ಇಂದಿನ ರೆಸಿಪಿ ಕುಡ್ಲ ಸ್ಟೈಲ್ ನಾಟಿ ಕೋಳಿ ಸಾರು

ಇಂದಿನ ರೆಸಿಪಿ ಕುಡ್ಲ ಸ್ಟೈಲ್ ನಾಟಿ ಕೋಳಿ ಸಾರು

YK   ¦    May 25, 2019 04:19:13 PM (IST)
ಇಂದಿನ ರೆಸಿಪಿ ಕುಡ್ಲ ಸ್ಟೈಲ್ ನಾಟಿ ಕೋಳಿ ಸಾರು

ನಾಟಿ ಕೋಳಿ ಸಾರು ರುಚಿಗೆ ಬೇರಾವುದು ಸಾಟಿಯಿಲ್ಲ ಬಿಡಿ. ಹಬ್ಬಕ್ಕೆ, ರಜೆ ಸಮಯದಲ್ಲಿ ನಾಟಿ ಕೋಳಿ ಸಾರು ಪ್ರತಿ ಮನೆಯಲ್ಲೂ ಸಾಮಾನ್ಯವಾಗಿರುತ್ತೆ. ಆದರೆ ಕರಾವಳಿ ಭಾಗದಲ್ಲಿ ಮನೆಗೆ ನೆಂಟರು ಬಂದರೆ ಸಾಕು ಅಂಗಳದಲ್ಲಿದ್ದ ಕೋಳಿಯನ್ನು ಹಿಡಿದು ಹಾಗೇ ಕೋಳಿ ಸಾಂಬಾರ್ ಗೆ ರೆಡಿ ಮಾಡುತ್ತಾರೆ. ತಿನ್ನಲು ಎರಡು ತುಂಡು ಸಿಕ್ಕರೂ ಸಾಕು ಅದಲ್ಲಿರುವ ರುಚಿ ಬೇರಾವು ಕೋಳಿ ಮಾಂಸದಲ್ಲಿ ಸಿಗುವುದಿಲ್ಲ ಬಿಡಿ.

ಕೋಳಿ ಸಾರು ಮಾಡಲು ಬೇಕಾಗುವ ಸಾಮಾಗ್ರಿಗಳು
ನಾಟಿ ಕೋಳಿ
ಮೆಣಸು- 10ರಿಂದ 15
ಕೊತ್ತಂಬರಿ ಬೀಜ- 3 ಚಮಚ
ಸಾಸಿವೆ- 1 ಚಮಚ
ಜೀರಿಗೆ- 1 ಚಮಚ
ಮೆಂತ್ಯೆ-5 ಕಾಳು
ಕಾಳು ಮೆಣಸು 8-9ಕಾಳು
ತೆಂಗಿನಕಾಯಿ ತುರಿ- 1ಕಪ್
ಹರಿಶಿನ ಹುಡಿ-1 ಚಮಚ
ಈರುಳ್ಳಿ-2
ಹುಳಿ ಸ್ವಲ್ಪ, ಎಣ್ಣೆ, ಉಪ್ಪು ಮತ್ತು ಬೆಳ್ಳುಳ್ಳಿ

ಮಾಡುವ ವಿಧಾನ:
1.ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಟ್ ಮಾಡಿ ಇಟ್ಟುಕೊಂಡ ಈರುಳ್ಳಿಯನ್ನು ಕೆಂಪಾಗೆ ಆಗುವವರೆಗೆ ಹುರಿಯಿರಿ. ನಂತರ ಅದೇ ಬಾಣಲೆಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಸಾಸಿವೆ, ಮೆಂತ್ಯೆ, ಕಾಳುಮೆಣಸು ಹಾಗೂ ಬೆಳ್ಳುಳ್ಳಿಯನ್ನು ಹಾಕಿ 1 ನಿಮಿಷ ಹುರಿಯಿರಿ. ನಂತರ ಅದೇ ಬಾಣಲೆಯಲ್ಲಿ ಮೆಣಸನ್ನು ಹಾಕಿ ಒಂದು ನಿಮಿಷ ಹುರಿಯಿರಿ. ಇದೀಗ ಎಲ್ಲ ಮಿಶ್ರಣವನ್ನು ಮಿಕ್ಸ್ ಗೆ ಹಾಕಿ ನಂತರ ಒಂದು ಕಪ್ ತೆಂಗಿನಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

2.ಇದೀಗ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಗ್ಗರಣೆ ಕೊಟ್ಟು ನಂತರ ಈರುಳ್ಳಿ ಸೇರಿಸಿ ಕುರಿದು ಅದಕ್ಕೆ ಕ್ಲೀನ್ ಮಾಡಿ ಕಟ್ ಮಾಡಿ ಇಟ್ಟುಕೊಂಡ ನಾಟಿಕೋಳಿಯನ್ನು ಹಾಕಿ. ನಂತರ 15ನಿಮಿಷ ಬಿಟ್ಟು ಅದಕ್ಕೆ ಮಿಕ್ಸ್ ಮಾಡಿ ಇಟ್ಟುಕೊಟ್ಟ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೇಯಿಸಿ. ಇದೀಗ ರುಚಿಕರವಾದ ನಾಟಿ ಕೋಳಿ ಸಾರು ಸವಿಯಲು ಸಿದ್ದ. ರೊಟ್ಟಿ ಹಾಗೂ ಅನ್ನದ ಜತೆ ತುಂಬಾ ಚೆನ್ನಾಗಿರುತ್ತೆ.