ಊಟದ ಜತೆಗಿರಲಿ ಮಾವಿನಕಾಯಿಯ ರಸಂ

ಊಟದ ಜತೆಗಿರಲಿ ಮಾವಿನಕಾಯಿಯ ರಸಂ

LK   ¦    Feb 19, 2020 02:27:31 PM (IST)
ಊಟದ ಜತೆಗಿರಲಿ ಮಾವಿನಕಾಯಿಯ ರಸಂ

ಮುಂದೆ ಬರಲಿರುವ ದಿನಗಳು ಮಾವಿನ ಕಾಲ.. ಹೀಗಾಗಿ ಊಟಕ್ಕೆ ಮಾವಿನಕಾಯಿಯಿಂದ ಮಾಡಿದ ಹಲವು ಪದಾರ್ಥಗಳನ್ನು ಸೇವಿಸೋದು ಇದ್ದೇ ಇದೆ. ಹಾಗಾದರೆ ಮಾವಿನಕಾಯಿಯಿಂದ ರಸಂ ಮಾಡಿದರೆ ರುಚಿ ಹೇಗಿರಬಹುದು ಎಂಬ ಕಲ್ಪನೆ ಮೂಡುವುದು ಸಹಜ. ಹೀಗಾಗಿ ಮಾವಿನ ಕಾಯಿಯ ರಸಂ ಮಾಡುವುದು ಹೇಗೆ ಎಂಬುದರ ವಿವರ ಇಲ್ಲಿದೆ.

 

ಬೇಕಾಗುವ ಪದಾರ್ಥಗಳು

ಚಿಕ್ಕದಾದ ಮಾವಿನ ಕಾಯಿ- ಒಂದು

ಹಸಿಮೆಣಸು- ಮೂರರಿಂದ ನಾಲ್ಕು

ಕೊಬ್ಬರಿಪುಡಿ- ಎರಡು ಟೀ ಚಮಚ

ಕಾಳುಮೆಣಸಿನ ಪುಡಿ- ಚಿಟಿಕೆಯಷ್ಟು

ಬೆಳ್ಳುಳ್ಳಿ- ಆರು ಎಸಳು

ಈರುಳ್ಳಿ- ಸ್ವಲ್ಪ

ಅರಿಶಿನಪುಡಿ- ಅರ್ಧ ಟೀ ಚಮಚ

ಹುರಿಗಡಲೆ ಪುಡಿ- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಒಗ್ಗರಣೆಗೆ ಅಗತ್ಯವಿರುವಷ್ಟು(ಒಂದು ಟೇಬಲ್ ಚಮಚ)

ಕೊತ್ತಂಬರಿ ಸೊಪ್ಪು- ಸ್ವಲ್ಪ

ಕರಿಬೇವು ಸೊಪ್ಪು- ಸ್ವಲ್ಪ

ಒಣಮೆಣಸು- ಎರಡು

ಸಾಸಿವೆ- ಸ್ವಲ್ಪ

ಮಾಡುವ ವಿಧಾನ ಹೀಗಿದೆ

ಮೊದಲಿಗೆ ಮಾವಿನ ಕಾಯಿಯನ್ನು ಹಚ್ಚಿಕೊಂಡು ಅದಕ್ಕೆ ಹಸಿಮೆಣಸು ಬೆಳ್ಳುಳ್ಳಿ ಅರಸಿನ, ಕಾಳು ಮೆಣಸು, ಹುರಿಗಡಲೆ ಪುಡಿ, ಕೊಬ್ಬರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ. ಮತ್ತೊಂದೆಡೆ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಕಾದ ಬಳಿಕ ಸಾಸಿವೆ ಹಾಕಿ ಅದು ಸಿಡಿದ ನಂತರ ಹಚ್ಚಿದ ಈರುಳ್ಳಿ ಹಾಕಿ ಹಾಗೂ ಕರಿಬೇವು(ಒಗ್ಗರಣೆ)ಸೊಪ್ಪು ಹಾಕಿ ಚೆನ್ನಾಗಿ ಹುರಿಯಿರಿ, ಈರುಳ್ಳಿ ಬೆಂದ ಬಳಿದ ಅದಕ್ಕೆ ಒಣಮೆಣಸನ್ನು ಹಾಕಿ ಅದು ಸ್ವಲ್ಪ ಕಾಯುತ್ತಿದ್ದಂತೆಯೇ  ಮಿಶ್ರಣ ಮಾಡಿಟ್ಟ ಮಾವಿನ ಕಾಯಿಯ ಗೊಜ್ಜನ್ನು ಅದಕ್ಕೆ ಸುರಿದು ತಿರುಗಿಸಿ ಎರಡು ಲೋಟ ನೀರು ಹಾಕಿ ಬಳಿಕ ರಚಿನೋಡಿಕೊಂಡು ಉಪ್ಪು ಹಾಕಿ ಚೆನ್ನಾಗಿ ಕುದಿದ ಬಳಿಕ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಇಳಿಸಿ ಅಲ್ಲಿಗೆ ಮಾವಿನ ಕಾಯಿಯ ರಸಂ ಸಿದ್ಧವಾದಂತೆಯೇ...