ಸುಲಭವಾಗಿ ಮಾಡಿ ಬಸಳೆ ಸೊಪ್ಪಿನ ಬಜ್ಜಿ

ಸುಲಭವಾಗಿ ಮಾಡಿ ಬಸಳೆ ಸೊಪ್ಪಿನ ಬಜ್ಜಿ

YK   ¦    Dec 16, 2019 11:45:16 AM (IST)
ಸುಲಭವಾಗಿ ಮಾಡಿ ಬಸಳೆ ಸೊಪ್ಪಿನ ಬಜ್ಜಿ

ಬಸಳೆ ಸೊಪ್ಪಿನಿಂದ ಹಲವು ರೀತಿಯ ಖಾದ್ಯಗಳನ್ನು ಮಾಡಬಹುದು. ಆರೋಗ್ಯಕ್ಕೂ ಉತ್ತಮವಾಗಿರುವ ಬಸಳೆಯಿಂದ ಸಾಂಬಾರ್, ಪಲ್ಯ, ಪಕೋಡ ಸೇರಿದಂತೆ ಬಜ್ಜಿಯನ್ನು ತಯಾರಿಸಬಹುದು. ಬಸಳೆ ಬಜ್ಜಿ ಸಂಜೆ ಕಾಫಿ ಜತೆ ಹಾಗೂ ಮಧ್ಯಾಹ್ನ ದ ಊಟದ ಜತೆಗೆ ತುಂಬಾ ರುಚಿಯಾಗಿರುತ್ತದೆ. ಅದಲ್ಲದೆ ಬಲು ಬೇಗನೇ ಮಾಡಿಕೊಳ್ಳಬಹುದು.

ಬಸಳೆ ಬಜ್ಜಿಗೆ ಬೇಕಾಗುವ ಸಾಮಾಗ್ರಿಗಳು
ಬಸಳೆ ಸೊಪ್ಪು
ಕಡಲೆಹಿಟ್ಟು
ಖಾರದ ಪುಡಿ
ಉಪ್ಪು
ಎಣ್ಣೆ
ಇಂಗು

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಬೇಕಾಗುವಷ್ಟು ಕಡಲೆಹಿಟ್ಟನ್ನು ಹಾಕಿ ಅದಕ್ಕೆ ಉಪ್ಪು, ಖಾರದ ಪುಡಿ, ಇಂಗು ಹಾಗೂ ಜೀರಿಗೆ ಹಾಕಿ ನೀರು ಹಾಕಿ ಮಿಕ್ಸ್ ಮಾಡಿ. ಇದೀಗ ಬಸಳೆ ಸೊಪ್ಪನ್ನು ಚೆನ್ನಾಗಿ ತೊಳೆಯಿರಿ.

ನಂತರ ಮಿಕ್ಸ್ ಮಾಡಿ ಇಟ್ಟುಕೊಂಡ ಕಡಲೆ ಹಿಟ್ಟಿನೊಂದಿಗೆ ಬಸಳೆ ಸೊಪ್ಪನ್ನು ನೆನೆಸಿ ಕಾದ ಎಣ್ಣೆಯಲ್ಲಿ ಬಿಡಿ. ಇದೀಗ ಗರಿಗರಿಯಾದ ಬಸಳೆ ಬಜ್ಜಿ ಸವಿಯಲು ಸಿದ್ದ. ತುಂಬಾ ಬೇಗನೆ ಇದನ್ನು ರೆಡಿ ಮಾಡಿಕೊಳ್ಳಬಹುದು. ಅದಲ್ಲದೆ ಆರೋಗ್ಯಕ್ಕೂ ಈ ಸೊಪ್ಪು ತುಂಬಾ ಒಳ್ಳೆಯದು.