ಸಿಂಪಲ್ ಬನಾನ ಬನ್ಸ್ ಮಾಡಿ ನೋಡಿ..!

ಸಿಂಪಲ್ ಬನಾನ ಬನ್ಸ್ ಮಾಡಿ ನೋಡಿ..!

LK   ¦    Sep 28, 2019 01:14:41 PM (IST)
ಸಿಂಪಲ್ ಬನಾನ ಬನ್ಸ್ ಮಾಡಿ ನೋಡಿ..!

ಬಿಸಿ ಬಿಸಿಯಾದ ಬನಾನ ಬನ್ಸ್ ಒಮ್ಮೆ ಸವಿದು ನೋಡಿ ರುಚಿಯಾದ ಈ ತಿಂಡಿ ಮಜಾ ಕೊಡುತ್ತದೆ. ಈ ಬನಾನ ಬನ್ಸ್ ತಯಾರಿ ಮಾಡುವುದು ಕೂಡ ಸುಲಭವೇ..

ಸಿಂಪಲ್ ಬನಾನ ಬನ್ಸ್ ಗೆ ಬೇಕಾಗುವ ಸಾಮಗ್ರಿಗಳು

ಮಾಗಿದ ಬಾಳೆಹಣ್ಣು- ಎರಡು

ಮೈದಾಹಿಟ್ಟು- ಅರ್ಧ ಕಪ್

ಸಕ್ಕರೆ- ನಾಲ್ಕು ಚಮಚ

ಅಡುಗೆ ಸೋಡಾ- ಒಂದು ಚಮಚ

ಉಪ್ಪು-ಚಿಟಿಕೆಯಷ್ಟು

ಮೊಸರು- ಸ್ವಲ್ಪ

ಎಣ್ಣೆ- ಕರಿಯಲು ಅಗತ್ಯವಿರುವಷ್ಟು

ಮಾಡುವ ವಿಧಾನ ಹೀಗಿದೆ..

ಮೊದಲಿಗೆ ಬಾಳೆಹಣ್ಣು ಮತ್ತು ಸಕ್ಕರೆಯನ್ನು ಮಿಕ್ಸ್ ಮಾಡಿ ಚೆನ್ನಾಗಿ ತಿರುಗಿಸಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಮೊಸರು, ಸೋಡಾಪುಡಿ, ಉಪ್ಪು ಮತ್ತು ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಪೂರಿಗೆ ಕಲಸಿಕೊಳ್ಳುವಂತೆ ಕಲಸಿ ಸ್ವಲ್ಪ ಸಮಯ ಹಾಗೆಯೇ ಬಿಡಬೇಕು.

ಸುಮಾರು ಅರ್ಧ ಗಂಟೆ ಬಳಿಕ ಚಿಕ್ಕ ಉಂಡೆಯನ್ನಾಗಿ ಮಾಡಿ ಪೂರಿಯ ಮಾದರಿಯಲ್ಲಿ ಚಿಕ್ಕದಾಗಿ ಲಟ್ಟಿಸಿ ಎಣ್ಣೆಯಲ್ಲಿ ಹಾಕಿ ಕರಿದರೆ ಸಿಂಪಲ್ ಬನಾನ ಬನ್ ರೆಡಿಯಾಗಲಿದೆ.