ವೆಜ್ ಮಿಕ್ಸ್ ದೋಸೆಯ ರುಚಿ ನೋಡಿ

ವೆಜ್ ಮಿಕ್ಸ್ ದೋಸೆಯ ರುಚಿ ನೋಡಿ

LK   ¦    Oct 11, 2020 06:03:59 PM (IST)
ವೆಜ್ ಮಿಕ್ಸ್ ದೋಸೆಯ ರುಚಿ ನೋಡಿ

ಆರೋಗ್ಯಕ್ಕೆ ಉತ್ತಮವಾಗಿರುವ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸುವುದು ಜಾಣತನ. ಮನೆಯಲ್ಲಿದ್ದಾಗ ಹೊಸ ರುಚಿಗಳನ್ನು ಮಾಡಬೇಕೆಂದು ಬಯಸುವವರು ವೆಜ್ ಮಿಕ್ಸ್ ದೋಸೆಯನ್ನು ತಯಾರು ಮಾಡಬಹುದಾಗಿದೆ.

ವೆಜ್ ಮಿಕ್ಸ್ ದೋಸೆಗೆ ಬೇಕಾಗುವ ಪದಾರ್ಥಗಳು

ದೋಸೆ ಅಕ್ಕಿ- ಎರಡು ಕಪ್

ಸೌತೆಕಾಯಿ- ಒಂದು (ಚಿಕ್ಕದ್ದು)

ಈರುಳ್ಳಿ- ಒಂದು

ಕ್ಯಾರೆಟ್- ಒಂದು(ಚಿಕ್ಕದ್ದು)

ದಪ್ಪ ಮೆಣಸಿನಕಾಯಿ- ಒಂದು(ಚಿಕ್ಕದ್ದು)

ಕ್ಯಾಬೇಜ್- ಸ್ವಲ್ಪ

ಹಸಿಶುಂಠಿ- ಸ್ವಲ್ಪ

ಹಸಿಮೆಣಸಿನಕಾಯಿ ಪೇಸ್ಟ್- ಒಂದು ಟೇಬಲ್ ಚಮಚೆ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಬೇಯಿಸಲು ಅಗತ್ಯವಿರುವಷ್ಟು

ವೆಜ್ ಮಿಕ್ಸ್ ದೋಸೆ ಮಾಡುವುದು ಹೇಗೆ?

ಹಿಂದಿನ ದಿನ ರಾತ್ರಿಯೇ ಅಕ್ಕಿಯನ್ನು ನೀರಿನಲ್ಲಿ ನೆನೆ ಹಾಕಬೇಕು. ಬೆಳಗ್ಗೆ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಂಡು ಅದಕ್ಕೆ ಸಣ್ಣಗೆ ತುರಿದ ಕ್ಯಾರೆಟ್, ಸೌತೆಕಾಯಿ, ಶುಂಠಿ, ಕ್ಯಾಬೇಜ್‍ನ್ನು ಹಾಗೂ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ ಮತ್ತು ಹಸಿ ಮೆಣಸಿನಕಾಯಿ ಪೇಸ್ಟ್, ಉಪ್ಪು ಹಾಕಿ ಚೆನ್ನಾಗಿ ಕಲೆಸಬೇಕು.

ಆ ನಂತರ ದೋಸೆ ಹಂಚನ್ನು ಕಾಯಿಸಿ ಅದಕ್ಕೆ ಎಣ್ಣೆ ಸವರಿ ದೋಸೆ ಹಾಕಿ ಅದರ ಮೇಲೆ ಎಣ್ಣೆ ಸವರಬೇಕು. ದೋಸೆ ಒಂದು ಕಡೆ ಬೆಂದ ನಂತರ ಇನ್ನೊಂದು ಕಡೆಗೆ ಮಗುಚಿ ಹಾಕಿ ಬೇಯಿಸಿದರೆ ದೋಸೆ ರೆಡಿಯಾದಂತೆಯೇ...