ಊಟದ ಜತೆಗಿರಲಿ ಸ್ಪೈಸಿ ಎಗ್ ಫ್ರೈ

ಊಟದ ಜತೆಗಿರಲಿ ಸ್ಪೈಸಿ ಎಗ್ ಫ್ರೈ

LK   ¦    Jun 03, 2020 11:47:31 AM (IST)
ಊಟದ ಜತೆಗಿರಲಿ ಸ್ಪೈಸಿ ಎಗ್ ಫ್ರೈ

ಸಾಮಾನ್ಯವಾಗಿ ಹೆಚ್ಚಿನವರು ಖಾರವಾಗಿರುವ ಆಹಾರ ಪದಾರ್ಥವನ್ನು ಇಷ್ಟಪಡುತ್ತಾರೆ. ಅದರಲ್ಲೂ ಮೊಟ್ಟೆ ಮತ್ತು ಮಾಂಸದ ಅಡುಗೆಗಳು ಖಾರವಾಗಿದ್ದಷ್ಟು ಮಜಾ ಜಾಸ್ತಿ. ಹೀಗಾಗಿ ಸ್ಪೈಸಿ ಎಗ್ ಫ್ರೈ ಮಾಡಿದರೆ ಅದರ ಮಜಾವೇ ಮಜಾ.

ಸ್ಪೈಸಿ ಎಗ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು

ಮೊಟ್ಟೆ- ನಾಲ್ಕು

ಎಣ್ಣೆ- ಒಂದೆರಡು ಚಮಚ

ಈರುಳ್ಳಿ- ಒಂದು

ಬೆಳ್ಳುಳ್ಳಿ, ಶುಂಠಿ ಪೇಸ್ಟ್- ಅರ್ಧ ಚಮಚ

ಕೊತ್ತಂಬರಿ ಸೊಪ್ಪು- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಹಸಿಮೆಣಸು- ನಾಲ್ಕು

ನಿಂಬೆರಸ- ಎರಡು ಟೀ ಚಮಚ

 

ಮಾಡುವ ವಿಧಾನ ಹೀಗಿದೆ.

ಮೊದಲಿಗೆ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿಕೊಂಡು ಅದರ ಸಿಪ್ಪೆ ತೆಗೆದು ಎರಡು ಭಾಗ ಮಾಡಿಟ್ಟುಕೊಳ್ಳಬೇಕು. ಹಸಿಮೆಣಸನ್ನು ಚೆನ್ನಾಗಿ ಜಜ್ಜಿಟ್ಟುಕ್ಳೊಂಡು, ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಕೊತ್ತಂಬರಿ ಸೊಪ್ಪನ್ನು ಕೂಡ ಚಿಕ್ಕದಾಗಿ ಹಚ್ಚಿಕೊಳ್ಳಿ.

ಆ ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಹಚ್ಚಿಟ್ಟ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಬೇಕು. ಅದು ಕಂದು ಬಣ್ಣಕ್ಕೆ ತಿರುಗಿದ ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ತಿರುಗಿಸಿ ನಂತರ ಕೊತ್ತಂಬರಿ ಮತ್ತು ಜಜ್ಜಿದ ಮೆಣಸನ್ನು ಹಾಕಿ ಚೆನ್ನಾಗಿ ಕಲಸಿ ಆ ನಂತರ ಮೊಟ್ಟೆಯನ್ನು ಹಾಕಿ ತಿರುವಿ. ಬಳಿಕ ಉಪ್ಪು, ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಇಳಿಸಿದರೆ ಸ್ಪೈಸಿ ಎಗ್ ಫ್ರೈ ಸಿದ್ಧವಾದಂತೆಯೇ...