ಸುಲಭವಾಗಿ ಮನೆಯಲ್ಲೇ ಬ್ರೆಡ್ ಪಕೋಡ ಮಾಡುವ ವಿಧಾನ

ಸುಲಭವಾಗಿ ಮನೆಯಲ್ಲೇ ಬ್ರೆಡ್ ಪಕೋಡ ಮಾಡುವ ವಿಧಾನ

HSA   ¦    Dec 27, 2019 04:50:02 PM (IST)
ಸುಲಭವಾಗಿ ಮನೆಯಲ್ಲೇ ಬ್ರೆಡ್ ಪಕೋಡ ಮಾಡುವ ವಿಧಾನ

ಬ್ರೆಡ್ ಪಕೋಡ ಎನ್ನುವುದನ್ನು ಬ್ರೆಡ್ ಹಾಗೂ ಬಟಾಟೆಯ ಮಸಾಲೆಯಿಂದ ತಯಾರಿಸಲಾಗುತ್ತದೆ. ಇದನ್ನು ಎಣ್ಣೆಯಲ್ಲಿ ಕರಿದ ಬಳಿಕ ಅದರ ರುಚಿಯೇ ಅದ್ಭುತವಾಗಿರುವುದು. ಬ್ರೆಡ್ ಪಕೋಡಾವನ್ನು ಹೇಗೆ ತಯಾರಿಸಿಕೊಂಡು ಮನೆಯಲ್ಲೇ ಸವಿಯಬಹುದು ಎಂದು ತಿಳಿಯುವ….

ಬೇಕಾಗುವ ಸಾಮಗ್ರಿಗಳು

ಬ್ರೆಡ್

ಬಟಾಟೆ

ಅರಶಿನ

ಶುಂಠಿ, ಬೆಳ್ಳುಳ್ಳಿ

ಹಸಿ ಮೆಣಸು

ಉಪ್ಪು

ಕರಿಯಲು ಎಣ್ಣೆ

ಕರಿಬೇವಿನ ಎಲೆ

ಜೀರಿಗೆ

ಉದ್ದಿನ ಬೇಳೆ

 

ತಯಾರಿಸುವ ವಿಧಾನ

ಮೊದಲು ಬಟಾಟೆ ಬೇಯಿಸಿಕೊಂಡು ಅದನ್ನು ಹುಡಿ ಮಾಡಿಕೊಳ್ಳಬೇಕು. ಇದರ ಬಳಿಕ ಸಣ್ಣ ಬಾಣಲೆಗೆ ಎಣ್ಣೆ, ಕರಿಬೇವಿನ ಎಲೆ, ಉದ್ದಿನ ಬೇಳೆ, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು ಹಾಕಿಕೊಂಡು ಸ್ವಲ್ಪ ಸಮಯ ಹುರಿಯಿರಿ. ಈ ಮಸಾಲೆಗೆ ಬಟಾಟೆ ಹಾಕಿಕೊಳ್ಳಿ.

ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದರ ಬಳಿಕ ಎರಡು ಬ್ರೆಡ್ ಮಧ್ಯೆ ಈ ಮಸಾಲೆ ಇಟ್ಟು ಬ್ರೆಡ್ ನ್ನು ಎರಡು ಅಥವಾ ನಾಲ್ಕು ತುಂಡು ಮಾಡಿಕೊಳ್ಳಿ.

ಇದರ ಬಳಿಕ ಬಿಸಿಯಾದ ಎಣ್ಣೆಯಲ್ಲಿ ಕರಿದರೆ ಬ್ರೆಡ್ ಪಕೋಡ ರೆಡಿ.

ಇದನ್ನು ಚಟ್ನಿ ಅಥವಾ ಸಾಸ್ ಹಾಕಿಕೊಂಡು ತಿನ್ನಬಹುದು.