ಸ್ವಾದಿಷ್ಟ ಮಟನ್ ಮಸಾಲ ಫ್ರೈ

ಸ್ವಾದಿಷ್ಟ ಮಟನ್ ಮಸಾಲ ಫ್ರೈ

LK   ¦    Jul 27, 2020 11:28:53 AM (IST)
ಸ್ವಾದಿಷ್ಟ ಮಟನ್ ಮಸಾಲ ಫ್ರೈ

ಮಟನ್ ಮಸಾಲ ಫ್ರೈ ಬೇರೆ ಬೇರೆ ರೀತಿಯಲ್ಲಿ ಮಾಡಬಹುದಾಗಿದೆ. ಸಿಂಪಲ್ ಆಗಿ ಸ್ವಾದಿಷ್ಟವಾಗಿ ಮಾಡುವ ವಿಧಾನ ಇಲ್ಲಿದೆ.

 

ಮಟನ್ ಮಸಾಲ ಫ್ರೈಗೆ ಬೇಕಾಗುವ ಪದಾರ್ಥಗಳು

 

ಮಟನ್- 250 ಗ್ರಾಂ

 

ಉಪ್ಪು- ರುಚಿಗೆ ತಕ್ಕಷ್ಟು

 

ಡಾಲ್ಚಿನ್ನಿ- ಅರ್ಧ ಕಡ್ಡಿ

 

ಏಲಕ್ಕಿ- 2

 

ಲವಂಗ- 2

 

ಒಣಮೆಣಸು- 4

 

ಈರುಳ್ಳಿ-1

 

ಅರಿಸಿನ-ಅರ್ಧ ಟೀ ಚಮಚೆ

 

ಪೆಪ್ಪರ್ ಪುಡಿ-ಕಾಲು ಟೀ ಚಮಚೆ

 

ಎಣ್ಣೆ- ಹುರಿಯಲು ಅಗತ್ಯವಿರುವಷ್ಟು

 

ಬೆಳ್ಳುಳ್ಳಿ ಶುಂಠಿ ಪೇಸ್ಟ್- ಒಂದು ಚಮಚೆ

 

ಮಾಡುವ ವಿಧಾನ ಹೀಗಿದೆ..

 

ಮೊದಲಿಗೆ ಒಂದು ಪಾತ್ರೆಯಲ್ಲಿ ಮಾಂಸ ಹಾಗೂ ಉಪ್ಪನ್ನು ಬೆರೆಸಿ ಚೆನ್ನಾಗಿ ಬೇಯಿಸಿ ನಂತರ ತೆಗೆದು ಅದನ್ನು ಚಿಕ್ಕದಾಗಿ ತುಂಡು ಮಾಡಿಟ್ಟುಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ನಿಧಾನ ಉರಿಯಲ್ಲಿ ಕಾಯಿಸಿ ಅದಕ್ಕೆ ಹಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಅದು ಕಂದು ಬಣ್ಣ ನಂತರ ಒಣ ಮೆಣಸನ್ನು ಹಾಕಿ ಹುರಿಯಿರಿ. ಅದಾದ ಬಳಿಕ ಏಲಕ್ಕಿ, ಲವಂಗ, ಡಾಲ್ಚಿನ್ನಿ ಸೇರಿಸಿ ಹುರಿದು, ನಂತರ ಶುಂಠಿಬೆಳ್ಳುಳ್ಳಿ ಪೇಸ್ಟ್, ಅರಿಸಿನಪುಡಿ, ಪೆಪ್ಪರ್ ಪುಡಿ ಸೇರಿಸಿ ತಿರುವಿ ನಂತರ ಬೇಯಿಸಿದ ಮಾಂಸದ ತುಂಡುಗಳನ್ನು ಅದಕ್ಕೆ ಹಾಕಿ ಒಂದೈದು ನಿಮಿಷಗಳ ಕಾಲ ಚೆನ್ನಾಗಿ ಮಸಾಲೆ ಹಿಡಿಯುವಂತೆ ನಿಧಾನ ಉರಿಯಲ್ಲಿ ತಿರುವುತ್ತಾ ಬೇಯಿಸಿ ಬಳಿಕ ಒಲೆಯಿಂದ ಇಳಿಸಬೇಕು. ಸೇವಿಸುವಾಗ ನಿಂಬೆ ರಸವನ್ನು ಸೇರಿಸಿಕೊಳ್ಳಬಹುದಾಗಿದೆ. ಚಿಡಿeಚಿ