ಬಗೆ ಬಗೆ ತರಕಾರಿಗಳ ಅವಿಲ್

ಬಗೆ ಬಗೆ ತರಕಾರಿಗಳ ಅವಿಲ್

Keerthana Bhat   ¦    Sep 30, 2020 12:15:51 PM (IST)
ಬಗೆ ಬಗೆ ತರಕಾರಿಗಳ ಅವಿಲ್

ಸಸ್ಯಹಾರಿಗಳಿಗೆ ತರಕಾರಿಗಳ ಪದಾರ್ಥ ಎಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ಈ ಅವಿಲ್ ಕೂಡ ಬಗೆ ಬಗೆಯ ತರಿಕಾರಿಗಳನ್ನು ಒಗ್ಗೂಡಿಸಿ ಮಾಡುವ ಪದಾರ್ಥ. ಇದು ಪುತ್ತೂರು, ಸುಳ್ಳ ಬಾಗದ ಫೇವರೆಟ್ ಡಿಶ್ ಎಂದರೆ ತಪ್ಪಾಗಲಾರದು.

ಬೇಕಾದ ಸಾಮಾಗ್ರಿಗಳು

ತರಕಾರಿ: ಬೀನ್ಸ್, ಸೌತೆ, ಕ್ಯಾರೆಟ್, ತೊಂಡೆಕಾಯಿ, ಕುಂಬಳಕಾಯಿ, ಬಟಾಟೆ, ಬಟಾಣಿ, ಚೀನಿಕಾಯಿ, ಜೀರಿಗೆ,  ಕರಿಬೇವಿನ ಸೊಪ್ಪು, ಕಾಯಿಮೆಣಸು, ಮಜ್ಜಿಗೆ, ತೆಂಗಿನ ಎಣ್ಣೆ

ಮಾಡುವ ವಿಧಾನ

ತರಕಾರಿಗಳನ್ನು ಉದ್ದಗೆ ಕಟ್ ಮಾಡಿ ಬೇಯಿಸಬೇಕು. ನಂತರ ತೆಂಗಿನತುರಿ, ಕಾಯಿಮೆಣಸು, ಜೀರಿಗೆ ಹಾಕಿ ನುಣ್ಣಗೆ ರುಬ್ಬಬೇಕು. ಬೆಂದ ತರಕಾರಿಗೆ ರುಬ್ಬಿದ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಬೇಕು, ಮಜ್ಜಿಗೆ ಹಾಕಿ ಅದಕ್ಕೆ ಕರಿಬೇವು ಸೊಪ್ಪು ಹಾಕಬೇಕು. ಕುದಿ ಬಂದ ನಂತರ ಗ್ಯಾಸ್ ಬಂದ್ ಮಾಡಿ ತೆಂಗಿನ ಎಣ್ಣೆ ಹಾಕಿ ಮುಚ್ಚಿಡಬೇಕು.