ರುಚಿಯಾದ ಥಾಯ್ ಪೈನಾಪಲ್ ರೈಸ್

ರುಚಿಯಾದ ಥಾಯ್ ಪೈನಾಪಲ್ ರೈಸ್

Keerthana Bhat   ¦    Sep 16, 2020 07:17:18 PM (IST)
ರುಚಿಯಾದ ಥಾಯ್ ಪೈನಾಪಲ್ ರೈಸ್

ಫ್ರೈಡ್ ರೈಸ್, ಗೀ ರೈಸ್ ಹೀಗೆ ನಾವು ಹಲವು ಬಗೆಯ ರೈಸ್ ಹಾಗೂ ಬಾತ್‍ಗಳನ್ನ ದಿನನಿತ್ಯ ಮಾಡಿ ತಿನ್ನುತ್ತೇವೆ. ಆದರೆ ಹಣ್ಣಿನಿಂದ ಕೂಡ ರೈಸ್ ಮಾಡಬಹುದು ಎನ್ನುವುದಕ್ಕೆ ಇರುವ ಉದಾಹರಣೆ ಥಾಯ್ ಪೈನಾಪಲ್ ರೈಸ್.

ಬೇಕಾಗುವ ಸಾಮಾಗ್ರಿಗಳು

250 ಗ್ರಾಂ ಅಕ್ಕಿ, ಸಣ್ಣಗೆ ಹೆಚ್ಚಿದ ಈರುಳ್ಳಿ, 2 ಹೆಚ್ಚಿದ ಶುಂಠಿ, 5 ತಾಜಾ ಅರಶಿನ,  ಕರಿಬೇವಿನ ಎಲೆ, 2 ಲೆಮನ್ ಗ್ರಾಸ್, 100 ಮಿ.ಲೀ. ತೆಂಗಿನ ಹಾಲು, ಉಪ್ಪು, ಮಸಾಲೆ ಹುಡಿ, 40 ಅನಾನಸು ತುಂಡುಗಳು, 20 ಮಿ.ಲೀ. ಎಣ್ಣೆ, 300 ಮಿ.ಲೀ ನೀರು. ಒಂದು ತಾಜಾ ಅನಾನಸು

ಮಾಡುವ ವಿಧಾನ

ಮೊದಲು ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ಹಾಕಿ ನೆನೆಯಲು ಬಿಡಿ.

ನಂತರ ಒಂದು ಪಾನ್‍ಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಮಾಡಿ. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಕೈಯಾಡಿಸಿ. ನಂತರ ಅದಕ್ಕೆ ಶುಂಠಿ, ಕರಿಬೇವಿನ ಎಲೆ, ಪುಡಿಮಾಡಿದ ತಾಜಾ ಅರಶಿನ, ಕತ್ತರಿಸಿದ ಲೆಮನ್ ಗ್ರಾಸ್ ಹಾಕಿ ಬೇಯಿಸಿ. ನಂತರ ನೆನೆಸಿದ ಅಕ್ಕಿ ಹಾಕಿ ಅದಕ್ಕೆ ಮಸಾಲೆ ಹುಡಿ, ಅರಶಿನ ಹುಡಿ, ರುಚಿಗೆ ಬೇಕಾದಷ್ಟು ಉಪ್ಪು ಹಾಕಬೇಕು, ಸ್ವಲ್ಪ ಸಮಯದ ನಂತರ ತೆಂಗಿನ ಹಾಲು, ಅನಾನಸು ತುಂಡುಗಳು ಮತ್ತು ನೀರು ಹಾಕಿ ಗಟ್ಟಿಯಾಗಿ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಬೇಕು.

ಈಗ ಅನನಾಸ್ ಅನ್ನು ಬ್ಯಾರೆಲ್ ಆಕಾರದಂತೆ ಕಟ್ ಮಾಡಿಕೊಂಡು, ಅದಕ್ಕೆ ಬೇಯಿಸಿದ ಅನ್ನವನ್ನು ತುಂಬಿಸಿ ನಂತರ ಫಾಯಿಲ್ ನಿಂದ ಮುಚ್ಚಿ ಸ್ವಲ್ಪ ಸಮಯ ಬೇಯಿಸಿ.