ಚಪಾತಿ ಜತೆಗಿರಲಿ ಪಾಲಕ್ ಕಾಬೂಲ್ ಮಸಾಲ

ಚಪಾತಿ ಜತೆಗಿರಲಿ ಪಾಲಕ್ ಕಾಬೂಲ್ ಮಸಾಲ

LK   ¦    Dec 06, 2018 02:02:36 PM (IST)
ಚಪಾತಿ ಜತೆಗಿರಲಿ ಪಾಲಕ್ ಕಾಬೂಲ್ ಮಸಾಲ

ಚಪಾತಿ, ರೋಟಿಗೆ ಪಾಲಕ್ ನಿಂದ ತಯಾರಿಸಲ್ಪಡುವ ಎಲ್ಲ ಪದಾರ್ಥಗಳು ಸಾಥ್ ಕೊಡುತ್ತವೆ. ಅದರಲ್ಲೊಂದು ಪಾಲಕ್ ಕಾಬೂಲ್ ಮಸಾಲ. ಇದನ್ನು ತಯಾರಿಸಿ ಚಪಾತಿ, ರೋಟಿ ಜತೆಗೊಮ್ಮೆ ಸೇವಿಸಿ ನೋಡಿ ಸಖತ್ ಮಜಾ ಸಖತ್ ಖುಷಿಕೊಡುತ್ತದೆ.

ಪಾಲಕ್ ಕಾಬೂಲ್ ಮಸಾಲ ಮಾಡಲು ಬೇಕಾದ ಸಾಮಗ್ರಿಗಳ ವಿವರಗಳು

ಪಾಲಕ್ ಸೊಪ್ಪು- 2 ಕಟ್ಟು

ಕಾಬೂಲ್- 2 ಕಪ್

ಈರುಳ್ಳಿ- 2

ಟೊಮ್ಯಾಟೋ- 2

ಉಪ್ಪು- ರುಚಿಗೆ ತಕ್ಕಂತೆ

KAರದಪುಡಿ- 1 ಚಮಚ

ಒಣಮೆಣಸು- 2

ಅರಶಿನಪುಡಿ- ಸ್ವಲ್ಪ

ಗರಂಮಸಾಲ- ಅರ್ಧ ಚಮಚ

ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ

ಎಣ್ಣೆ- ಸ್ವಲ್ಪ

ಪಾಲಕ್ ಕಾಬೂಲ್ ಮಸಾಲ ಮಾಡುವ ವಿಧಾನ ಹೀಗಿದೆ..

ಮೊದಲಿಗೆ ಕಾಬೂಲನ್ನು ಸುಮಾರು ಐದಾರು ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ. ಆ ನಂತರ ಅದನ್ನು ಚೆನ್ನಾಗಿ ಬೇಯಿಸಿಟ್ಟುಕೊಳ್ಳಿ. ಇನ್ನೊಂದೆಡೆ ಪಾಲಕ್ ಸೊಪ್ಪನ್ನು ಹಚ್ಚಿಟ್ಟುಕೊಂಡು ಅದನ್ನು ಕುಕ್ಕರ್‍ ನಲ್ಲಿ ಸ್ವಲ್ಪ ನೀರು ಹಾಕಿ ಒಂದು ವಿಶಲ್ ನಷ್ಟು ಕೂಗಿಸಿ ಇಳಿಸಿಟ್ಟುಕೊಳ್ಳಬೇಕು. ಇಷ್ಟನ್ನು ಸಿದ್ಧಪಡಿಸಿಟ್ಟುಕೊಂಡ ಬಳಿಕ ಈರುಳ್ಳಿ ಹಾಗೂ ಟೊಮ್ಯಾಟೋವನ್ನು ಹಚ್ಚಿಟ್ಟುಕೊಳ್ಳಬೇಕು.

ಆ ನಂತರ ಸ್ವೌವ್ ಮೇಲೆ ಪಾತ್ರೆಯಿಟ್ಟು ಅದಕ್ಕೆ ಎಣ್ಣೆ ಹಾಕಿ. ಅದು ಕಾದ ಬಳಿಕ ಹಚ್ಚಿಟ್ಟ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಬೇಕು. ಅದು ಬೆಂದು ಕಂದು ಬಣ್ಣಕ್ಕೆ ಬರುತ್ತಿದ್ದಂತೆಯೇ ಟೊಮ್ಯಾಟೋ ಹಾಕಿ ಎರಡನ್ನು ಮಿಶ್ರ ಮಾಡಿ ಆ ನಂತರ ಅದಕ್ಕೆ ಪಾಲಕ್ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಹುರಿಯಬೇಕು. ಆ ನಂತರ ಕಾರದ ಪುಡಿ, ಗರಂಮಸಾಲ, ಉಪ್ಪು, ಅರಿಶಿನಪುಡಿ, ಒಣಮೆಣಸು ಹಾಕಿ ಎಲ್ಲವನ್ನು ಸೇರಿಸಿ ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಕುದಿಸಿ ಆ ನಂತರ ಅದಕ್ಕೆ ಮೊದಲೇ ಬೇಯಿಸಿಟ್ಟ ಕಾಬೂಲ್‍ನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿದರೆ ಅಲ್ಲಿಗೆ ಪಾಲಕ್ ಕಾಬೂಲ್ ಮಸಾಲ ರೆಡಿಯಾದಂತೆಯೇ...