ಮನೆಯಲ್ಲೇ ಮಾಡಿ ಸಿಂಪಲ್ ಬನಾನ ಲಸ್ಸಿ

ಮನೆಯಲ್ಲೇ ಮಾಡಿ ಸಿಂಪಲ್ ಬನಾನ ಲಸ್ಸಿ

LK   ¦    Oct 07, 2020 01:24:01 PM (IST)
ಮನೆಯಲ್ಲೇ ಮಾಡಿ ಸಿಂಪಲ್ ಬನಾನ ಲಸ್ಸಿ

ಕೊರೋನಾ ಸೋಂಕಿನಿಂದಾಗಿ ಹೊರಗೆ ಹೋಗಿ ಆಹಾರ ಸೇವಿಸುವವರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲೂ ತಣ್ಣಗಿನ ಜ್ಯೂಸ್ ಕುಡಿಯುವುದೆಂದರೆ ಒಂಥರಾ ಭಯ ಹೆಚ್ಚಿನವರನ್ನು ಕಾಡುತ್ತದೆ. ಹೀಗಿರುವಾಗ ಕೆಲವೊಂದನ್ನು ನಾವು ಮನೆಯಲ್ಲಿಯೇ ತಯಾರು ಮಾಡಿಕೊಂಡು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾಗಿದೆ. ಹಾಗಾಗಿ ಬಾಳೆಹಣ್ಣಿನಿಂದ ಏನಾದರೂ ಮಾಡಬೇಕೆಂದು ಬಯಸುವವರು ಲಸ್ಸಿ ಮಾಡಬಹುದಾಗಿದೆ. ಇದರ ತಯಾರು ಕೂಡ ಸುಲಭವಾಗಿದೆ. ಹಾಗಾದರೆ ಸಿಂಪಲ್ ಬನಾನ ಲಸ್ಸಿ ಮಾಡುವುದು ಹೇಗೆ ಮತ್ತು ಏನೆಲ್ಲ ಬೇಕು ಎಂಬುದರ ವಿವರ ಇಲ್ಲಿದೆ.

ಬೇಕಾಗುವ ಪದಾರ್ಥಗಳು ಹೀಗಿವೆ

ಬಾಳೆಹಣ್ಣು- ಎರಡು

ಮೊಸರು- ಒಂದೂವರೆ ಕಪ್

ಜೇನು- ಅರ್ಧ ಕಪ್

ನಿಂಬೆ ರಸ- ಅರ್ಧ ಹೋಳು

ಐಸ್ ಮಿಶ್ರಿತ ನೀರು- ಮೂರು ಕಪ್

ಏಲಕ್ಕಿ- ಒಂದು

ಮಾಡುವ ವಿಧಾನ ಈ ರೀತಿಯಲ್ಲಿದೆ..

ಮೊದಲಿಗೆ ಪಕ್ವಗೊಂಡ ಬಾಳೆ ಹಣ್ಣನ್ನು ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು. ನಂತರ ಮಿಕ್ಸಿಗೆ ಅದನ್ನು ಹಾಕಿ ಗಟ್ಟಿ ಮೊಸರನ್ನು ಬೆರೆಸಿ ಚೆನ್ನಾಗಿ ಮಿಕ್ಸಿ ಮಾಡಬೇಕು. ನಂತರ ಅದನ್ನು ತೆಗೆದು ಪಾತ್ರೆಗೆ ಹಾಕಿ ಅದಕ್ಕೆ ನಿಂಬೆರಸ, ಜೇನುತುಪ್ಪ, (ಹೆಚ್ಚಿನ ಸಿಹಿ ಬೇಕಾದರೆ ಸ್ವಲ್ಪ ಸಕ್ಕರೆ ಬೆರೆಸಬಹುದು) ಏಲಕ್ಕಿ ಬೀಜವನ್ನು ಪುಡಿ ಮಾಡಿ ಹಾಕಿ ನಂತರ ಐಸ್ ಮಿಶ್ರಿತ ನೀರು ಬೆರೆಸಿದರೆ ಸಿಂಪಲ್ ಬನಾನ ಲಸ್ಸಿ ಕುಡಿಯಲು ರೆಡಿ.