ಮಸಾಲೆ ಎಗ್ ಫ್ರೈ ಮಾಡಿ ನೋಡಿ..!

ಮಸಾಲೆ ಎಗ್ ಫ್ರೈ ಮಾಡಿ ನೋಡಿ..!

LK   ¦    Jan 01, 2019 03:32:56 PM (IST)
ಮಸಾಲೆ ಎಗ್ ಫ್ರೈ ಮಾಡಿ ನೋಡಿ..!

ಎಗ್‍ನಿಂದ ಹತ್ತಾರು ಖಾದ್ಯಗಳನ್ನು ತಯಾರಿಸಬಹುದು ಅದರಲ್ಲಿ ಮಸಾಲೆ ಎಗ್ ಫ್ರೈ ಒಂದಾಗಿದ್ದು ಊಟಕ್ಕೆ ಇದು ಸಾಥ್ ನೀಡುತ್ತದೆ.

ಮಸಾಲೆ ಎಗ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನ ಹೀಗಿದೆ. ಮಸಾಲೆ ಎಗ್ ಫ್ರೈಗೆ ಬೇಕಾಗುವ ಪದಾರ್ಥಗಳು

ಬೇಯಿಸಿದ ಮೊಟ್ಟೆ- ಆರು

ಮೆಣಸಿನಪುಡಿ- ಒಂದು ಚಮಚ

ಜೀರಿಗೆಪುಡಿ- ಅರ್ಧಚಮಚ

ಅರಶಿನಪುಡಿ-ಅರ್ಧ ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಸ್ವಲ್ಪ

ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಸಾಲೆ ಎಗ್ ಫ್ರೈ ಮಾಡುವ ವಿಧಾನ ಹೀಗಿದೆ

ಮೊದಲಿಗೆ ಮೊಟ್ಟೆಯನ್ನು ಬೇಯಿಸಿಕೊಳ್ಳಬೇಕು. ಬಳಿಕ ಅದರ ಸಿಪ್ಪೆಯನ್ನು ಸುಲಿದು ಮೊಟ್ಟೆಯನ್ನು ಉದ್ದದ ಭಾಗದಿಂದ ಅಡ್ಡಲಾಗಿ ತುಂಡು ಮಾಡಿಕೊಳ್ಳಬೇಕು. ಇನ್ನೊಂದೆಡೆ ಪಾತ್ರೆಯಲ್ಲಿ ಮೆಣಸಿನಪುಡಿ, ಜೀರಿಗೆ ಪುಡಿ, ಅರಶಿನ, ಉಪ್ಪು ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಕಿ ಪೇಸ್ಟ್ ಮಾಡಿಕೊಳ್ಳಬೇಕು.

ಬಳಿಕ ತಯಾರಿಸಿಕೊಂಡ ಮಸಾಲೆಯ ಪೇಸ್ಟ್‍ನ್ನು ಮೊಟ್ಟೆಯ ಕತ್ತರಿಸಿದ ಭಾಗಕ್ಕೆ ಸವರಿ ಕಾವಲಿಯಲ್ಲಿ ಎಣ್ಣೆ ಸವರಿ ಮಸಾಲೆ ಹಚ್ಚಿದ ಮೊಟ್ಟೆಯ ಭಾಗವನ್ನು ಕಾವಲಿ ಮೇಲಿಟ್ಟು ನಿಧಾನ ಉರಿಯಲ್ಲಿ ಕಾಯಿಸಬೇಕು. ಕಂದು ಬಣ್ಣ ಬಂದ ಬಳಿಕ ಇಳಿಸಿ ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಬೇಕು. (ರುಚಿಗೆ ಬೇಕಾದರೆ ಅದರ ಮೇಲೆ ನಿಂಬೆ ರಸ ಹಾಕಿಕೊಳ್ಳಬಹುದು.) ಇದನ್ನು ಊಟದೊಂದಿಗೆ ಬಳಸಿದರೆ ಚೆನ್ನಾಗಿರುತ್ತದೆ.