ಮನೆಯಲ್ಲೇ ಮಾಡಿ ಕುಡಿಯಿರಿ ಅಂಜೂರ ಮಿಲ್ಕ್ ಷೇಕ್

ಮನೆಯಲ್ಲೇ ಮಾಡಿ ಕುಡಿಯಿರಿ ಅಂಜೂರ ಮಿಲ್ಕ್ ಷೇಕ್

LK   ¦    Oct 16, 2020 04:05:55 PM (IST)
ಮನೆಯಲ್ಲೇ ಮಾಡಿ ಕುಡಿಯಿರಿ ಅಂಜೂರ ಮಿಲ್ಕ್ ಷೇಕ್

ದೇಹದ ಆರೋಗ್ಯ ಕಾಪಾಡುವಲ್ಲಿ ವಿವಿಧ ಹಣ್ಣುಗಳ ಜ್ಯೂಸ್ ಪ್ರಮುಖ ಪಾತ್ರ ವಹಿಸುತ್ತವೆ. ಈಗಿನ ಪರಿಸ್ಥಿತಿಯಲ್ಲಿ ಹೊರಗೆ ಹೋಗಿ ಏನನ್ನೂ ಕುಡಿಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಮನೆಯಲ್ಲಿಯೇ ಜ್ಯೂಸ್, ಮಿಲ್ಕ್ ಷೇಕ್‍ಗಳನ್ನು ಮಾಡಿ ಕುಡಿಯುವುದು ಜಾಣತನವಾಗಿದೆ. ಅಂಜೂರ ಆರೋಗ್ಯಕರವಾಗಿದ್ದು ಅದರಿಂದ ಮಿಲ್ಕ್ ಷೇಕ್ ತಯಾರಿಸುವುದರ ವಿವರ ಇಲ್ಲಿದೆ.

ಬೇಕಾಗುವ ಪದಾರ್ಥಗಳು

ಅಂಜೂರ- ನಾಲ್ಕು

ಹಾಲು- ಎರಡು ಲೋಟ

ಸಕ್ಕರೆ- ನಾಲ್ಕು ಟೀ ಚಮಚೆ

ಗೋಡಂಬಿ ಪುಡಿ – ಎರಡು ಟೀ ಚಮಚೆ

ಬಾದಾಮಿ ಪುಡಿ- ಎರಡು ಟೀ ಚಮಚೆ

ಐಸ್ ಕ್ಯೂಬ್- ಅಗತ್ಯಕ್ಕೆ ತಕ್ಕಂತೆ

ಮಾಡುವುದು ವಿಧಾನ ಹೀಗಿದೆ

ಮೊದಲಿಗೆ ಅಂಜೂರವನ್ನು ಚೆನ್ನಾಗಿ ತೊಳೆದು ಹಾಲಿನಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ನೆನೆಯಲು ಹಾಕಬೇಕು. ಆ ನಂತರ ತೆಗೆದು ಅದನ್ನು ಮಿಕ್ಸಿಗೆ ಹಾಕಿ ಹಾಲು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸಿ ಮಾಡಬೇಕು. ಇದಾದ ಬಳಿಕ ಗೋಡಂಬಿ, ಬಾದಾಮಿ ಸೇರಿಸಿ ಮತ್ತೊಮ್ಮೆ ಎರಡು ಸುತ್ತು ಮಿಕ್ಸಿ ಮಾಡಿ ತೆಗೆದು ಲೋಟಕ್ಕೆ (ಅಗತ್ಯವಿದ್ದರೆ ಐಸ್ ಕ್ಯೂಬ್) ಹಾಕಿದರೆ ಅಂಜೂರ ಮಿಲ್ಕ್ ಷೇಕ್ ರೆಡಿ.