ಚಾ ಜತೆಗಿರಲಿ ಬಿಸಿ ಕ್ಯಾರೆಟ್ ವಡೆ

ಚಾ ಜತೆಗಿರಲಿ ಬಿಸಿ ಕ್ಯಾರೆಟ್ ವಡೆ

LK   ¦    Dec 12, 2020 11:34:52 AM (IST)
ಚಾ ಜತೆಗಿರಲಿ ಬಿಸಿ ಕ್ಯಾರೆಟ್ ವಡೆ

ಚಾದ ಜತೆಗೆ ಸೇವಿಸೋದಕ್ಕೆ ಬಿಸಿಯಾದ ಏನಾದರು ತಿಂಡಿ ಬೇಕು ಅದು ಹೊಸದಾಗಿರಬೇಕು ಎಂದು ಬಯಸುವವರು ಕ್ಯಾರೆಟ್ ವಡೆಯನ್ನು ಮಾಡಿ ಸವಿಯಬಹುದಾಗಿದೆ.

ಕ್ಯಾರೆಟ್ ವಡೆಗೆ ಬೇಕಾಗುವ ಪದಾರ್ಥಗಳು

ಕ್ಯಾರೆಟ್- ಎರಡು

ಕಡ್ಲೆಬೇಳೆ- ಒಂದು ಬಟ್ಟಲು

ಈರುಳ್ಳಿ- ಎರಡು

ಚಕ್ಕೆ- ಚಿಕ್ಕ ಚೂರು

ಸೋಂಪು- ಅರ್ಧ ಚಮಚೆ

ಓಮ- ಅರ್ಧ ಚಮಚೆ

ಲವಂಗ- ಎರಡು

ಹಸಿಮೆಣಸು- ಐದು

ಕೊತ್ತಂಬರಿ ಸೊಪ್ಪು- ಸ್ವಲ್ಪ

ಕರಿಬೇವುಸೊಪ್ಪು- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಕರಿಯಲು ಅಗತ್ಯವಿರುವಷ್ಟು

ಕ್ಯಾರೆಟ್ ವಡೆ ಮಾಡುವುದು ಹೇಗೆ?

ಮೊದಲಿಗೆ ಕಡ್ಲೆ ಬೇಳೆಯನ್ನು ನೀರಿನಲ್ಲಿ ನೆನೆ (ಕನಿಷ್ಟ ಅರ್ಧಗಂಟೆ) ಹಾಕಿಟ್ಟುಕೊಳ್ಳಬೇಕು. ಇನ್ನೊಂದೆಡೆ ಕ್ಯಾರೆಟ್‍ನ್ನು ಚಿಕ್ಕದಾಗಿ ತುರಿದುಕೊಳ್ಳಬೇಕು. ಮತ್ತೊಂದಡೆ ಈರುಳ್ಳಿ, ಹಸಿಮೆಣಸನ್ನು ಹಚ್ಚಿಕೊಳ್ಳಬೇಕು. ಆ ನಂತರ ನೆನೆ ಹಾಕಿದ್ದ ಕಡ್ಲೆ ಬೇಳೆಯನ್ನು ಬಸಿದು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿ ತೆಗೆದು ಅದನ್ನು ಒಂದು ಪಾತ್ರೆಗೆ ಹಾಕ ಬೇಕು. ಬಳಿಕ ಮಿಕ್ಸಿಗೆ ಚಕ್ಕೆ, ಓಮ, ಲವಂಗ, ಸೋಂಪನ್ನು ಹಾಕಿ ಪುಡಿ ಮಾಡಿ  ಅದೇ ಪಾತ್ರೆಗೆ ಹಾಕಬೇಕು. ನಂತರ ಹಚ್ಚಿದ ಈರುಳ್ಳಿ, ಕ್ಯಾರೆಟ್ ತುರಿ, ಕೊತ್ತಂಬರಿ, ಕರಿಬೇವು ಸೊಪ್ಪನ್ನು ಸೇರಿಸಿ ಚೆನ್ನಾಗಿ ಗಟ್ಟಿಯಾಗಿ ಕಲೆಸಿ ವಡೆಯ ಮಾದರಿಯಲ್ಲಿ ತಟ್ಟಿ ಎಣ್ಣೆಯಲ್ಲಿ ಹಾಕಿ ಕರಿದು ತೆಗೆದರೆ ಕ್ಯಾರೆಟ್ ವಡೆ ಸೇವಿಸಲು ರೆಡಿ.