ಚಿಕನ್ ಲೆಗ್ ಪೀಸ್ ಕಬಾಬ್ ಮಾಡಿ ರುಚಿ ನೋಡಿ

ಚಿಕನ್ ಲೆಗ್ ಪೀಸ್ ಕಬಾಬ್ ಮಾಡಿ ರುಚಿ ನೋಡಿ

LK   ¦    Apr 25, 2019 02:19:58 PM (IST)
ಚಿಕನ್ ಲೆಗ್ ಪೀಸ್ ಕಬಾಬ್ ಮಾಡಿ ರುಚಿ ನೋಡಿ

ಚಿಕನ್ ಕಬಾಬ್ ಎಲ್ಲರೂ ತಿನ್ನುತ್ತೇವೆ. ಆದರೆ ಚಿಕನ್ ಲೆಗ್ ಪೀಸ್ ಕಬಾಬ್ ಸೇವಿಸಲು ಇನ್ನಷ್ಟು ಮಜಾ ಇರುತ್ತದೆ. ಇನ್ನು ಚಿಕನ್ ಲೆಗ್ ಪೀಸ್ ಕಬಾಬ್ ಮಾಡುವುದು ಹೇಗೆ? ಏನೆಲ್ಲ ಪದಾರ್ಥಗಳು ಇದರ ತಯಾರಿಕೆಗೆ ಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳ ವಿವರ

ಚಿಕನ್ ಲೆಗ್ ಪೀಸ್- ಆರು

ಅರಶಿನಪುಡಿ- ಸ್ವಲ್ಪ

ಟೊಮ್ಯಾಟೋ ಸಾಸ್- ಒಂದು ಚಮಚ

ಸೋಯಾಸಾಸ್-ಮುಕ್ಕಾಲು ಚಮಚ

ಮೆಣಸುಪುಡಿ- ಒಂದು ಚಮಚ

ಶುಂಠಿ,ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ

ವಿನಿಗಾರ್-ಒಂದು ಚಮಚ

ಚಿಲ್ಲಿ ಸಾಸ್- ಅರ್ಧ ಚಮಚ

ಉಪ್ಪು- ಒಂದು ಚಮಚ

ತಂದೂರಿ ಬಣ್ಣ- ಸ್ವಲ್ಪ

ಎಣ್ಣೆ- ಕರಿಯಲು ಅಗ್ಯವಿರುವಷ್ಟು

ಚಿಕನ್ ಲೆಗ್ ಪೀಸ್ ಕಬಾಬ್ ಮಾಡುವ ವಿಧಾನ ಹೀಗಿದೆ...

ಮೊದಲಿಗೆ ಚಿಕನ್ ಲೆಗ್ ಪೀಸ್‍ಗಳನ್ನು ತೆಗೆದುಕೊಂಡು ಅದಕ್ಕೆ ಉಪ್ಪು ಹಾಗೂ ಮೇಲೆ ಹೇಳಿರುವ ಎಲ್ಲ ಪದಾರ್ಥಗಳನ್ನು ಬೆರೆಸಿ ಚೆನ್ನಾಗಿ ಕಲೆಸಿ ಸುಮಾರು ಅರ್ಧ ಗಂಟೆ ಇಡಿ. ಮಸಾಲೆ ಮಾಂಸಕ್ಕೆ ಚೆನ್ನಾಗಿ ಹಿಡಿದ ನಂತರ ಒಂದು ಪಾತ್ರೆಯಲ್ಲಿ ಕಾಲು ಬಟ್ಟಲಷ್ಟು ನೀರು ಹಾಕಿ ಚೆನ್ನಾಗಿ ಬೇಯಿಸಿ. ನೀರು ಆವಿಯಾದ ಬಳಿಕ ಅದನ್ನು ತೆಗೆದು ಎಣ್ಣೆಯಲ್ಲಿ ಚೆನ್ನಾಗಿ ಕಂದು ಬಣ್ಣ ಬರುವ ತನಕ ಕರಿದು ತೆಗೆದರೆ ಚಿಕನ್ ಲೆಗ್ ಪೀಸ್ ಕಬಾಬ್ ರೆಡಿಯಾದಂತೆಯೇ.