ರಾತ್ರಿ ಊಟಕ್ಕೆ ವೆಜ್ ದಮ್ ಬಿರಿಯಾನಿ ತಯಾರಿಸಿ ನೋಡಿ

ರಾತ್ರಿ ಊಟಕ್ಕೆ ವೆಜ್ ದಮ್ ಬಿರಿಯಾನಿ ತಯಾರಿಸಿ ನೋಡಿ

HSA   ¦    Jun 13, 2020 07:35:48 PM (IST)
ರಾತ್ರಿ ಊಟಕ್ಕೆ ವೆಜ್ ದಮ್ ಬಿರಿಯಾನಿ ತಯಾರಿಸಿ ನೋಡಿ

ಕೊರೋನಾ ಭೀತಿಯಿಂದ ಹೊರಗಡೆ ಹೋಗಿ ತಿನ್ನಲು ಭಯ. ಇದಕ್ಕೆ ಒಳ್ಳೆಯ ಉಪಾಯವೆಂದರೆ ಮನೆಯಲ್ಲೇ ಬೇಕಾಗಿರುವುದನ್ನು ತಯಾರಿಸಿಕೊಂಡು ತಿನ್ನುವುದು. ನಾವಿಲ್ಲಿ ನಿಮಗೆ ವೆಜ್ ದಮ್ ಬಿರಿಯಾನಿ ಬಗ್ಗೆ ತಿಳಿಸಲಿದ್ದೇವೆ.

ಬೇಕಾಗುವ ಸಾಮಗ್ರಿಗಳು

1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್

1 ಚಮಚ ಬಿರಿಯಾನಿ ಮಸಾಲ ಹುಡಿ ಅಥವಾ ಗರಂ ಮಸಾಲ

1/3 ಚಮಚ ಕೆಂಪು ಮೆಣಸಿನ ಹುಡಿ

1/8 ಚಮಚ ಅರಶಿನ

1 ಕಪ್ ಮೊಸರು

4 ಚಮಚ ತುಪ್ಪ

ಕೇಸರಿ ಎಸಲು ಕೆಲವು

3 ಚಮಚ ಹಾಲು ಅಥವಾ ಕೇಸರಿ ನೆನೆಸಿಟ್ಟ ನೀರು

ಒಣ ದ್ರಾಕ್ಷಿ

ಗೋಡಂಬಿ

 

ಹುರಿದ ಈರುಳ್ಳಿ

ಒಂದು ದೊಡ್ಡ ಈರುಳ್ಳಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಅದನ್ನು ಹುರಿದು ತೆಗೆದಿಡಬೇಕು.

ತರಕಾರಿ

ಮಧ್ಯಮ ಗಾತ್ರದ ಹೂಕೋಸು

1 ದೊಡ್ಡ ಬಟಾಟೆ

1 ದೊಡ್ಡ ಕ್ಯಾರೇಟ್

1 ಹಿಡಿ ಹಸಿ ಬಟಾಣಿ

4-5 ಬೀನ್ಸ್

11/2 ಚಮಚ ಪುದೀನಾ ಎಲೆಗಳು

2 ಚಮಚ ಕೊತ್ತಂಬರಿ ಸೊಪ್ಪು ಕತ್ತರಿಸಿಕೊಂಡಿರುವುದು.

2 ಹಸಿ ಮೆಣಸು

 

ಒಣ ಮಸಾಲೆಗಳು

2 ಇಂಚು ದಾಲ್ಚಿನಿ

4 ಹಸಿರು ಏಲಕ್ಕಿ

1 ಕಪ್ಪು ಏಲಕ್ಕಿ

1 ನಕ್ಷತ್ರ ಹೂ

6 ಲವಂಗ

1 ಲವಂಗದ ಎಲೆ

½ ಚಮಚ ಜೀರಿಗೆ

 

ಅಕ್ಕಿ ಬೇಯಿಸಲು

11/2 ಕಪ್ ಬಾಸ್ಮತಿ ಅಕ್ಕಿ

¼ ಚಮಚ ಜೀರಿಗೆ

1 ಲವಂಗ ಎಲೆ

ಉಪ್ಪು

 

