ಸವಿದು ನೋಡಿ ನೇಂದ್ರ ಬಾಳೆಹಣ್ಣಿನ ಬಜ್ಜಿ

ಸವಿದು ನೋಡಿ ನೇಂದ್ರ ಬಾಳೆಹಣ್ಣಿನ ಬಜ್ಜಿ

LK   ¦    Nov 30, 2018 01:13:21 PM (IST)
ಸವಿದು ನೋಡಿ ನೇಂದ್ರ ಬಾಳೆಹಣ್ಣಿನ ಬಜ್ಜಿ

ಬೆಳಗ್ಗಿನ ತಿಂಡಿಗೆ ಅಥವಾ ಸಂಜೆಯ ಕಾಫಿಗೆ ಸವಿಯಲು ನೇಂದ್ರ ಬಾಳೆಹಣ್ಣಿನ ಬಜ್ಜಿ ಮಜಾ ಕೊಡುತ್ತದೆ. ಇದನ್ನು ಮಾಡುವುದು ಕೂಡ ಸುಲಭವೇ.. ನೇಂದ್ರ ಬಾಳೆಹಣ್ಣಿನ ಬಜ್ಜಿ ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನದ ಬಗ್ಗೆ ಇಲ್ಲಿದೆ. 

ನೇಂದ್ರ ಬಾಳೆಹಣ್ಣಿನ ಬಜ್ಜಿ ಮಾಡಲು ಬೇಕಾಗುವ ಪದಾರ್ಥಗಳು 

ಮಾಗಿದ ನೇಂದ್ರ ಬಾಳೆ ಹಣ್ಣುಗಳು- 1ಕೆಜಿ 

ಮೈದಾ – 2ಕಪ್ 

ಅರಿಶಿಣಪುಡಿ- ಸ್ವಲ್ಪ 

ಸಕ್ಕರೆ- ಸಿಹಿಗೆ ಬೇಕಾಗುವಷ್ಟು (ಅಂದಾಜು 4ಚಮಚ) 

ಏಲಕ್ಕಿಪುಡಿ- ಚಿಟಿಕೆಯಷ್ಟು 

ಉಪ್ಪು- ರುಚಿಗೆ ಬೇಕಾಗುವಷ್ಟು 

ಅಡುಗೆ ಸೋಡಾ- ಚಿಟಿಕೆಯಷ್ಟು 

ಜೀರಿಗೆ- ಸ್ವಲ್ಪ 

ಎಣ್ಣೆ- ಕರಿಯಲು ಬೇಕಾಗುವಷ್ಟು 

ನೇಂದ್ರಬಾಳೆಹಣ್ಣಿನ ಬಜ್ಜಿ ಮಾಡುವ ವಿಧಾನ ಹೀಗಿದೆ. 

ನೇಂದ್ರಬಾಳೆ ಹಣ್ಣನ್ನು ತೆಗೆದುಕೊಂಡು ಸಿಪ್ಪೆ ಸುಲಿದು ಉದ್ದುದ್ದವಾಗಿ ತೆಳ್ಳಗೆ ಕತ್ತರಿಸಿಟ್ಟುಕೊಳ್ಳಬೇಕು. ಇನ್ನೊಂದೆಡೆ ಒಂದು ಪಾತ್ರೆಯಲ್ಲಿ ಮೈದಾ ಹಾಕಿ ಅದಕ್ಕೆ ಸಕ್ಕರೆ, ಏಲಕ್ಕಿಪುಡಿ, ಉಪ್ಪು, ಸೋಡಾ, ಅರಿಶಿಣಪುಡಿ ಎಲ್ಲವನ್ನು ಸೇರಿಸಿ ಬಳಿಕ ಅದಕ್ಕೆ ಸ್ವಲ್ಪ ನೀರು ಹಾಕಿ ಎಲ್ಲವೂ ಮಿಶ್ರಣವಾಗುವಂತೆ ಕಲೆಸಿಕೊಳ್ಳಬೇಕು. ಜತೆಗೆ ಮೈದಾದ ಗಂಟು ಉಳಿಯದಂತೆ  ನೋಡಿಕೊಳ್ಳಿ. ಬಳಿಕ ಅದು ದೋಸೆ ಹಿಟ್ಟಿನ ಹದದಲ್ಲಿರುವಂತೆ ನೋಡಿಕೊಂಡು ಬೇಕಾದರೆ ನೀರು ಹಾಕಿ. 

ಆ ನಂತರ ಒಲೆಯಲ್ಲಿ ಬಾಣಲೆಯಿಟ್ಟು ಅದಕ್ಕೆ ಎಣ್ಣೆ ಸುರಿದು ಅದು ಕಾದ ಬಳಿಕ ಕತ್ತರಿಸಿಟ್ಟುಕೊಂಡ ಬಾಳೆ ಹಣ್ಣನ್ನು ಮೈದಾ ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ ಚೆನ್ನಾಗಿ ಬೇಯಿಸಿ. ಅದು ಕಂದು ಬಣ್ಣಕ್ಕೆ ತಿರುಗಿದ ಮೇಲೆ ತೆಗೆದರೆ. ಅಲ್ಲಿಗೆ ನೇಂದ್ರ ಬಾಳೆಹಣ್ಣಿನ ಬಜ್ಜಿ ರೆಡಿಯಾದಂತೆಯೇ.