ರಾತ್ರಿ ಊಟಕ್ಕೆ ಜತೆಗಿರಲಿ ಚಿಕನ್ ಲಿವರ್ ಪ್ರೈ

ರಾತ್ರಿ ಊಟಕ್ಕೆ ಜತೆಗಿರಲಿ ಚಿಕನ್ ಲಿವರ್ ಪ್ರೈ

HSA   ¦    Dec 10, 2019 08:40:42 PM (IST)
ರಾತ್ರಿ ಊಟಕ್ಕೆ ಜತೆಗಿರಲಿ ಚಿಕನ್ ಲಿವರ್ ಪ್ರೈ

ಚಿಕನ್ ಲಿವರ್ ಪ್ರೈ ತುಂಬಾ ರುಚಿಕರವಾಗಿದ್ದು, ಇದನ್ನು ತಯಾರಿಸುವುದು ಕೂಡ ತುಂಬಾ ಸುಲಭ. ಇದಕ್ಕೆ ವಿವಿಧ ರೀತಿಯ ಮಸಾಲೆಗಳನ್ನು ಹಾಕಿಕೊಂಡು ತಯಾರಿಸಲಾಗುತ್ತದೆ. ಈ ರುಚಿಕರ ಚಿಕನ್ ಲಿವರ್ ನ್ನು ತಯಾರಿಸಿಕೊಳ್ಳುವುದು ಹೇಗೆ ಎಂದು ತಿಳಿಯುವ.

ಮೂರು ಜನರಿಗೆ ಬಡಿಸಬಹುದಾದಷ್ಟು

ಬೇಕಾಗುವ ಸಾಮಗ್ರಿಗಳು

300 ಗ್ರಾಂ ಚಿಕನ್ ಲಿವರ್

½ ಚಮಚ ಕೊತ್ತಂಬರಿ ಹುಡಿ

1 ಮಧ್ಯಮದ ಗಾತ್ರದ ಈರುಳ್ಳಿ

½ ಚಮಚ ಬೆಳ್ಳುಳ್ಳಿ ಪೇಸ್ಟ್

1 ದೊಡ್ಡ ಟೊಮೆಟೊ

2 ಚಮಚ ತರಕಾರಿ ಎಣ್ಣೆ

1 ಚಮಚ ಟೊಮೆಟೊ ಕೆಚಪ್

½ ಚಮಚ ಜೀರಿಗೆ ಹುಡಿ

½ ಚಮಚ ಗರಂ ಮಸಾಲ ಹುಡಿ

½ ಚಮಚ ಶುಂಠಿ ಪೇಸ್ಟ್

4 ಹಸಿ ಮೆಣಸು

2 ಕೊತ್ತಂಬರಿ ಎಲೆಗಳ ದಂಡು

2 ಚಮಚ ಸೋಯಾ ಸಾಸ್

 

ತಯಾರಿಸುವ ವಿಧಾನ

ಮೊದಲು ಚಿಕನ್ ಲಿವರ್ ನ್ನು ಸರಿಯಾಗಿ ತೊಳೆಯಿರಿ ಮತ್ತು ಸ್ವಚ್ಛ ಮಾಡಿಕೊಳ್ಳಿ. ಇದನ್ನು ಮೂರು ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.

ಮಧ್ಯಮ ಬೆಂಖಿಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಕತ್ತರಿಸಿದ ಹಸಿ ಮೆಣಸು ಹಾಕಿ. ಒಂದು ನಿಮಿಷ ಹುರಿಯಿರಿ. ಇದರ ಬಳಿಕ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ. ಹಗುರ ಕಂದು ಬಣ್ಣಕ್ಕೆ ಬರುವ ತನಕ ಹುರಿಯಿರಿ. ಇದರ ಬಳಿಕ ತುಂಡರಿಸಿದ ಟೊಮೆಟೊ ಹಾಕಿ ಮತ್ತು ಸರಿಯಾಗಿ ಹುರಿಯಿರಿ.

ಇದರ ಬಳಿಕ ಕತ್ತರಿಸಿಕೊಂಡ ಲಿವರ್, ಕೊತ್ತಂಬರಿ, ಜೀರಿಗೆ ಮತ್ತು ಗರಂ ಮಸಾಲ ಹುಡಿ ಹಾಗೂ ಉಪ್ಪು ಹಾಕಿ. ಇದನ್ನು ಹಾಗೆ ಹತ್ತು ನಿಮಿಷ ಕಾಲ ತಿರುಗಿಸುತ್ತಾ ಇರಿ. ಇದರ ಬಳಿಕ ಸೋಯಾ ಸಾಸ್, ಕೆಚಪ್ ಮತ್ತು ಕತ್ತರಿಸಿಕೊಂಡ ಕೊತ್ತಂಬರಿ ಹಾಕಿಕೊಂಡು ಮತ್ತೆ ಹತ್ತು ನಿಮಿಷ ಕಾಲ ತಿರುಗಿಸಿ. ಇದರ ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.