ಬಿಸಿಬಿಸಿ ಕಾಫಿ ಜತೆ ಮೈಸೂರು ಮಸಾಲೆ ವಡೆ ಸವಿದು ಬಿಡಿ

ಬಿಸಿಬಿಸಿ ಕಾಫಿ ಜತೆ ಮೈಸೂರು ಮಸಾಲೆ ವಡೆ ಸವಿದು ಬಿಡಿ

LK   ¦    Dec 28, 2018 02:06:46 PM (IST)
ಬಿಸಿಬಿಸಿ ಕಾಫಿ ಜತೆ ಮೈಸೂರು ಮಸಾಲೆ ವಡೆ ಸವಿದು ಬಿಡಿ

ಬೆಳಗ್ಗೆ ಮತ್ತು ಸಂಜೆ ಬಿಸಿ ಬಿಸಿ ಕಾಫಿ ಜತೆ ಮೈಸೂರು ಮಸಾಲೆ ವಡೆ ಸೇವಿಸುವ ಮಜಾವೇ ಮಜಾ. ಈ ಮೈಸೂರು ವಡೆಯನ್ನು ಮಾಡುವುದು ಕೂಡ ಸುಲಭವೇ. ಇದನ್ನು ಮಾಡುವುದು ಹೇಗೆ ಮತ್ತು ಅದಕ್ಕೆ ಬೇಕಾಗುವ ಪದಾರ್ಥಗಳೇನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಮೈಸೂರು ಮಸಾಲೆ ವಡೆ ತಯಾರಿಸಲು ಬೇಕಾಗುವ ಸಾಮಗ್ರಿಗಳು

ತೊಗರಿಬೇಳೆ- ಅರ್ಧ ಕಪ್

ಕಡ್ಲೆಬೇಳೆ- ಅರ್ಧಕಪ್

ಹೆಸರುಬೇಳೆ- ಅರ್ಧಕಪ್

ಉದ್ದಿನಬೇಳೆ- ಅರ್ಧಕಪ್

ಗೋಡಂಬಿ- ಸ್ವಲ್ಪ

ಕೊತ್ತಂಬರಿ- ಸ್ವಲ್ಪ

ಕರಿಬೇವು- ಸ್ವಲ್ಪ

ಈರುಳ್ಳಿ- ಒಂದು

ಉಪ್ಪು- ರುಚಿಗೆ ತಕ್ಕಷ್ಟು

ಹಸಿಮೆಣಸಿನಕಾಯಿ-ನಾಲ್ಕೈದು

ಕೊತ್ತಂಬರಿಸೊಪ್ಪು- ಸ್ವಲ್ಪ

ಎಣ್ಣೆ- ಕರಿಯಲು ಬೇಕಾಗುವಷ್ಟು

ಮೈಸೂರು ಮಸಾಲೆ ವಡೆ ಮಾಡುವ ವಿಧಾನ ಹೀಗಿದೆ.

ಮೊದಲಿಗೆ ಕಡ್ಲೆಬೇಳೆ, ಹೆಸರುಬೇಳೆ, ಉದ್ದಿನಬೇಳೆ, ತೊಗರಿಬೇಳೆಯನ್ನು ಸುಮಾರು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಯಲು ಹಾಕಬೇಕು. ಮತ್ತೊಂದೆಡೆ ಈರುಳ್ಳಿ, ಮೆಣಸಿನ ಕಾಯಿಯನ್ನು ಚಿಕ್ಕದಾಗಿ ಹಚ್ಚಿಕೊಳ್ಳಬೇಕು.

ನೆನೆಯಲು ಹಾಕಿದ್ದ ಬೇಳೆಗಳನ್ನು ನೀರಿನಿಂದ ಬಸಿದು ಅದನ್ನು ಮಿಕ್ಸಿಯಲ್ಲಿ ತರಿತರಿಯಾಗಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಬಳಿಕ ಅದಕ್ಕೆ ಹಚ್ಚಿಟ್ಟ ಈರುಳ್ಳಿ, ಮೆಣಸಿನಕಾಯಿ ಹಾಗೂ ಕೊತ್ತಂಬರಿ, ಕರಿಬೇವು, ರುಚಿಗೆ ತಕ್ಕಂತೆ ಉಪ್ಪು ಹಾಕಿ ಎಲ್ಲವನ್ನು ಚೆನ್ನಾಗಿ ಬೆರೆಸಬೇಕು. ಆ ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಅದನ್ನು ಚಪ್ಪಟೆಯಾಗಿ ಮಾಡಿ ಎಣ್ಣೆಯಲ್ಲಿ ಹಾಕಿ ಕರಿದು ತೆಗೆದರೆ ಮೈಸೂರು ಮಸಾಲೆ ವಡೆ ರೆಡಿ.