ಚಿಕನ್ ಡ್ರಮ್ ಸ್ಟಿಕ್ ರುಚಿ ಸವಿದು ನೋಡಿ

ಚಿಕನ್ ಡ್ರಮ್ ಸ್ಟಿಕ್ ರುಚಿ ಸವಿದು ನೋಡಿ

LK   ¦    Jun 20, 2019 03:30:25 PM (IST)
ಚಿಕನ್ ಡ್ರಮ್ ಸ್ಟಿಕ್ ರುಚಿ ಸವಿದು ನೋಡಿ

ಚಿಕನ್ ಪ್ರಿಯರಿಗೆ ಡ್ರಮ್ ಸ್ಟಿಕ್ ಸವಿಯೋದು ಸಖತ್ ಖುಷಿಕೊಡುತ್ತದೆ. ಊಟದ ಜತೆಗೆ ಇದು ಮೇಲೋಗರವಾಗಿಯೂ ಇಷ್ಟವಾಗುತ್ತದೆ.

ಚಿಕನ್ ಡ್ರಮ್ ಸ್ಟಿಕ್‍ಗೆ ಬೇಕಾಗುವ ಪದಾರ್ಥಗಳು

ಚಿಕನ್ ಡ್ರಮ್ ಸ್ಟಿಕ್- 6

ಮೊಟ್ಟೆ-1

ಮೈದಾ- 1 ಬಟ್ಟಲು

ಜೋಳದಹಿಟ್ಟು- 1 ಚಮಚ

ಅಜಿನೊಮೊಟೋ- ಚಿಟಿಕಿಯಷ್ಟು

ಉಪ್ಪು- 1 ಚಮಚ

ವಿನಿಗಾರ್- 1 ಚಮಚ

ಬೆಳ್ಳುಳ್ಳಿ, ಶುಂಠಿ ಪೇಸ್ಟ್- ಅರ್ಧ ಚಮಚ

ಸೋಯಾಸಾಸ್- 1 ಚಮಚ

ಖಾರದಪುಡಿ- 1 ಚಮಚ

ಕೊತ್ತಂಬರಿ ಸೊಪ್ಪು- ಸ್ವಲ್ಪ

ಎಣ್ಣೆ- ಕರಿಯಲು ಅಗತ್ಯವಿರುವಷ್ಟು

ಚಿಕನ್ ಡ್ರಮ್ ಸ್ಟಿಕ್‍ಗೆ ಮಾಡುವ ವಿಧಾನ

ಮೊದಲಿಗೆ ಡ್ರಮ್ ಸ್ಟಿಕ್‍ನ್ನು ತೆಗೆದುಕೊಂಡು ಕಾಲು ಬಟ್ಟಲು ನೀರಿನಲ್ಲಿ ಕುಕ್ಕರ್‍ನಲ್ಲಿ ಹಾಕಿ ಅದಕ್ಕೆ ಮೆಣಸು, ಬೆಳ್ಳುಳ್ಳಿ ಶುಂಠಿ ಪೇಸ್ಟ್, ವಿನಿಗಾರ್, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೇಯಿಸಿ ತೆಗೆಯಬೇಕು.

ಇನ್ನೊಂದೆಡೆ ಒಂದು ಪಾತ್ರೆಯಲ್ಲಿ ಮೊಟ್ಟೆ, ಜೋಳದ ಹಿಟ್ಟು, ಮೈದಾಹಿಟ್ಟು, ಅಜಿನೊಮೊಟೋ ಹಾಕಿ ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಆ ನಂತರ ಬೇಯಿಸಿದ ಡ್ರಮ್ ಸ್ಟಿಕ್‍ನ್ನು ಅದರಲ್ಲಿ ಅದ್ದಿ ಎಣ್ಣೆಯಲ್ಲಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಕರಿಯಬೇಕು. ಅಲ್ಲಿಗೆ ಚಿಕನ್ ಡ್ರಮ್ ಸ್ಟಿಕ್ ರೆಡಿಯಾದಂತೆಯೇ ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಸವಿಯ ಬಹುದಾಗಿದೆ.