ಕೊಡಗಿನ ಸ್ವಾದಿಷ್ಟ ಹುತ್ತರಿ ತಂಬಿಟ್ಟಿನ ರುಚಿನೋಡಿ!

ಕೊಡಗಿನ ಸ್ವಾದಿಷ್ಟ ಹುತ್ತರಿ ತಂಬಿಟ್ಟಿನ ರುಚಿನೋಡಿ!

LK   ¦    Nov 30, 2020 04:37:33 PM (IST)
ಕೊಡಗಿನ ಸ್ವಾದಿಷ್ಟ ಹುತ್ತರಿ ತಂಬಿಟ್ಟಿನ ರುಚಿನೋಡಿ!

ಕೊಡಗಿನ ಸುಗ್ಗಿ ಹಬ್ಬ ಹುತ್ತರಿಯ ವಿಶೇಷ ತಿನಿಸು ತಂಬಿಟ್ಟು. ಸಾಮಾನ್ಯವಾಗಿ ತಂಬಿಟ್ಟನ್ನು ಎಲ್ಲೆಡೆಯೂ ಮಾಡುತ್ತಾರೆ. ಆದರೆ ಕೊಡಗಿನಲ್ಲಿ ಅದರಲ್ಲೂ ಹುತ್ತರಿ ಹಬ್ಬದ ಸಮಯದಲ್ಲಿ ಮಾಡುವ ತಂಬಿಟ್ಟು ವಿಭಿನ್ನವಾಗಿದ್ದು, ಸ್ವಾದಿಷ್ಟಮಯವಾಗಿರುತ್ತದೆ. ಈ ತಂಬಿಟ್ಟನ್ನು ತಯಾರು ಮಾಡುವುದು ಅಷ್ಟೇನು ಕಷ್ಟವಲ್ಲ. ಕೊಡಗಿನಲ್ಲಿ ತಂಬಿಟ್ಟು ಹಿಟ್ಟನ್ನು ಎಲ್ಲೆಡೆ ಮಾರಾಟ ಮಾಲಾಗುತ್ತದೆ. ಅದನ್ನು ತಂದು ಮನೆಯಲ್ಲಿಯೇ ಮಾಡುತ್ತಾರೆ. ಈ ತಂಬಿಟ್ಟು ಪುಡಿ ಸಿಗದಿದ್ದರೆ ತಾವೇ ತಯಾರಿಸಿಕೊಂಡು ಮಾಡಬಹುದಾಗಿದೆ. ಹಾಗಾದರೆ ಈ ತಂಬಿಟ್ಟನ್ನು ಮಾಡುವುದಾದರೂ ಹೇಗೆ ಎಂಬ ವಿವರ ಇಲ್ಲಿದೆ.

ಕುಸಲಕ್ಕಿ- ಒಂದುಕಪ್

ತುಪ್ಪ- 2ಚಮಚ

ದ್ರಾಕ್ಷಿ- ಸ್ವಲ್ಪ

ಗೋಡಂಬಿ- ಸ್ವಲ್ಪ

ಎಳ್ಳು- ಕಾಲು ಕಪ್

ಏಲಕ್ಕಿ ಪುಡಿ- ಚಿಟಿಕೆಯಷ್ಟು

ಪಚ್ಚೆಬಾಳೆಹಣ್ಣು- 4

ಸಕ್ಕರೆ- ಸಿಹಿಗೆ ಬೇಕಾಗುವಷ್ಟು

ಉಪ್ಪು- ರುಚಿಗೆ ತಕ್ಕಂತೆ

ತೆಂಗಿನತುರಿ- ಅರ್ಧ ಕಪ್

ಹುರಿಗಡಲೆ- ಸ್ವಲ್ಪ

ತಂಬಿಟ್ಟು ಮಾಡುವ ವಿಧಾನ ಹೀಗಿದ್ದು…

ಮೊದಲಿಗೆ ಕುಸಲಕ್ಕಿಯನ್ನು ಕೆಂಪಗೆ ಹುರಿದುಕೊಂಡು ಬಳಿಕ ನುಣ್ಣಗೆ ಪುಡಿಮಾಡಿಕೊಳ್ಳಬೇಕು. ಆ ಪುಡಿಯನ್ನು ತೆಗೆದುಕೊಂಡು ಅದರೊಂದಿಗೆ ಬಾಳೆಹಣ್ಣನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಬಾಳೆಹಣ್ಣು ಸಂಪೂರ್ಣ ಕರಗಿ ಅಕ್ಕಿಪುಡಿಯೊಂದಿಗೆ ಮಿಶ್ರವಾದ ಬಳಿಕ ಸಕ್ಕರೆ, ಕಾಯಿತುರಿ, ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿ ಇದಾದ ಬಳಿಕ ತುಪ್ಪದಲ್ಲಿ ಹುರಿದ  ದ್ರಾಕ್ಷಿ, ಗೋಡಂಬಿ ಹಾಕಿ, ಎಳ್ಳನ್ನು ಬಿಸಿ ಮಾಡಿ ಅದು ಸಿಡಿದ ಬಳಿಕ ಹಾಕಿ, ಜತೆಗೆ ಹುರಿಗಡಲೆಯನ್ನು ಹಾಕಿ ಮಿಶ್ರ ಮಾಡಿ ಬಳಿಕ ತಮಗೆ ಬೇಕಾದ ಅಳತೆಯಲ್ಲಿ ಉಂಡೆಗಳನ್ನು ಮಾಡಿದರೆ ಕೊಡಗಿನ ಹುತ್ತರಿ ತಂಬಿಟ್ಟು ಸವಿಯಲು ರೆಡಿಯಾದಂತೆಯೇ......