ಕರುಕುರು ಉಂಡ್ಲುಕ

ಕರುಕುರು ಉಂಡ್ಲುಕ

Keerthana Bhat   ¦    Sep 08, 2020 11:46:50 AM (IST)
ಕರುಕುರು ಉಂಡ್ಲುಕ

ಹಲಸಿನ ಹಣ್ಣು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ವರ್ಷದಲ್ಲಿ ಒಂದು ಬಾರಿಯಾಗುವ ಈ ಹಣ್ಣಿಗೆ ಸಾಕಷ್ಟು ಬೇಡಿಕೆ ಇದೆ. ಇದರಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಬಹುದು, ಅದರಲ್ಲಿ ಹಲ್ಲು ಬಲಿಷ್ಟವಾಗಿದ್ದವರಿಗಷ್ಟೇ ತಿನ್ನಲು ಮಾಡುವ ಒಂದು ಬಗೆ ಅಂದರೆ ಉಂಡ್ಲುಕ.

ಬೇಕಾಗುವ ಸಾಮಾಗ್ರಿಗಳು: ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಸೊಳೆ, ತೆಂಗಿನಕಾಯಿ ತುರಿ, ಕೊತ್ತಂಬರಿ, ಮೆಣಸು, ಒಣ ತೆಂಗಿನಕಾಯಿ ತುಂಡು, ಬೇವಿನ ಎಲೆ 

ಉಪ್ಪಿನಲ್ಲಿ ಹಾಕಿದ ಹಲಸಿನಕಾಯಿ ಸೊಳೆಯನ್ನು ತೆಗೆದು ರುಬ್ಬಿಕೊಳ್ಳಬೇಕು, ನಂತರ ತೆಂಗಿನಕಾಯಿ ತುರಿ, ಕೊತ್ತಂಬರಿ ಮತ್ತು ಮೆಣಸು ಹಾಕಿ ರುಬ್ಬಬೇಕು. ರುಬ್ಬಿದ ಮಸಾಲೆಗೆ ಅಕ್ಕಿಹಿಟ್ಟು, ಸೆಣ್ಣಗೆ ಹಚ್ಚಿದ ಒಣ ತೆಂಗಿನಕಾಯಿ ತುಂಡು, ಸಣ್ಣಗೆ ಹಚ್ಚಿದ ಬೇವಿನ ಎಲೆ, ಸ್ವಲ್ಪ ಉಪ್ಪು (ಬೇಕಾದಲ್ಲಿ) ಮತ್ತು ರುಬ್ಬಿ ಇಟ್ಟುಕೊಂಡಿರುವ ಹಲಸಿನ ಸೊಳೆಯನ್ನು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಬೇಕು. ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿಯಬೇಕು.