ಸ್ಟ್ರೀಟ್ ಫುಡ್ ತಿನ್ನಬೇಕೆಂದು ಅನಿಸುತ್ತಿದೆಯೇ? ಆಲೂ ಚಾಟ್ ಮಾಡಿ ಸವಿಯಿರಿ

ಸ್ಟ್ರೀಟ್ ಫುಡ್ ತಿನ್ನಬೇಕೆಂದು ಅನಿಸುತ್ತಿದೆಯೇ? ಆಲೂ ಚಾಟ್ ಮಾಡಿ ಸವಿಯಿರಿ

Keerthana Bhat   ¦    Oct 05, 2020 03:43:20 PM (IST)
ಸ್ಟ್ರೀಟ್ ಫುಡ್ ತಿನ್ನಬೇಕೆಂದು ಅನಿಸುತ್ತಿದೆಯೇ? ಆಲೂ ಚಾಟ್ ಮಾಡಿ ಸವಿಯಿರಿ

ಆಲೂ ಚಾಟ್ ಬೇಯಿಸಿದ ಆಲೂಗಡ್ಡೆಯಿಂದ ತಯಾರಿಸಿದ ಅತ್ಯಂತ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾಗಿದೆ. ಸಂಜೆಯ ಸಮಯದಲ್ಲಿ ಮಕ್ಕಳೂ ಮಾತ್ರವಲ್ಲದೇ ಹಿರಿಯರೂ ಕೂಡ ಈ ಆಹಾರವನ್ನು ಇಷ್ಟಪಡುತ್ತಾರೆ. ಈ ಸಾಂಕ್ರಾಮಿಕದ ನಡುವೆ ಹೊರ ಹೋಗಿ ಆಹಾರ ಸೇವಿಸಲು ಇಚ್ಚಿಸದ ಜನರು ಮನೆಯಲ್ಲಿ ಇದನ್ನ ತಯಾರಿಸಿ ಸವಿಯಬಹುದು.

ಬೇಕಾಗುವ ಸಾಮಾಗ್ರಿಗಳು:

ಮುಕ್ಕಾಲು ಕಪ್ ಬೇಯಿಸಿದ ಆಲೂಗಡ್ಡೆ

ಒಂದುವರೆ ಕಪ್ ಹುರಿದ ಪನ್ನೀರ್ ತುಂಡುಗಳು

ಐದು ಟೀ ಸ್ಪೂನ್ ಎಣ್ಣೆ

ಮುಕ್ಕಾಲು ಕಪ್ ಬೇಯಿಸಿದ ಬಟಾಣಿ

ಚಾಟ್ ಮಸಾಲ

ಶುಂಠಿ

ಹಸಿಮೆಣಸು

ರುಚಿಗೆ ತಕ್ಕಷ್ಟು ಉಪ್ಪು

ಒಂದು ಟೇಬಲ್ ಸ್ಪೂನ್ ನಿಂಬೆ ರಸ

ಹೆಚ್ಚಿದ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:  ಒಂದು ಪಾನ್‍ಗೆ ಎರಡು ಚಮಚ ಎಣ್ಣೆ ಹಾಕಿ ಬೇಯಿಸಿದ ಆಲೂಗಡ್ಡೆಯನ್ನು ಹಾಕಿ ಎಂಟರಿಂದ ಹತ್ತು ನಿಮಿಷ ಬೇಯಿಸಿಕೊಳ್ಳಿ. ಬೇಯಿಸಿದ ಆಲೂಗಡ್ಡೆಯನ್ನು ಬೇರೆ ಪಾತ್ರೆಯಲ್ಲಿ ತೆಗೆದಿಟ್ಟು, ನಂತರ ಅದೇ ಪಾನ್‍ಗೆ ಬಟಾಣಿ ಮತ್ತು ಶುಂಠಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ ಪನ್ನೀರ್ ತುಂಡುಗಳು, ಚಾಟ್ ಮಸಾಲ, ರುಚಿಕೆ ತಕ್ಕಷ್ಟು ಉಪ್ಪು, ಹೆಚ್ಚಿದ ಹಸಿಮೆಣಸು ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ. ಕೊನೆಗೆ ತೆಗೆದಿಟ್ಟ ಆಲೂಗಡ್ಡೆಯನ್ನು ಮಿಕ್ಸ್ ಮಾಡಿಕೊಳ್ಳಿ. ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದಾಗ ಅಲೂ ಚಾಟ್ ಸವಿಯಲು ಸಿದ್ದ