ಬಾಯಲ್ಲಿ ನೀರೂರಿಸುವ ಪನ್ನೀರ್ ಎಗ್ ಫ್ರೈ

ಬಾಯಲ್ಲಿ ನೀರೂರಿಸುವ ಪನ್ನೀರ್ ಎಗ್ ಫ್ರೈ

LK   ¦    Mar 15, 2019 11:21:08 AM (IST)
ಬಾಯಲ್ಲಿ ನೀರೂರಿಸುವ ಪನ್ನೀರ್ ಎಗ್ ಫ್ರೈ

ಮೊಟ್ಟೆಯಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸಬಹುದಾಗಿದೆ. ಅದರಲ್ಲಿ ಪನ್ನೀರ್ ಎಗ್ ಫ್ರೈ ಕೂಡ ಒಂದಾಗಿದೆ. ಇದನ್ನು ಮಾಡಲು ಬೇಕಾಗುವ ಪದಾರ್ಥಗಳು ಮತ್ತು ವಿಧಾನ ಹೀಗಿದೆ.

ಪನ್ನೀರ್ ಎಗ್ ಫ್ರೈ ತಯಾರಿಸಲು ಬೇಕಾಗುವ ಪದಾರ್ಥಗಳು

ಪನ್ನೀರ್-ಇನ್ನೂರು ಗ್ರಾಂ

ಮೊಟ್ಟೆ-ಒಂದು

ಕಡಲೆಹಿಟ್ಟು- ಒಂದು ಬಟ್ಟಲು

ಸೋಡಾ- ಚಿಟಿಕೆಯಷ್ಟು

ಗರಂಮಸಾಲೆ- ಅರ್ಧ ಚಮಚ

ಕಾರದಪುಡಿ- ಅರ್ಧ ಚಮಚ

ಅರಶಿನ- ಅರ್ಧ ಚಮಚ

ಜೀರಿಗೆಪುಡಿ- ಅರ್ಧಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಕರಿಯಲು ಅಗತ್ಯದಷ್ಟು.

ಪನ್ನೀರ್ ಎಗ್ ಫ್ರೈ ಮಾಡುವ ವಿಧಾನ ಹೀಗಿದೆ.

ಮೊದಲಿಗೆ ಕಡಲೆಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಹಸಿಮೊಟ್ಟೆಯನ್ನು ಸೇರಿಸಿ ಸ್ವಲ್ಪ ನೀರು ಬೆರಸಿ ಮಿಶ್ರಣ ಮಾಡಬೇಕು. ಹಿಟ್ಟನ್ನು ಬಜ್ಜಿ ಮಾಡುವಷ್ಟು ತೆಳ್ಳಗೆ ಮಾಡಿಕೊಂಡು ಅದಕ್ಕೆ ಉಪ್ಪು, ಗರಂ ಮಸಾಲ, ಜೀರಿಗೆ, ಕಾರದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹೀಗೆ ತಯಾರಿಸಿಟ್ಟುಕೊಂಡ ಹಿಟ್ಟಿಗೆ ತುಂಡು ಮಾಡಿದ ಪನ್ನೀರನ್ನು ಸೇರಿಸಬೇಕು. ಬಳಿಕ ತೆಗೆದು ಎಣ್ಣೆಯಲ್ಲಿ ಹಾಕಿ ತೆಳು ಕಂದು ಬಣ್ಣ ಬರುವವರೆಗೆ ಹುರಿದು ತೆಗೆದರೆ ಪನ್ನೀರ್ ಎಗ್ ಫ್ರೈ ರೆಡಿಯಾದಂತೆಯೇ.. ಅಗತ್ಯವಿದ್ದರೆ ಅದರ ಮೇಲೆ ನಿಂಬೆ ರಸ ಮತ್ತು ಹಚ್ಚಿದ ಈರುಳ್ಳಿಯನ್ನು ಉದುರಿಸಬಹುದು.