ಆರೋಗ್ಯಕಾರಿ ಮೊಳಕೆ ಕಾಳಿನ ಚಾಟ್ ಮಸಾಲೆ

ಆರೋಗ್ಯಕಾರಿ ಮೊಳಕೆ ಕಾಳಿನ ಚಾಟ್ ಮಸಾಲೆ

LK   ¦    Oct 27, 2020 03:36:42 PM (IST)
ಆರೋಗ್ಯಕಾರಿ ಮೊಳಕೆ ಕಾಳಿನ ಚಾಟ್ ಮಸಾಲೆ

ಮನೆಯಲ್ಲಿಯೇ ಆರೋಗ್ಯಕಾರಿ ಮೊಳಕೆ ಕಾಳಿನ ಚಾಟ್‍ನ್ನು ತಯಾರು ಮಾಡಬಹುದಾಗಿದೆ. ಅದು ಹೇಗೆ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಮೊಳಕೆ ಕಾಳಿನ ಚಾಟ್‍ಗೆ ಬೇಕಾಗುವ ಪದಾರ್ಥಗಳು

ಹೆಸರು ಕಾಳು- ಒಂದು ಕಪ್

ಕಾಬೂಲ್ ಕಡಲೆ- ಒಂದು ಕಪ್

ಈರುಳ್ಳಿ- ಒಂದು

ಟೊಮ್ಯಾಟೋ- ಒಂದು

ಕೊತ್ತಂಬರಿ ಸೊಪ್ಪು- ಸ್ವಲ್ಪ

ಶುಂಠಿ- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ನಿಂಬೆ ರಸ- ರುಚಿಗೆ ತಕ್ಕಷ್ಟು

ಹಸಿಮೆಣಸಿನ ಪೇಸ್ಟ್- ರುಚಿಗೆ ತಕ್ಕಷ್ಟು

ಎಣ್ಣೆ- ಸ್ವಲ್ಪ

 

ಮಾಡುವ ವಿಧಾನ ಹೀಗಿದೆ...

ಹೆಸರು ಕಾಳು ಮತ್ತು ಕಾಬೂಲು ಕಡ್ಲೆಯನ್ನು ನೆನೆಸಿ ಮೊಳಕೆ ಬರುವಂತೆ ಮಾಡಿಕೊಳ್ಳಬೇಕು. ಈರುಳ್ಳಿ, ಟೊಮ್ಯಾಟೋ, ಕೊತ್ತಂಬರಿ ಸೊಪ್ಪನ್ನು ಹಚ್ಚಿಕೊಳ್ಳಬೇಕು. ಶುಂಠಿಯನ್ನು ತುರಿದುಕೊಳ್ಳಬೇಕು. ಆ ನಂತರ ಮೊದಲಿಗೆ ಮೊಳಕೆ ಬಂದ ಹೆಸರು ಮತ್ತು ಕಡ್ಡೆಯನ್ನು ಕುಕ್ಕರ್‍ ನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಮತ್ತೊಂದೆಡೆ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಇಳಿಸಬೇಕು ಅದಕ್ಕೆ ಹಚ್ಚಿದ ಈರುಳ್ಳಿ, ಟೊಮ್ಯಾಟೋ, ಶುಂಠಿ, ಉಪ್ಪು, ನಿಂಬೆರಸ, ತುರಿದ ಶುಂಠಿ, ಹಾಕಿಟ್ಟುಕೊಂಡು ಅದಕ್ಕೆ ಕುಕ್ಕರ್‍ ನಲ್ಲಿ ಬೇಯಿಸಿದ ಹೆಸರು ಮತ್ತು ಕಡ್ಲೆಯನ್ನು ಹಾಕಬೇಕು ಬಳಿಕ ಚೆನ್ನಾಗಿ ಕಲಕಿಸಬೇಕು. ಆ ನಂತರ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಮೊಳಕೆ ಕಾಳಿನ ಚಾಟ್ ರೆಡಿಯಾದಂತೆಯೇ..