ತೊಂಡೆ-ಈರುಳ್ಳಿ ಮಿಕ್ಸ್ ಪಕೋಡ ರುಚಿ ನೋಡಿ!

ತೊಂಡೆ-ಈರುಳ್ಳಿ ಮಿಕ್ಸ್ ಪಕೋಡ ರುಚಿ ನೋಡಿ!

LK   ¦    Mar 31, 2020 01:32:52 PM (IST)
ತೊಂಡೆ-ಈರುಳ್ಳಿ ಮಿಕ್ಸ್ ಪಕೋಡ ರುಚಿ ನೋಡಿ!

ಪಕೋಡವನ್ನು ಈರುಳ್ಳಿಯಿಂದಲೇ ಹೆಚ್ಚಾಗಿ ಮಾಡುತ್ತಾರೆ.  ಆದರೆ ಈರುಳ್ಳಿ ಜೊತೆಗೆ ತೊಂಡೆ ಕಾಯಿಯನ್ನು ಮಿಕ್ಸ್ ಮಾಡಿ ಪಕೋಡ ಮಾಡಿದರೆ ತಿನ್ನಲು ಮಜಾ ಇರುತ್ತದೆ. ಹಾಗಾದರೆ ಇದನ್ನು ಮಾಡುವುದು ಹೇಗೆ ಮತ್ತು  ಬೇಕಾಗುವ ಪದಾರ್ಥಗಳ ವಿವರ ಇಲ್ಲಿದೆ.

 

ಬೇಕಾಗುವ ಪದಾರ್ಥಗಳ ವಿವರ

ತೊಂಡೆಕಾಯಿ- ಕಾಲು ಕೆಜಿ

ಈರುಳ್ಳಿ- ಒಂದು

ಶುಂಠಿಪೇಸ್ಟ್- ಒಂದು ಟೀ ಚಮಚ

ಕಾರದ ಪುಡಿ- ಎರಡು ಟೀ ಚಮಚ

ಕಡಲೆ ಪುಡಿ- ಅರ್ಧಪಾವು

ಅಕ್ಕಿ ಪುಡಿ- ಎರಡು ಚಮಚ

ಕಾಳುಮೆಣಸಿನ ಪುಡಿ- ಚಿಟಿಕೆಯಷ್ಟು

ಕೊತ್ತಂಬರಿ- ಬೇಳೆಮಾಡಿದ್ದು ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಕರಿಯಲು ಅಗತ್ಯವಿರುವಷ್ಟು

 

ಮಾಡುವ ವಿಧಾನ ಹೀಗಿದೆ..

ಮೊದಲಿಗೆ ಎಳೆಯ ತೊಂಡೆಕಾಯಿ  ಮತ್ತು ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿ ಒಂದು ಪಾತ್ರೆಗೆ ಹಾಕಬೇಕು. ಅದಕ್ಕೆ  ಕಡ್ಲೆ ಪುಡಿ, ಅಕ್ಕಿ, ಶುಂಠಿಪೇಸ್ಟ್, ಕಾರದ ಪುಡಿ ಸೇರಿದಂತೆ ಎಲ್ಲ ಮಸಾಲೆ ಪುಡಿಯನ್ನು ಹಾಕಿ ಸ್ವಲ್ಪ ನೀರು ಹಾಕಿಕೊಂಡು  ಬೋಂಡದ ಹದಕ್ಕೆ ಕಲೆಸಬೇಕು. ನಂತರ ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿಟ್ಟುಕೊಂಡು ಎಣ್ಣೆಗೆ ಹಾಕಿ ಕರಿದರೆ ಗರಿಗರಿಯಾದ ತೊಂಡೆ-ಈರುಳ್ಳಿ ಮಿಕ್ಸ್ ಪಕೋಡ ಸೇವಿಸಲು ರೆಡಿ.