ಸಾಯಂಕಾಲದ ತಿನಿಸಿಗೆ ‘ಪಾಲಾಕ್ ಪಕೋಡ’

ಸಾಯಂಕಾಲದ ತಿನಿಸಿಗೆ ‘ಪಾಲಾಕ್ ಪಕೋಡ’

YK   ¦    Nov 20, 2019 03:20:09 PM (IST)
ಸಾಯಂಕಾಲದ ತಿನಿಸಿಗೆ ‘ಪಾಲಾಕ್ ಪಕೋಡ’

ಸೊಪ್ಪಿನ ಖಾದ್ಯ ಅಥವಾ ತಿನಿಸಿರಬಹುದು ಆರೋಗ್ಯಕ್ಕೆ ತುಂಬಾನೇ ಉತ್ತಮ. ಪಾಲಾಕ್ ಸೊಪ್ಪನ್ನು ಬಳಸಿ ರುಚಿಕರವವಾಗಿರುವ ಪಕೋಡವನ್ನು ಸಂಜೆ ಸಮಯಕ್ಕೆ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು:

ಕಡಲೆ ಹಿಟ್ಟು 1 ಕಪ್

ಅಕ್ಕಿ ಹಿಟ್ಟು 2 ಚಮಚ

ಶುಂಠಿ-ಹಸಿ ಮೆಣಸಿಕಾಯಿ ಪೇಸ್ಟ್-1 ಚಟಚ

ಅರಿಶಿನ 1/2ಚಮಚ

ಚಾಟ್ ಮಸಾಲ ½ ಚಮಚ

ಉಪ್ಪು 1 ಚಮಚ

ಬೇಕಿಂಗ್ ಸೋಟಾ ½ ಚಮಚ

ಜೀರಿಗೆ ½ ಚಮಚ

ಪಾಲಾಕ್ 2ಕಪ್

ಮಾಡುವ ವಿಧಾನ: ಕಡಲೆ ಹಿಟ್ಟು, ಅರಿಶಿನ, ಅಕ್ಕಿಹಿಟ್ಟು, ಶುಂಠಿ-ಹಸಿ ಮೆಣಸಿಕಾಯಿ ಪೇಸ್ಟ್, ಚಾಟ್ ಮಸಾಲ, ಉಪ್ಪು, ಬೇಕಿಂಗ್ ಸೋಡಾ, ಜೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಕಟ್ ಮಾಡಿ ಇಟ್ಟುಕೊಂಡಿರುವ ಪಾಲಾಕ್ ಸೊಪ್ಪು ಬೆರೆಸಿ ಬೇಕಾಗುವಷ್ಟು ನೀರು ಹಾಕಿ ಚೆನ್ನಾಗಿ ಕಲಸಿ. ನಂತರ ಕಾದ ಎಣ್ಣೆಯಲ್ಲಿ ಚಿಕ್ಕ ಉಂಡೆ ಮಾಡಿ ಬಿಡಿ. ಇದೀಗ ರುಚಿಕರವಾದ ಪಾಲಾಕ್ ಪಕೋಡ ಸವಿಯಲು ಸಿದ್ಧ.