ಮನೆಯಲ್ಲಿಯೇ ಮಾಡಿ ಬಿಡಿ ಸುಲಭ ಚಿಕನ್ ಫ್ರೈ

ಮನೆಯಲ್ಲಿಯೇ ಮಾಡಿ ಬಿಡಿ ಸುಲಭ ಚಿಕನ್ ಫ್ರೈ

LK   ¦    Apr 17, 2020 02:20:01 PM (IST)
ಮನೆಯಲ್ಲಿಯೇ ಮಾಡಿ ಬಿಡಿ ಸುಲಭ ಚಿಕನ್ ಫ್ರೈ

ಚಿಕನ್ ಇದ್ದರೆ ಹಲವು ರೀತಿಯ ಖಾದ್ಯಗಳನ್ನು ಮಾಡಿಬಿಡಬಹುದು. ಅದರಲ್ಲೊಂದು ಸುಲಭ ಚಿಕನ್ ಫ್ರೈ. ಇದ್ಯಾವುದಪ್ಪಾ ಸುಲಭ ಚಿಕನ್ ಫ್ರೈ ಅಂತಿರಾ ಹಾಗಿದ್ದರೆ ಮಾಡಿ ರುಚಿ ನೋಡಿ.

ಸುಲಭ ಚಿಕನ್ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು

ಕೋಳಿ ಮಾಂಸ- ಒಂದು ಕೆಜಿ

ಮೈದಾ- ಒಂದು ಚಮಚೆ

ಬೆಣ್ಣೆ- 25ಗ್ರಾಂ

ಕಾಳುಮೆಣಸಿನ ಪುಡಿ- ಚಿಟಿಕೆಯಷ್ಟು

ಕಾರದಪುಡಿ- ಒಂಚು ಚಮಚ

ಟೋಮೆಟೋ- ಒಂದು

ಉಪ್ಪು- ಎರಡು ಟೀ ಚಮಚೆ

ಕೊತ್ತಂಬರಿ ಸೊಪ್ಪು- ಸ್ವಲ್ಪ

ಸುಲಭ ಚಿಕನ್ ಫ್ರೈ ಮಾಡುವ ವಿಧಾನ ಹೀಗಿದೆ..

ಮೊದಲಿಕೆ ಕೋಳಿ ಮಾಂಸವನ್ನು ಚಿಕ್ಕದಾಗಿ ತುಂಡುಗಳನ್ನು ಮಾಡಿ ಚೆನ್ನಾಗಿ ತೊಳೆದಿಟ್ಟುಕೊಳ್ಳಬೇಕು. ಹಾಗೆಯೇ ಟೊಮೆಟೋವನ್ನು ಹಚ್ಚಿಟ್ಟುಕೊಳ್ಳಬೇಕು. ಸ್ಟೌವ್ ನಲ್ಲಿ ಪಾತ್ರೆಯೊಂದನಿಟ್ಟು ಅದಕ್ಕೆ ಬೆಣ್ಣೆಯನ್ನು ಹಾಕಿ ಅದು ಕಾದ ಬಳಿಕ ಮೈದಾವನ್ನು ಹಾಕಿ ಚೆನ್ನಾಗಿ ಕಲಕಬೇಕು. ಅದು ಕಂದು ಬಣ್ಣ ಬಂದ ಬಳಿಕ ಅದಕ್ಕೆ ಟೊಮೆಟೋ ಹಾಕಿ ಚೆನ್ನಾಗಿ ತಿರುಗಿಸಿ, ಆ ನಂತರ ಕಾಳು ಮೆಣಸು, ಕಾರದ ಪುಡಿ ಹಾಕಿ ತಿರುಗಿಸಿ ನಂತರ ಕೋಳಿ ಮಾಂಸವನ್ನು ಹಾಕಿ, ಉಪ್ಪು ಹಾಕಿ. ನಂತರ ಮಾಂಸದಲ್ಲಿರುವ ನೀರು ಆವಿಯಾಗುವ ತನಕ ಚೆನ್ನಾಗಿ ತಿರುಗಿಸುತ್ತಾ ಬೇಯಿಸಿ. ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಇಳಿಸಿದರೆ ಸುಲಭ ಚಿಕನ್ ಫ್ರೈ ರೆಡಿಯಾದಂತೆಯೇ...