ಈರುಳ್ಳಿ ನಿಪ್ಪಟ್ಟಿನ ರುಚಿ ಸವಿಯಿರಿ

ಈರುಳ್ಳಿ ನಿಪ್ಪಟ್ಟಿನ ರುಚಿ ಸವಿಯಿರಿ

LK   ¦    Nov 06, 2020 01:47:41 PM (IST)
ಈರುಳ್ಳಿ ನಿಪ್ಪಟ್ಟಿನ ರುಚಿ ಸವಿಯಿರಿ

ಮಾಮೂಲಿಯಾಗಿ ಮಾಡುವ ನಿಪ್ಪಟ್ಟಿಗಿಂತ ಈರುಳ್ಳಿಯಿಂದ ತಯಾರಿಸುವ ನಿಪ್ಪಟ್ಟು ರುಚಿಯಾಗಿರುತ್ತದೆ. ಗರಿಗರಿಯಾಗಿರುವ ಇದನ್ನು ಸೇವಿಸುವುದೇ ಒಂಥರಾ ಮಜಾ. ಹಾಗಾದರೆ ಈರುಳ್ಳಿ ನಿಪ್ಪಟ್ಟು ಮಾಡುವುದು ಹೇಗೆ ಮತ್ತು ಬೇಕಾಗುವ ಪದಾರ್ಥಗಳ ವಿವರ ಇಲ್ಲಿದೆ.

ಈರುಳ್ಳಿ ನಿಪ್ಪಟ್ಟಿಗೆ ಬೇಕಾಗುವ ಪದಾರ್ಥಗಳು

ಅಕ್ಕಿಹಿಟ್ಟು- ಅರ್ಧ ಕಪ್

ಕಡ್ಲೆಹಿಟ್ಟು- ಅರ್ಧಕಪ್

ಚಿರೋಟಿ ರವೆ- ಅರ್ಧ ಕಪ್

ಈರುಳ್ಳಿ- ಎರಡು

ಮೈದಾ ಹಿಟ್ಟು- ಎರಡು ಟೀ ಚಮಚೆ

ಕೊತ್ತಂಬರಿ ಸೊಪ್ಪು- ಸ್ವಲ್ಪ

ಕಾರದಪುಡಿ- ಎರಡು ಚಮಚೆ

ಕರಿಬೇವು ಸೊಪ್ಪು- ಸ್ವಲ್ಪ

ಜೀರಿಗೆ- ಒಂದು ಟೀ ಚಮಚೆ

ಉಪ್ಪು- ರುಚಿಗೆ ತಕ್ಕಂತೆ

ಈರುಳ್ಳಿ ನಿಪ್ಪಟ್ಟು ಮಾಡುವ ವಿಧಾನ

ಮೊದಲಿಗೆ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಚ್ಚಿಟ್ಟುಕೊಳ್ಳಬೇಕು. ನಂತರ ಒಂದು ಅಗಲವಾದ ಪಾತ್ರೆಯಲ್ಲಿ ಅಕ್ಕಿ, ಕಡ್ಲೆ, ಮೈದಾ ಹಿಟ್ಟುಗಳನ್ನು ಹಾಕಿ ಸ್ವಲ್ಪ ಗಟ್ಟಿಯಾಗಿ ಕಲೆಸಬೇಕು. ನಂತರ ಇದಕ್ಕೆ ರವೆ, ಜೀರಿಗೆ, ಉಪ್ಪು, ಖಾರಪುಡಿ, ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಬಿಸಿ ಮಾಡಿದ ಸ್ವಲ್ಪ ಎಣ್ಣೆಯನ್ನು ಹಾಕಿ ಮತ್ತೊಮ್ಮೆ ಚೆನ್ನಾಗಿ ಚಪಾತಿ ಹಿಟ್ಟಿನಂತೆ ಕಲೆಸಬೇಕು.

ಆ ನಂತರ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ದುಂಡಾಕಾರವಾಗಿ ಲಟ್ಟಿಸಿ ಅಥವಾ ಅಥವಾ ಪೂರಿ ಪ್ರೆಸ್ ನಲ್ಲಿ ಒತ್ತಿ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವ ತನಕ ಕರಿದು ತೆಗೆದರೆ ಈರುಳ್ಳಿ ನಿಪ್ಪಟ್ಟು ರೆಡಿಯಾದಂತೆಯೇ..