ಬೈಹುಲ್ಲಿನ ಬಂಗುಡೆ ಫ್ರೈ ಅದ್ಭುತ ರುಚಿ ನೋಡಲೇಬೇಕು...

ಬೈಹುಲ್ಲಿನ ಬಂಗುಡೆ ಫ್ರೈ ಅದ್ಭುತ ರುಚಿ ನೋಡಲೇಬೇಕು...

HSA   ¦    Jun 05, 2019 12:40:20 PM (IST)
ಬೈಹುಲ್ಲಿನ ಬಂಗುಡೆ ಫ್ರೈ ಅದ್ಭುತ ರುಚಿ ನೋಡಲೇಬೇಕು...

ತುಂಬಾ ಹಳೆ ಶೈಲಿಯ ಅಡುಗೆ ಮಾಡುವುದು ಇಂದಿನ ದಿನಗಳಲ್ಲಿ ತುಂಬಾ ಕಡಿಮೆಯಾಗುತ್ತಿದೆ. ಆದರೆ ಇಲ್ಲೊಂದು ವಿಶೇಷ ರೀತಿಯ ಬೈಹುಲ್ಲು ಹಾಕಿಕೊಂಡು ಬಂಗುಡೆ ಫ್ರೈ ಮಾಡಬಹುದು. ಅದನ್ನು ನೀವು ಈ ಲೇಖನದ ಮೂಲಕ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು
2-3 ಬಂಗುಡೆ
ಹಸಿ ಮೆಣಸಿನ ಕಾಯಿ(ಖಾರಕ್ಕೆ ಬೇಕಾದಷ್ಟು)
ಸ್ವಲ್ಪ ಶುಂಠಿ
ಒಂದು ಚಮಚ ಜೀರಿಗೆ
ಪುದೀನಾ, ಕೊತ್ತಂಬರಿ(ಅಗತ್ಯವಿದ್ದರೆ)
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಹುಣಸೆ ಹುಳಿ

ಚಿಟಿಕೆ ಅರಶಿನ

ತಯಾರಿಸುವ ವಿಧಾನ
ಮೀನು ಬಿಟ್ಟು ಬೇರೆಲ್ಲಾ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿಕೊಂಡು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಶುಚಿಗೊಳಿಸುವ ಬಂಗುಡೆ ಮೀನಿಗೆ ಇದನ್ನು ಹಚ್ಚಿಕೊಳ್ಳಿ. ಒಂದು ಅರ್ಧ ಗಂಟೆ ಕಾಲ ಹಾಗೆ ಇರಲಿ. ಇದರ ಬಳಿಕ ಬಂಗುಡೆಯನ್ನು ಬಾಳೆ ಎಲೆಯಲ್ಲಿ ಕಟ್ಟಿ ಬೈಹುಲ್ಲು ಹಾಕಿದ ಬೆಂಕಿಯಲ್ಲಿ ಹಾಕಿಬಿಡಿ. 10-15 ನಿಮಿಷ ಹಾಗೆ ಎರಡು ಬದಿ ಬದಲಿಸಿ. ಬೆಂದ ಬಳಿಕ ತೆಗೆದರೆ ಅದ್ಭುತ ರುಚಿ ಸಿಗುವುದು.