ಗೋಧಿ ಖಾರದ ರೊಟ್ಟಿಯ ರುಚಿ ನೋಡಿ

ಗೋಧಿ ಖಾರದ ರೊಟ್ಟಿಯ ರುಚಿ ನೋಡಿ

LK   ¦    Dec 07, 2020 09:26:57 AM (IST)
ಗೋಧಿ ಖಾರದ ರೊಟ್ಟಿಯ ರುಚಿ ನೋಡಿ

 

ಗೋಧಿ ಹಿಟ್ಟಿನಿಂದ ಚಪಾತಿ ಮಾಡುವುದು ಸಾಮಾನ್ಯ. ಆದರೆ ಗೋಧಿ ಹಿಟ್ಟಿನಿಂದ ತಯಾರು ಮಾಡುವ ಖಾರದ ರೊಟ್ಟಿ ಇನ್ನಷ್ಟು ಚೆನ್ನಾಗಿರುತ್ತದೆ. ಹಾಗಾದರೆ ಇದನ್ನು ಮಾಡುವುದು ಹೇಗೆ? ಬೇಕಾಗುವ ಪದಾರ್ಥಗಳ ವಿವರಗಳು ಇಲ್ಲಿವೆ.

 

ಗೋಧಿ ಖಾರದ ರೊಟ್ಟಿಗೆ ಬೇಕಾಗುವ ಪದಾರ್ಥಗಳು

 

ಗೋಧಿ ಹಿಟ್ಟು- ಎರಡು ಪಾವು

 

ತೆಂಗಿನ ತುರಿ- ಅರ್ಧ ಪಾವು

 

ಹಸಿಮೆಣಸಿನ ಕಾಯಿ ಪೇಸ್ಟ್- ಎರಡು ಟೇಬಲ್ ಚಮಚೆ

 

ಕೊತ್ತಂಬರಿ ಸೊಪ್ಪು- ಸ್ವಲ್ಪ

 

ಕರಿಬೇವು- ಸ್ವಲ್ಪ

 

ಉಪ್ಪು- ರುಚಿಗೆ ತಕ್ಕಷ್ಟು

 

ಎಣ್ಣೆ- ನಾಲ್ಕು ಟೇಬಲ್ ಚಮಚೆ

 

ಈರುಳ್ಳಿ- ಒಂದು

 

ಬೆಣ್ಣೆ- ಸ್ವಲ್ಪ

 

ಗೋಧಿ ಖಾರದ ರೊಟ್ಟಿ ಮಾಡುವುದು ಹೇಗೆ?

 

ಮೊದಲಿಗೆ ಒಂದು ಪಾವು ನೀರನ್ನು ಪಾತ್ರೆಯಲ್ಲಿ ಹಾಕಿ ಕಾಯಿಸಬೇಕು. ನೀರು ಕುದಿಯುತ್ತಿದ್ದಂತೆಯೇ ತೆಂಗಿನ ತುರಿ, ಮೆಣಸಿನಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಉಪ್ಪನ್ನು ಹಾಕಬೇಕು. ಅದು ಚೆನ್ನಾಗಿ ಕುದಿಯುತ್ತಿದ್ದಂತೆಯೇ ಅದಕ್ಕೆ ಹಿಟ್ಟನ್ನು ಗೋಪುರವಾಗಿ ನಿಲ್ಲುವಂತೆ ಸುರಿಯಬೇಕು. ಬಳಿಕ ಒಂದು ನಿಮಿಷ ಬಿಟ್ಟು ಒಂದು ಕೋಲಿನ ಸಹಾಯದಿಂದ ಚೆನ್ನಾಗಿ ತಿರುಗಿಸಬೇಕು. ಈ ವೇಳೆ ಹಿಟ್ಟು ಗಟ್ಟಿಯಾಗುತ್ತದೆ. ಅದನ್ನು ತೆಗೆದುಕೊಂಡು ರೊಟ್ಟಿಯನ್ನು ಲಟ್ಟಿಸಿ ಅದಕ್ಕೆ ಹಚ್ಚಿದ ಈರುಳ್ಳಿಯನ್ನು ಉದುರಿಸಿ ತಾವಾದಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿದರೆ ಗೋಧಿ ಹಿಟ್ಟಿನ ಖಾರಾ ರೊಟ್ಟಿ ರೆಡಿ. ಅದರ ಮೇಲೆ ಬೆಣ್ಣೆ ಹಾಕಿ ಸೇವಿಸಿದರೆ ಅದರ ಮಜಾವೇ ಬೇರೆ.