ಮಶ್ರೂಮ್ ಮಿಕ್ಸ್ ಚಿಕನ್ ಫ್ರೈ ರುಚಿ ನೋಡಿ

ಮಶ್ರೂಮ್ ಮಿಕ್ಸ್ ಚಿಕನ್ ಫ್ರೈ ರುಚಿ ನೋಡಿ

LK   ¦    May 23, 2020 03:05:47 PM (IST)
ಮಶ್ರೂಮ್ ಮಿಕ್ಸ್ ಚಿಕನ್ ಫ್ರೈ ರುಚಿ ನೋಡಿ

ಮಶ್ರೂಮ್ ಸಾಮಾನ್ಯವಾಗಿ ಮಾಂಸಪ್ರಿಯರು ಇಷ್ಟಪಡುತ್ತಾರೆ. ಮಲೆನಾಡಿನಲ್ಲಿ ವಿವಿಧ ಬಗೆಯ ಮಶ್ರೂಮ್ ಗಳು ಸಿಗುತ್ತವೆ. ಪಟ್ಟಣಗಳಲ್ಲಿಯೂ ಮಶ್ರೂಮ್ ಮಾರಾಟ ಮಾಡಲಾಗುತ್ತದೆ. ಈ ಮಶ್ರೂಮ್ ಮತ್ತು ಚಿಕನ್ ಸೇರಿಸಿ ಫ್ರೈ ಮಾಡಿದರೆ ಅದರ ರುಚಿ ವಿಭಿನ್ನವಾಗಿರುತ್ತದೆ.

ಮಶ್ರೂಮ್ ಮಿಕ್ಸ್ ಚಿಕನ್ ಫ್ರೈಗೆ ಬೇಕಾಗುವ ಪದಾರ್ಥಗಳು

ಚಿಕನ್- 500 ಗ್ರಾಂ

ಮಾರೂಮ್- 200ಗ್ರಾಂ

ಸೋಯಾಸಾಸ್- 1 ಟೀ ಚಮಚ

ಶುಂಠಿ ಬೆಳ್ಳುಳ್ಳಿ ಪೇಸ್ಟ್- 1ಚಮಚ

ಎಣ್ಣೆ- ಹುರಿಯಲು ಅಗತ್ಯವಿರುವಷ್ಟು

ಮೆಣಸಿನಪುಡಿ- 2ಚಮಚ

ಉಪ್ಪು- ರುಚಿಗೆ ತಕ್ಕಂತೆ

ಕೊತ್ತಂಬರಿ ಸೊಪ್ಪು- ಸ್ವಲ್ಪ

ನಿಂಬೆರಸ- 1 ಚಮಚ

ಮಾಡುವ ವಿಧಾನ ಹೀಗಿದೆ..

ಮೊದಲಿಗೆ ಚಿಕನ್ ಸಿದ್ಧ ಮಾಡಿಟ್ಟುಕೊಂಡು ಅದಕ್ಕೆ ಒಂದು ಚಮಚ ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಟ್ಟುಕೊಳ್ಳಿ. ಇನ್ನೊಂದೆಡೆ ಮಶ್ರೂಮ್‍ನ್ನು ಶುಚಿಮಾಡಿ ಚಿಕ್ಕದಾಗಿ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಬೇಕು.

ಆ ನಂತರ ಒಂದು ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಎಣ್ಣೆ ಹಾಕಿ ನಿಧಾನ ಉರಿಯಲ್ಲಿ ಕಾಯಿಸಿ ಬಳಿಕ ಬೇಯಿಸಿದ ಚಿಕನನ್ನು ಅದಕ್ಕೆ ಹಾಕಿ ನಂತರ ಮೆಣಸಿನಪುಡಿ, ಸೋಯಾಸಾಸ್, ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನು ಹಾಕಿಕೊಂಡು ಚೆನ್ನಾಗಿ ಹುರಿಯಬೇಕು. ಚಿಕನ್ ಬೇಯುತ್ತಾ ಕಂದು ಬಣ್ಣಕ್ಕೆ ಮರಳಿದಾಗ ನಿಂಬೆ ರಸವನ್ನು ಹಾಕಿ ಚೆನ್ನಾಗಿ ತಿರುಗಿಸಿ ನಂತರ ಮಶ್ರೂಮ್‍ನ್ನು ಹಾಕಿ ಬಳಿಕ ಸ್ವಲ್ಪ ಹೊತ್ತು ಮುಚ್ಚಿ ಬೇಯಿಸಿ. ಆ ನಂತರ ಚೆನ್ನಾಗಿ ತಿರುವುತ್ತಾ ಅಣಬೆ ಬೆಂದ ಬಳಿಕ ಕೊತ್ತಂಬರಿ ಸೊಪ್ಪು ಉದುರಿಸಿ ಇಳಿಸಿ ನಂತರ ಊಟಕ್ಕೆ ಬಳಸಿಕೊಳ್ಳಿ.