ತಯಾರಿಸುವ ವಿಧಾನ

  1. ಮೊದಲಿಗೆ ಈರುಳ್ಳಿ ಸಿಪ್ಪೆ ತೆಗೆದು ಅದನ್ನು ಕತ್ತರಿಸಿಕೊಂಡು ಎಣ್ಣೆಯಲ್ಲಿ ಬಂಗಾರ ಬಣ್ಣಕ್ಕೆ ಬರುವ ತನಕ ಕರಿಯಿರಿ. ಇದನ್ನು ಬದಿಗೆ ತೆಗೆದಿಡಿ.
  2. ಇದೇ ಬಾಣಲೆಗೆ ಮಸಾಲೆ ಹಾಕಿಕೊಂಡು ಅದನ್ನು ಹುರಿಯಿರಿ.
  3. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತು ಅದರ ಘಾಟು ಹೋಗುವ ತನಕ ಹುರಿಯಿರಿ.
  4. ಈಗ ಬಟಾಟೆ ಮತ್ತು ಇತರ ತರಕಾರಿಗಳನ್ನು ಹಾಕಿ ಮತ್ತು 2-3 ನಿಮಿಷ ಕಾಲ ಹುರಿಯಿರಿ.
  5. ಇದಕ್ಕೆ ಅರಶಿನ ಮಸಾಲೆ ಹುಡಿ ಮತ್ತು ಕೆಂಪು ಮೆಣಸಿನ ಹುಡಿ ಹಾಕಿ. ಮಿಶ್ರಣ ಮಾಡಿಕೊಂಡು ಅದನ್ನು ಎರಡು ನಿಮಿಷ ಕಾಲ ಹಾಗೆ ಸರಿಯಾಗಿ ಹುರಿಯಿರಿ.
  6. ಇದಕ್ಕೆ 100 ಮಿ.ಲೀ ಮೊಸರು ಹಾಕಿ ಮಿಶ್ರಣ ಮಾಡಿ. ತರಕಾರಿಯು ಮೆದು ಆಗುವ ತನಕ ಬೇಯಿಸಿ. ಇದಕ್ಕೆ ಮುಚ್ಚಳ ಮುಚ್ಚಿಕೊಂಡು ಬೇಯಿಸಬಹುದು.
  7. ತರಕಾರಿ ಬೇಯಿಸಿದ ಬಳಿಕ ನೀರು ಹಾಕಿ ಅಕ್ಕಿ ಬೇಯಿಸಿ. ಅಕ್ಕಿ ಜತೆಗೆ ಜೀರಿಗೆ ಮತ್ತು ಲವಂಗ ಎಲೆ ಹಾಕಿ. ಅಕ್ಕಿಯು ಹದವಾಗಿ ಬೇಯಲಿ. ಬಿಸಿ ನೀರು ಅಥವಾ ಹಾಲಿನಲ್ಲಿ ಕೇಸರಿ ನೆನೆಯಲು ಹಾಕಿ ಬದಿಗಿಡಿ.
  8. ಬೇಯಿಸಿಕೊಂಡಿರುವ ತರಕಾರಿ, ಮೊಸರು, ಪುದೀನಾ, ಕೊತ್ತಂಬರಿ, ಗೋಡಂಬಿ ಮತ್ತು ದ್ರಾಕ್ಷಿ, ಸ್ವಲ್ಪ ಈರುಳ್ಳಿ ಮಿಶ್ರಣ ಮಾಡಿ. ಇದನ್ನು ನೀವು ಕುಕ್ಕರ್ ನಲ್ಲಿ ಮಾಡಬಹುದು.

 

ದಮ್ ಬಿರಿಯಾನಿ

ತರಕಾರಿ ಮೇಲೆ ಅನ್ನ ಹಾಕಿ. ಇದರ ಬಳಿಕ ½ ಬೇಯಿಸಿದ ತರಕಾರಿ ಮತ್ತು 2 ಚಿಟಿಕೆ ಮಸಾಲೆ ಹುಡಿ ಹಾಕಿ. ಕರಿದ ಈರುಳ್ಳಿ, ಪುದೀನಾ ಮತ್ತು ಕೊತ್ತಂಬರಿ ಹಾಕಿ.

ಮತ್ತೆ ಅನ್ನ ಹಾಕಿ. ಇದಕ್ಕೆ ಕರಿದ ಈರುಳ್ಳಿ, ಪುದೀನಾ ಮತ್ತು ಕೊತ್ತಂಬರಿ ಹಾಗೂ ಕೇಸರಿ ಹಾಲು ಹಾಕಿ. ತುಪ್ಪ ಹಾಕಿ ಗೋಡಂಬಿ ಹುರಿಯಿರಿ. ದ್ರಾಕ್ಷಿ ಜತೆಗೆ ಗೋಡಂಬಿ ಹಾಕಿ ಮತ್ತು ಇದರ ಬಳಿಕ ಅನ್ನ ಹಾಕಿ ಸ್ವಚ್ಛ ಬಟ್ಟೆಯಿಂದ ಪಾತ್ರೆ ಮುಚ್ಚಿ.

ಈಗ ದಮ್ ಪಾತ್ರೆಯಲ್ಲಿ 5 ನಿಮಿಷ ಹದ ಬೆಂಕಿಯಲ್ಲಿ ಹಾಗೆ ಬಿಡಿ.

ಈ ಬಿರಿಯಾನಿಯನ್ನು ಬಿಸಿ ಬಿಸಿಯಾಗಿ ಬಡಿಸಿ.