆ- ಒಂದು

ಸೋಡಾ- ಚಿಟಿಕೆಯಷ್ಟು

ಉಪ್ಪು- ರುಚಿಗೆ ತಕ್ಕಷ್ಟು(ಅರ್ಧ ಚಮಚೆಗೂ ಹೆಚ್ಚು)

ಎಣ್ಣೆ- ಹುರಿಯಲು ಅಗತ್ಯವಿರುವಷ್ಟು

ಮಾಡುವ ವಿಧಾನ

ಚಿಕನ್ ತೆಗೆದುಕೊಂಡು ಅದನ್ನು ಚಿಕ್ಕದಾಗಿ ತುಂಡು ಮಾಡಿ ಬಳಿಕ ಚೆನ್ನಾಗಿ ತೊಳೆದಿಟ್ಟುಕೊಳ್ಳಬೇಕು. ನಂತರ ಅದಕ್ಕೆ ಅರಸಿನ, ಚಿಲ್ಲಿಸಾಸ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ನಿಂಬೆರಸವನ್ನು ಹಾಕಿ ಕಲೆಸಿ ಸ್ವಲ್ಪ ಹೊತ್ತು ಹಾಗೆಯೇ ಇಡಬೇಕು.

ಇನ್ನೊಂದೆಡೆ ಮೈದಾ ಮತ್ತು ಜೋಳ ಹಿಟ್ಟನ್ನು  ಒಂದು ಪಾತ್ರೆಗೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು, ಹಸಿಮೊಟ್ಟೆ ಹಾಗೂ ಅಡುಗೆ ಸೋಡಾ ಬೆರೆಸಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಮಿಶ್ರಣವನ್ನು ತಯಾರು ಮಾಡಿಕೊಳ್ಳಬೇಕು. ನಂತರ ಮಸಾಲೆ ಮಿಶ್ರಣ ಮಾಡಿಟ್ಟ ಚಿಕನ್ ತುಂಡುಗಳನ್ನು  ತೆಗೆದು ಮೈದಾ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿದು ತೆಗೆದರೆ ಸಿಂಪಲ್ ಚಿಕನ್ ಟಿಕ್ಕಾ ಸೇವಿಸಲು ಸಿದ್ದವಾದಂತೆಯೇ...