ಜೀರಿಗೆ ಅನ್ನ ತಯಾರಿಯೂ ಸುಲಭ, ರುಚಿಯು ಅದ್ಭುತ

ಜೀರಿಗೆ ಅನ್ನ ತಯಾರಿಯೂ ಸುಲಭ, ರುಚಿಯು ಅದ್ಭುತ

HSA   ¦    Jan 06, 2020 01:02:26 PM (IST)
ಜೀರಿಗೆ ಅನ್ನ ತಯಾರಿಯೂ ಸುಲಭ, ರುಚಿಯು ಅದ್ಭುತ

ಪ್ರತಿನಿತ್ಯವೂ ಅದೇ ಅದೇ ಬೆಳ್ತಿಗೆ ಅಕ್ಕಿ, ಸಾರು ತಿಂದು ಬೋರು ಹೊಡೆದಿರುವಂತವರಿಗೆ ನಾವೊಂದು ಹೊಸ ವಿಧಾನ ಹೇಳಿಕೊಡಲಿದ್ದೇವೆ. ಇಲ್ಲಿ ರುಚಿಕರವಾದ ಜೀರಿಗೆ ಅನ್ನವನ್ನು ತಯಾರಿಸಿಕೊಳ್ಳುವುದು ಹೇಗೆ ಎಂದು ತಿಳಿಯುವ.

 

ಬೇಕಾಗುವ ಸಾಮಗ್ರಿಗಳು

1 ಚಮಚ ತುಪ್ಪ

1 ಮಧ್ಯಮ ಗಾತ್ರ ದಾಲ್ಚಿನಿ,

1 ಕರಿಬೇವಿನ ಎಲೆಗಳು,

4-5 ಲವಂಗ

1 ಚಮಚ ಜೀರಿಗೆ

1 ಹಸಿ ಮೆಣಸು

1ಕಪ್ ದೊಡ್ಡ ಬಾಸ್ಮತಿ ಅಕ್ಕಿ

2 ಚಮಚ ತಾಜಾ ಕೊತ್ತಂಬರಿ ಅಕ್ಕಿ

½ ಚಮಚ ಉಪ್ಪು

ನೀರಿನ ಪ್ರಮಾಣ

ಜೀರಿಗೆ ಅನ್ನ ಮಾಡಿಕೊಳ್ಳಲು 1:2ರ ಪ್ರಮಾಣದಲ್ಲಿ ನೀರು ಬಳಸಬೇಕು. ಇದಕ್ಕೆ ಒಂದು ಕಪ್ ಅಕ್ಕಿಗೆ ಎರಡು ಕಪ್ ನೀರು ಹಾಕಿ. ಆವಿಯು ಹೊರಗೆ ಹೋಗದಂತೆ ನೋಡಿಕೊಳ್ಳಿ. ಸರಿಯಾದ ಪ್ರಮಾಣದಲ್ಲಿ ನೀರು ಹಾಕಿದರೆ ಅನ್ನ ಸಮ ಪ್ರಮಾಣದಲ್ಲಿ ಬೇಯುವುದು. ಕುಕ್ಕರ್ ನಲ್ಲಿ ಬೇಯಿಸುತ್ತಿದ್ದರೆ ಆಗ 2.25 ಕಪ್ ಬಳಸಿ.

 

ತಯಾರಿಸುವ ವಿಧಾನ

ಬಾಸ್ಮತಿ ಅಕ್ಕಿ ಕೆಲವು ಸಲ ತೊಳೆದು ನೆನೆಸಿಡಿ. 30 ನಿಮಿಷ ಕಾಲ ಹೀಗೆ ಇರಲಿ.

ಅಡುಗೆಗೆ ತಯಾರಾದಾಗ ಅಕ್ಕಿ ನೀರನ್ನು ಸೋಸಿಕೊಳ್ಳಿ ಮತ್ತು ಅಕ್ಕಿ ತೆಗೆದು ಬದಿಗಿಡಿ.

ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಮಸಾಲೆ ಮತ್ತು ಜೀರಿಗೆ ಹಾಕಿ. ಜೀರಿಗೆ ಸಿಡಿಯಲು ಆರಂಭಿಸಿದ ಬಳಿಕ ಹಸಿ ಮೆಣಸು ಮತ್ತು ಅಕ್ಕಿ ಹಾಕಿ. ಅಕ್ಕಿಯನ್ನು ಹಾಗೆ ಮಿಶ್ರಣ ಮಾಡಿಕೊಳ್ಳಿ.

ಈಗ ಎರಡು ಕಪ್ ನೀರು ಮತ್ತು ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಇದರ ಬಳಿಕ ಬೇಯಿಸಲು ಇಡಿ. ಬೆಂಕಿಯನ್ನು ಕಡಿಮೆ ಮಾಡಿ. ಪಾತ್ರೆಯ ಮುಚ್ಚಲ ಮುಚ್ಚಿಕೊಳ್ಳಿ ಮತ್ತು ಐದರಿಂದ ಆರು ನಿಮಿಷ ಬೇಯಿಸಿ. ಸರಿಯಾಗಿ ಅನ್ನ ಬೇಯುವ ತನಕ ಹಾಗೆ ಇರಲಿ. ಇದರ ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ ಬಡಿಸಿ.