ಹೆಸರುಬೇಳೆ ಪಾಲಕ್ ಪಕೋಡ  

ಹೆಸರುಬೇಳೆ ಪಾಲಕ್ ಪಕೋಡ  

Dec 17, 2018 02:26:11 PM (IST)
ಹೆಸರುಬೇಳೆ ಪಾಲಕ್ ಪಕೋಡ   

ಪಕೋಡವನ್ನು ಹಲವು ರೀತಿಯಿಂದ ಮಾಡಬಹುದಾಗಿದ್ದು ಪಾಲಕ್ ಸೊಪ್ಪು ಮತ್ತು ಹೆಸರು ಬೇಳೆ ಸೇರಿಸಿ ಮಾಡುವ ಪಕೋಡವು ರುಚಿಯಾಗಿರುತ್ತದೆ. ಈ ಪಕೋಡವನ್ನು ಮಾಡುವುದು ಹೇಗೆ? ಬೇಕಾಗುವ ಪದಾರ್ಥಗಳ ವಿವರ ಇಲ್ಲಿದೆ. 

ಪಾಲಕ್ ಸೊಪ್ಪು- ಒಂದು ಕಟ್ಟು 

ಹೆಸರುಬೇಳೆ- ಎರಡು ಕಪ್ 

ಈರುಳ್ಳಿ- ದೊಡ್ಡದು ಒಂದು 

ಹಸಿಮೆಣಸಿನಕಾಯಿ- 4 

ಉಪ್ಪು- ರುಚಿಗೆ ತಕ್ಕಂತೆ 

ಅರಿಶಿಣಪುಡಿ- ಸ್ವಲ್ಪ 

ಹೆಸರುಬೇಳೆ ಪಾಲಕ್ ಪಕೋಡ ಮಾಡುವ ವಿಧಾನ 

ಮೊದಲು ಹೆಸರು ಬೇಳೆಯನ್ನು ಸುಮಾರು ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ನೆನೆಯಲು ಹಾಕಿ ಬಳಿಕ ತೆಗೆದುಕೊಂಡು ಅದನ್ನು ತರಿತರಿಯಾಗಿ ಮಿಕ್ಸಿ ಮಾಡಿಕೊಳ್ಳಬೇಕು. ಇನ್ನೊಂದೆಡೆ ಚಿಕ್ಕದಾಗಿ ಈರುಳ್ಳಿ, ಮೆಣಸಿನಕಾಯಿಯನ್ನು ಮತ್ತು ಪಾಲಕ್ ಸೊಪ್ಪನ್ನು ಹಚ್ಚಿಟ್ಟುಕೊಳ್ಳಬೇಕು. ಬಳಿಕ ಮಿಕ್ಸಿ ಮಾಡಿಕೊಂಡ ಹೆಸರು ಬೇಳೆಯೊಂದಿಗೆ ಹಚ್ಚಿಟ್ಟುಕೊಂಡ ಈರುಳ್ಳಿ, ಮೆಣಸಿಕಾಯಿ, ಪಾಲಕ್ ಸೊಪ್ಪನ್ನು ಮಿಶ್ರಮಾಡಿ ಕಲೆಸಬೇಕು. ಜತೆಗೆ ಉಪ್ಪು ಹಾಗೂ ಅರಶಿಣಪುಡಿಯನ್ನು ಸೇರಿಸಿ ಚೆನ್ನಾಗಿ ಕಲೆಸಬೇಕು. (ಇದು ಗಟ್ಟಿಯಾಗಿರುವಂತೆ ನೋಡಿಕೊಳ್ಳಬೇಕು) ಬಳಿಕ ಕಾದ ಎಣ್ಣೆಯಲ್ಲಿ ಹಾಕಿ ಕರಿದರೆ ಹೆಸರುಬೇಳೆ ಪಾಲಕ್ ಪಕೋಡ ಸವಿಯಲು ಸಿದ್ಧವಾದಂತೆಯೇ.