ಎಗ್ ಮಸಾಲ ಮಾಡಿ ನೋಡಿ..

ಎಗ್ ಮಸಾಲ ಮಾಡಿ ನೋಡಿ..

LK   ¦    Jul 17, 2020 07:15:40 PM (IST)
ಎಗ್ ಮಸಾಲ ಮಾಡಿ ನೋಡಿ..

ಮೊಟ್ಟೆಯಿಂದ ಹಲವಾರು ರೀತಿಯ ಪದಾರ್ಥಗಳನ್ನು ಮಾಡಬಹುದಾಗಿದ್ದು ಅದರಲ್ಲಿ ಎಗ್ ಮಸಾಲವೂ ಒಂದಾಗಿದೆ. ಇದನ್ನು ತಯಾರು ಮಾಡುವುದು ಬಲು ಸುಲಭವಾಗಿದೆ.

ಬೇಕಾಗುವ ಪದಾರ್ಥಗಳ ವಿವರ

ಮೊಟ್ಟೆ- ಮೂರು

ಎಗ್ ಮಸಾಲೆಪುಡಿ- ಒಂದು ಟೀ ಚಮಚ

ಉಪ್ಪು- ಮುಕ್ಕಾಲು ಟೀ ಚಮಚ

ಎಣ್ಣೆ- ಒಂದೂವರೆ ಟೀ ಚಮಚ

ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ ಹೀಗಿದೆ.

ಮೊದಲಿಗೆ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಅದರ ಸಿಪ್ಪೆ ತೆಗೆದು ಚಾಕುವಿನಿಂದ ಮಾರ್ಕ್ ಮಾಡಿಕೊಳ್ಳಬೇಕು. ಆ ನಂತರ ಒಂದು ಪಾತ್ರೆಯನ್ನು ಒಲೆ ಮೇಲಿಟ್ಟು ಎಣ್ಣೆಯನ್ನು ಹಾಕಬೇಕು ಅದು ಕಾದ ಬಳಿಕ ಅದಕ್ಕೆ ಎಗ್ ಮಸಾಲೆ ಪುಡಿಯನ್ನು ಹಾಕಿ ಅದು ಉಕ್ಕುತ್ತಿದ್ದಂತೆಯೇ ಉರಿಯನ್ನು ನಿಲ್ಲಿಸಿ. ನಂತರ ಬೇಯಿಸಿದ ಮೊಟ್ಟೆಯನ್ನು ಆ ಮಸಾಲೆಯಲ್ಲಿ ಹಾಕಿ ಮೇಲೆ ಕೆಳಗೆ ಮಾಡಿ ಮಸಾಲೆ ಹಿಡಿಯುವಂತೆ ಮಾಡಿ ಅದಕ್ಕೆ ಉಪ್ಪನ್ನು ಹಾಕಿ ಮತ್ತೊಮ್ಮೆ ತಿರುವಿ. ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಇಷ್ಟು ಮಾಡಿದರೆ ಎಗ್ ಮಸಾಲ ರೆಡಿ.