ತಂದೂರಿ ಫಿಶ್ ಫ್ರೈ ಸವಿದು ನೋಡಿ...

ತಂದೂರಿ ಫಿಶ್ ಫ್ರೈ ಸವಿದು ನೋಡಿ...

LK   ¦    Sep 23, 2020 12:42:26 PM (IST)
ತಂದೂರಿ ಫಿಶ್ ಫ್ರೈ ಸವಿದು ನೋಡಿ...

ಮೀನಿನಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸಬಹುದಾಗಿದೆ. ಅದರಲ್ಲೂ ಮಸಾಲೆಯುಕ್ತ ಹುರಿದ ತಂದೂರಿ ಮೀನಂತು ಬಾಯಲ್ಲಿ ನೀರೂರಿಸುತ್ತದೆ. ಇದನ್ನು ತಯಾರಿಸುವುದು ಕೂಡ ಸುಲಭವಾಗಿದೆ. ಹಾಗಾದರೆ ತಂದೂರಿ ಫಿಶ್ ಫ್ರೈ ಮಾಡುವುದು ಹೇಗೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ತಂದೂರಿ ಫಿಶ್ ಫ್ರೈಗೆ ಬೇಕಾಗುವ ಪದಾರ್ಥಗಳು

ಮೀನು- 500 ಗ್ರಾಂ

ಬೆಳ್ಳುಳ್ಳಿ ಶುಂಠಿ ಪೇಸ್ಟ್- ಒಂದೂವರೆ ಟೀ ಚಮಚ

ಕಾರದಪುಡಿ- ಎರಡು ಟೀ ಚಮಚ

ಜೀರಿಗೆಪುಡಿ- ಒಂದು ಟೀ ಚಮಚ

ಅರಸಿನಪುಡಿ- ಅರ್ಧ ಟೀ ಚಮಚ

ಗರಂ ಮಸಾಲೆ- ಒಂದು ಟೀ ಚಮಚ

ನಿಂಬೆರಸ- ಎರಡು ಟೀ ಚಮಚ

ತಂದೂರಿ ಬಣ್ಣ- ಚಿಟಿಕೆಯಷ್ಟು

ಉಪ್ಪು- ಎರಡು ಟೇಬಲ್ ಚಮಚ

ಎಣ್ಣೆ- ಹುರಿಯಲು ಅಗತ್ಯವಿರುವಷ್ಟು

ತಂದೂರಿ ಫಿಶ್ ಫ್ರೈ ಮಾಡುವ ವಿಧಾನ ಹೀಗಿದೆ...

ಮೊದಲಿಗೆ ಮೀನು ತುಂಡುಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಸ್ವಲ್ಪ ಉಪ್ಪಿನಲ್ಲಿ ಹಾಕಿಡಬೇಕು. ಇನ್ನೊಂದೆಡೆ ಬೆಳ್ಳುಳ್ಳಿ ಶುಂಠಿ ಪೇಸ್ಟ್, ಕಾರದಪುಡಿ, ಜೀರಿಗೆಪುಡಿ, ಅರಸಿನಪುಡಿ, ಗರಂ ಮಸಾಲೆ, ತಂದೂರಿ ಬಣ್ಣ, ಉಪ್ಪು ಮತ್ತು ನಿಂಬೆ ರಸವನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕುವ ಮೂಲಕ ಮಸಾಲೆಯ ಪೇಸ್ಟ್ ನ್ನು ತಯಾರಿಸಬೇಕು. ಅದಕ್ಕೆ ಮೀನನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಸುಮಾರು ಅರ್ಧ ಗಂಟೆಗಳ ಕಾಲ ಇಡಬೇಕು.

ಮೀನು ತುಂಡುಗಳಿಗೆ ಚೆನ್ನಾಗಿ ಮಸಾಲೆ ಹಿಡಿದ ಬಳಿಕ ಅದನ್ನು ತೆಗೆದು ಕಾವಲಿಯಲ್ಲಿ  ಎಣ್ಣೆ ಹಾಕಿ ನಿಧಾನ ಉರಿಯಲ್ಲಿ ಮೀನು ತುಂಡುಗಳನ್ನು ಎರಡು ಬದಿಯಲ್ಲಿ ಕಂದು ಬಣ್ಣ ಬರುವ ತನಕ ಕಾಯಿಸಿ ತೆಗೆದರೆ ತಂದೂರಿ ಫಿಶ್ ಫ್ರೈ ರೆಡಿಯಾದಂತೆಯೇ...