ಕರಾವಳಿಗರ ಫೇಮಸ್ ಬೊಂಡಾಸ್ ಚಿಲ್ಲಿ ಮಾಡಿನೋಡಿ

ಕರಾವಳಿಗರ ಫೇಮಸ್ ಬೊಂಡಾಸ್ ಚಿಲ್ಲಿ ಮಾಡಿನೋಡಿ

HSA   ¦    Sep 09, 2020 11:37:56 AM (IST)
ಕರಾವಳಿಗರ ಫೇಮಸ್ ಬೊಂಡಾಸ್ ಚಿಲ್ಲಿ ಮಾಡಿನೋಡಿ

ಕರಾವಳಿಗರಿಗೆ ಬೊಂಡಾಸ್ ಎಂದರೆ ಪಂಚಪ್ರಾಣ, ಅದಕ್ಕಾಗಿ ಅವರು ಅದನ್ನು ವಿವಿಧ ರೀತಿಯ ಖಾದ್ಯವಾಗಿ ಬಳಕೆ ಮಾಡುವರು. ಅದರಲ್ಲೂ ಬೊಂಡಾಸ್ ಚಿಲ್ಲಿ ತುಂಬಾ ಜನಪ್ರಿಯವಾಗಿರುವಂತದ್ದಾಗಿದೆ.

ಬೊಂಡಾಸ್ ಚಿಲ್ಲಿ ಮಾಡುವ ವಿಧಾನ

ಬೊಂಡಾಸ್ ನ್ನು ಸರಿಯಾಗಿ ತೊಳೆದು ಅರಶಿನ ಹಾಕಿ ಬೆರೆಸಿ

ಇದಕ್ಕೆ ಈಗ ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಹುಡಿ, ಕರಿಮೆಣಸಿನ ಹುಡಿ, ಕಾರ್ನ್ ಹುಡಿ ಹಾಕಿಕೊಂಡು ಬೆರೆಸಿಕೊಂಡು ಹಾಗೆ 30 ನಿಮಿಷ ಕಾಲ ಬಿಡಿ.

ಇದರ ಬಳಿಕ ನೀವು ಬೊಂಡಾಸ್ ನ್ನು ಎಣ್ಣೆಯಲ್ಲಿ 7-10 ನಿಮಿಷ ಕಾಲ ಕರಿಯಿರಿ. ಬೊಂಡಾಸ್ ನ್ನು ಬೇರೆ ಪಾತ್ರೆಗೆ ಹಾಕಿಡಿ.

ಈಗ ಎಣ್ಣೆಗೆ ಕತ್ತರಿಸಿಕೊಂಡ ಈರುಳ್ಳಿ, ಕ್ಯಾಪ್ಸಿಕಂ, ಹಸಿ ಮೆಣಸು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ. ಇದನ್ನು ಹಾಗೆ ಮಿಶ್ರಣ ಮಾಡಿಕೊಂಡ ಬಳಿಕ ಟೊಮೆಟೊ ಹಾಕಿ. ಸ್ವಲ್ಪ ಹೊತ್ತು ಬಿಟ್ಟು ಕರಿದ ಬೊಂಡಾಸ್ ಹಾಗೂ ಉಪ್ಪು ಹಾಕಿ.

ಸ್ವಲ್ಪ ಹೊತ್ತು ತಿರುಗಿಸಿದ ಬಳಿಕ ತೆಗೆಯಿರಿ. ಈಗ ನಿಮ್ಮ ಬೊಂಡಾಸ್ ಚಿಲ್ಲಿ ತಯಾರಾಗಿರುವುದು.